ಸಿದ್ದರಾಮಯ್ಯ ಆರ್‍ಎಸ್‍ಎಸ್ ವಿರೋಧಿ : ರೇಣುಕಾಚಾರ್ಯ
ರಾಯಚೂರು : ಸಂಘ ಪರಿವಾರ ಕತ್ತರಿಸುವ ಕೆಲಸ ಮಾಡಲ್ಲ, ಬದಲಾಗಿ ಜೋಡಣೆ ಮಾಡುತ್ತೆ. ಸಿದ್ದರಾಮಯ್ಯಗೆ ಆರ್‍ಎಸ್‍ಎಸ್ ಬಗ್ಗೆ ಮಾತಾನಡುವ ನೈತಿಕ ಹಕ್ಕಿಲ್ಲ.
ಸಿದ್ದರಾಮಯ್ಯ ಆರ್‍ಎಸ್‍ಎಸ್ ವಿರೋಧಿಯಾಗಿದ್ದು, ಕಾಂಗ್ರೆಸ್‍ನಲ್ಲಿ ನಾಯಕತ್ವದ ಕೊರತೆ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಮಸ್ಕಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿಕೆಗೆಳಿಗೆ ನೀಡಿದರು. ಪ್ರತಾಪ್ ಗೌಡ ಪಾಟೀಲ್ ಮಾರಾಟವಾಗುವ ವ್ಯಕ್ತಿಯಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿ ಕಾಂಗ್ರೆಸ್ ಬಿಟ್ಟು ಬಂದಿದ್ದಾರೆ ಎಂದು ಹೇಳಿದರು.
ಇನ್ನು ಸರ್ಕಾರದಲ್ಲಿ ಬಿ.ವೈ.ವಿಜಯೇಂದ್ರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಅವರು ನಮ್ಮ ಪಕ್ಷದ ಉಪಾಧ್ಯಕ್ಷರಾಗಿದ್ದು, ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.
ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಲ್ಲಿ ಬಿಜೆಪಿ ನಿಶ್ಚಿತವಾಗಿ ಜಯಭೇರಿ ಬಾರಿಸುತ್ತದೆ. ಸಿದ್ದರಾಮಯ್ಯನವರೇ ನೀವೇನೇ ಅಪಪ್ರಚಾರ ಮಾಡಿದರೂ ಬಿಜೆಪಿ ಗೆಲ್ಲುತ್ತದೆ.
ಕಾಂಗ್ರೆಸ್ ರಾಜ್ಯ ಮತ್ತು ದೇಶದಲ್ಲೆಲ್ಲೂ ಅಧಿಕಾರಕ್ಕೆ ಬರಲ್ಲ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ಇದೇ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಿದರೆ ನಾನು ಹುಚ್ಚನಾಗುತ್ತೇನೆ ಎಂದರು.
