ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ? Siddaramaiah saaksha tv
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಆಕ್ರೋಶ ಮುಂದುವರೆದಿದೆ. ಟ್ವಿಟ್ಟರ್ ನಲ್ಲಿ ಬಿಜೆಪಿ ಸಿದ್ದರಾಮಯ್ಯ ಅವರ ಕಾಲೆಳೆದಿದೆ.
ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.
ಅಲ್ಲದೆ ತಲೆಗೆ ಟೋಪಿ ಹಾಕಿದಾಗ ಅಲ್ಪಸಂಖ್ಯಾತ, ಕಂಬಳಿ ಹೊದ್ದುಕೊಂಡರೆ ಒಂದು ಜಾತಿ, ಚುನಾವಣೆ ಬಂದಾಗ ನಾನೂ ಹಿಂದು, ಮುಖ್ಯಮಂತ್ರಿಯಾಗುವ ಆಸೆ ಬಂದಾಗ ದಲಿತ, ಅಧಿಕಾರಕ್ಕಾಗಿ ಎಷ್ಟೊಂದು ವೇಷ, ನಾಟಕ ಎಂದು ಸಿದ್ದರಾಮಯ್ಯ ವಿರುದ್ಧ ಕುಟುಕಿದೆ.
ಸಿದ್ದರಾಮಯ್ಯ ಜೆಡಿಎಸ್ ಕಟ್ಟಿದರಾ? ಇಲ್ಲ, ಪಕ್ಷಾಂತರ ಮಾಡಿದರು. ಸಿದ್ದರಾಮಯ್ಯ ಕಾಂಗ್ರೆಸ್ ಕಟ್ಟಿದರಾ? ಇಲ್ಲ, ದಲಿತ ನಾಯಕರನ್ನು ತುಳಿದರು. ಸಿದ್ದರಾಮಯ್ಯ ರಾಜ್ಯ ಕಟ್ಟಿದರಾ? ಇಲ್ಲ, ಧರ್ಮ ವಿಭಜನೆ ಮಾಡಿದರು ಎಂದು ಕಿಡಿಕಾರಿದೆ.