`ನಾನು ಫ್ರೀ ಆಗಿ ಅಕ್ಕಿ ಕೊಡುವಾಗ ನಮ್ಮಪ್ಪನ ದುಡ್ಡಿನಿಂದ ಕೊಟ್ಟಿಲ್ಲ’
ದಾವಣಗೆರೆ : ನಾನು ಫ್ರೀ ಆಗಿ ಅಕ್ಕಿ ಕೊಡೊವಾಗ ನಮ್ಮಪ್ಪನ ದುಡ್ಡಿನಿಂದ ಕೊಟ್ಟಿಲ್ಲ. ಸರ್ಕಾರದ ದುಡ್ಡಿನಿಂದ ಅಕ್ಕಿ ಕೊಟ್ಟಿದ್ದು.ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನವಂತೆ ಸರ್ಕಾರ ಹಣ ಜನರಿಗೆ ಬಳಕೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆಯ ಸೂರಗೊಂಡನಕೊಪ್ಪದಲ್ಲಿ ನಡೆದ ಸಂತ ಸೇವಲಾಲ್ ಜಯಂತಿ ವೇಳೆ ಮಾತನಾಡಿದ ಅವರು, ನಾನು ಬಸವಣ್ಣನವರ ಅನುಯಾಯಿ. ಮೊದಲು ದೇಶದಲ್ಲಿ ಶ್ರೇಣಿಕೃತ ವ್ಯವಸ್ಥೆ ಇತ್ತು. ಮೊದಲು ನೀವು ವೇದಿಕೆಯಲ್ಲಿ ಹೀಗೆ ಕುರೋ ವಂತೆ ಇರಲಿಲ್ಲ.
ಅದನ್ನ ಅನುಭವ ಮಂಟಪದ ಮೂಲಕ ಜಾರಿಗೆ ತಂದವರು ಬಸವಣ್ಣನವರು. ಈ ವೇದಿಕೆಯಲ್ಲಿ ಲಂಬಾಣಿ ಇದ್ದಾನೆ, ಕುರುಬನು ಇದ್ದಾನೆ, ಜಂಗಮನು ಇದ್ದಾನೆ. ನಾನು ಸಿಎಂ ಇದ್ದಾಗ ಫ್ರೀ ಆಗಿ 7 ಕೆಜಿ ಅಕ್ಕಿ ಕೊಡ್ತಾ ಇದ್ದೆ.
ಈಗ್ಯಾಕೆ ಎರಡು ಕೆಜಿ ಕಡಿಮೆ ಮಾಡಿ ಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ರೇಣುಕಾಚಾರ್ಯ, ಅಕ್ಕಿ ಕಡಿಮೆ ಮಾಡಿದ್ದಕ್ಕೆ ಕೋವಿಡ್ ಕಾರಣ ಎಂದರು.
ಇದರಿಂದ ಗರಂ ಆದ ಸಿದ್ದರಾಮಯ್ಯ, ನಾನು ಫ್ರೀ ಆಗಿ ಅಕ್ಕಿ ಕೊಡೊವಾಗ ನಮ್ಮಪ್ಪನ ದುಡ್ಡಿನಿಂದ ಕೊಟ್ಟಿಲ್ಲ. ಸರ್ಕಾರದ ದುಡ್ಡಿನಿಂದ ಅಕ್ಕಿ ಕೊಟ್ಟಿದ್ದು.
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನವಂತೆ ಸರ್ಕಾರ ಹಣ ಜನರಿಗೆ ಬಳಕೆಯಾಗಬೇಕು ಎಂದು ಹೇಳಿದರು.
ಇನ್ನು ಜಾತಿ ವಿಚಾರದಲ್ಲಿ ಯಾರು ಅಪ್ಲಿಕೇಶನ್ ಹಾಕಿ ಇಂತ ಜಾತಿಯಲ್ಲಿ ಹುಟ್ಟಬೇಕು ಅಂತ ಹುಟ್ಟಲ್ಲ. ನಾನು ಕುರುಬ ಜಾತಿಯಲ್ಲಿ ಹುಟ್ಟಬೇಕು ಅಂತ ಹುಟ್ಟಿದ್ನಾ?.
ಕೆಲ ಪಟ್ಟಭದ್ರ ಹಿತಾಶಕ್ತಿಗಳು ಜಾತಿ ವ್ಯವಸ್ಥೆ ಹುಟ್ಟು ಹಾಕಿದ್ರು. ರೇಣುಕಾಚಾರ್ಯ ಜಂಗಮ ಜಾತಿಯಲ್ಲಿ ಹುಟ್ಟಬೇಕು ಅಂತ ಅಪ್ಲಿಕೇಶನ್ ಹಾಕಿದ್ನಾ?
ಜಂಗಮರ ಕಾಲು ಬೀಳಬೇಕು ಅಂತ ನಡೆದುಕೊಂಡು ಬಂದಿದೆ. ಜಾತಿ ವ್ಯವಸ್ಥೆ ತೆಗೆದ್ರೆ ನೀವು ಕಾಲು ಬಿಳೋದು ತಪ್ಪುತ್ತೆ.
24 ಗಂಟೆಯಲ್ಲಿ 5 ಕಾಂಗ್ರೆಸ್ ಶಾಸಕರು ರಾಜೀನಾಮೆ : ರಮೇಶ್ ಜಾರಕಿಹೊಳಿ
ಅದಕ್ಕೆ ಜಾತಿ ವ್ಯವಸ್ಥೆಯನ್ನ ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ಜಾತಿ ವ್ಯವಸ್ಥೆ ಬಗ್ಗೆ ಟೀಕೆ ಮಾಡಿದರು.
ಶ್ರೀ ಕಟೀಲು ದುರ್ಗಾಪರಮೇಶ್ವರೀ ಕ್ಷೇತ್ರ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









