ADVERTISEMENT
Sunday, June 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಒಬಿಸಿ ಸಮಿತಿಗೆ ಸಿದ್ದರಾಮಯ್ಯ ನೇಮಕ: ವಿಪಕ್ಷಗಳಿಂದ ರಾಜಕೀಯ ಭವಿಷ್ಯದ ಬಗ್ಗೆ ಭಾರಿ ಚರ್ಚೆ

Siddaramaiah's appointment to OBC committee: Huge debate over political future from opposition parties

Shwetha by Shwetha
July 7, 2025
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಕಾಂಗ್ರೆಸ್ ಪಾಳೆಯದಲ್ಲಿ ನಾಯಕತ್ವ ಬದಲಾವಣೆಯ ಬಿಸಿ ಚರ್ಚೆಯಾಗುತ್ತಿರುವಾಗಲೇ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಒಬಿಸಿ ಸಲಹಾ ಮಂಡಳಿಯ (AICC OBC Advisory Council) ಅಧ್ಯಕ್ಷರನ್ನಾಗಿ ದಿಢೀರ್ ನೇಮಕ ಮಾಡಲಾಗಿದೆ. ಈ ನಡೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ವಿರೋಧ ಪಕ್ಷದ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ವಿಭಿನ್ನ ವ್ಯಾಖ್ಯಾನಗಳನ್ನು ಮಾಡಿದ್ದಾರೆ.

ಸಿದ್ದರಾಮಯ್ಯರ ನಿವೃತ್ತಿ ಸಮಯ ಹತ್ತಿರ ಬಂದಿದೆ: ಆರ್. ಅಶೋಕ್

Related posts

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

June 14, 2026
ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

June 14, 2026

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸಿದ್ದರಾಮಯ್ಯ ಅವರ ಈ ಹೊಸ ನೇಮಕಾತಿಯನ್ನು ಅವರ ರಾಜಕೀಯ ಜೀವನದ ಅಂತ್ಯದ ಸಂಕೇತ ಎಂದು ಬಣ್ಣಿಸಿದ್ದಾರೆ. “ಸಿಎಂ ಸಿದ್ದರಾಮಯ್ಯ ನಿವೃತ್ತಿ ಸಮಯ ಹತ್ತಿರ ಬಂದಿದೆ. ನಿವೃತ್ತಿ ಸಮಯ ಹತ್ತಿರ ಬಂದಿದೆ ಎನ್ನುವುದಕ್ಕೆ ಹೈಕಮಾಂಡ್ ರಚನೆ ಮಾಡಿರುವ ಎಐಸಿಸಿ ಓಬಿಸಿ ಸಮಿತಿ ಸಾಕ್ಷಿ” ಎಂದು ಅಶೋಕ್ ಹೇಳಿದ್ದಾರೆ.

ಅವರು ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, “ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ಸೇವೆ ಸಾಕು ರಾಜೀನಾಮೆ ಕೊಟ್ಟು ನಿವೃತ್ತರಾಗಿ ಎಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪರೋಕ್ಷವಾಗಿ ಹೇಳುತ್ತಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ಈ ರಬ್ಬರ್ ಸ್ಟ್ಯಾಂಪ್ ಕುರ್ಚಿ ಇದ್ದರೆಷ್ಟು, ಬಿಟ್ಟರೆಷ್ಟು. ನಿಮಗೆ ಕಿಂಚಿತ್ತಾದರೂ ಸ್ವಾಭಿಮಾನ ಇದ್ದಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುತ್ತಿರಲಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಹಠಾವೋ ಪ್ರಾರಂಭವಾಗಿದೆ: ಛಲವಾದಿ ನಾರಾಯಣಸ್ವಾಮಿ

ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಿದ್ದರಾಮಯ್ಯ ಅವರ ರಾಜೀನಾಮೆ ಖಚಿತ ಎಂದು ಹೇಳಿಕೊಂಡಿದ್ದಾರೆ. “ಸಿಎಂ ಸಿದ್ದರಾಮಯ್ಯ ನವೆಂಬರ್‌ನಲ್ಲಿ ರಾಜೀನಾಮೆ ಕೊಡುವುದು ಖಾತ್ರಿ. ಇನ್ನೊಂದು ಬಜೆಟ್ ಮಂಡನೆಗೆ ಅವಕಾಶ ಕೊಡಿ ಎಂದು ಕೇಳಿದ್ದಾರೆ. ರಾಜ್ಯದಿಂದ ಸಿದ್ದರಾಮಯ್ಯ ಅವರನ್ನು ಹೇಗೆ ಹೊರಗಡೆ ಕಳಿಸಬೇಕು ಅನ್ನೋದು ಶುರುವಾಗಿದೆ” ಎಂದು ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷವು ದೆಹಲಿಗೆ ಕಳುಹಿಸಿದಂತೆ, ಸಿದ್ದರಾಮಯ್ಯ ಅವರನ್ನು ಕೂಡ ದೆಹಲಿಗೆ ಕಳುಹಿಸಲು ಹೈಕಮಾಂಡ್ ಸಿದ್ಧತೆ ನಡೆಸಿದೆ ಎಂದು ಅವರು ಹೋಲಿಸಿದ್ದಾರೆ. “ಖರ್ಗೆಗೆ ಶೆಡ್ ರೆಡಿ ಮಾಡಿದ್ದರು, ಈಗ ಸಿದ್ದರಾಮಯ್ಯಗೂ ಶೆಡ್ ರೆಡಿ ಮಾಡಿದ್ದಾರೆ. ಒಂದು ಹೆಜ್ಜೆ ತೆಗೆದು ಇಟ್ಟರೆ ಶೆಡ್‌ಗೆ ಹೋದಂತೆ” ಎಂದು ವ್ಯಂಗ್ಯವಾಡಿದ್ದಾರೆ.

ಕೇಂದ್ರಕ್ಕೆ ಹೋಗಿ ಏನು ಮಾಡುತ್ತಾರೆ?: ಪ್ರಲ್ಹಾದ್ ಜೋಶಿ

ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರು ಹುಬ್ಬಳ್ಳಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತ್ಯಜಿಸಿ ದೆಹಲಿಗೆ ಬರಲು ಈ ನೇಮಕಾತಿ ಒಂದು ಸಂದೇಶ ಎಂದು ಅರ್ಥೈಸಿದ್ದಾರೆ. “ಸಿಎಂ ಸ್ಥಾನ ತ್ಯಜಿಸಿ ದೆಹಲಿಗೆ ಬನ್ನಿ ಎಂಬ ಸಂದೇಶ ರವಾನಿಸಿದಂತಿದೆ. ಸಿದ್ದರಾಮಯ್ಯಗೆ ಒಳ್ಳೆಯದಾಗಲಿ. ಇಲ್ಲೇ ಸಂಭಾಳಿಸಲು ಸಾಧ್ಯವಾಗ್ತಿಲ್ಲ, ಕೇಂದ್ರಕ್ಕೆ ಹೋಗಿ ಏನು ಮಾಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

“ರಾಷ್ಟ್ರೀಯ ಹಿಂದುಳಿದ ವರ್ಗಕ್ಕೆ ಈಗ ನೇಮಿಸುವ ಉದ್ದೇಶ ಏನಿತ್ತು?” ಎಂದು ಪ್ರಶ್ನಿಸಿದ ಜೋಶಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಇಂಟರ್ನಲ್ ಆಗಿ ನಾನೇ ಮುಂದಿನ ಸಿಎಂ ಅಂತಾ ಸಾಕಷ್ಟು ಜನರಿಗೆ ಹೇಳುತ್ತಿದ್ದಾರೆ” ಎಂದು ಸೂಚಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಿರ್ಧಾರ: ಹೆಚ್​.ಡಿ. ಕುಮಾರಸ್ವಾಮಿ
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ, “ಕಾಂಗ್ರೆಸ್ ಪಕ್ಷದ ನಿರ್ಧಾರದ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ” ಎಂದು ಹೇಳಿದ್ದಾರೆ.

ShareTweetSendShare
Join us on:

Related Posts

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

ಎಚ್‌ಎಂಟಿ ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನೋ ಕಾಲ ಹತ್ತಿರವಾಯಿತೇ? ಕುಮಾರಣ್ಣನ ಮಾಸ್ಟರ್ ಪ್ಲ್ಯಾನ್ ಏನು?

by Shwetha
June 14, 2026
0

ಬೆಂಗಳೂರು: ಒಂದು ಕಾಲದಲ್ಲಿ ಭಾರತದ ಕೈಗಾರಿಕಾ ಕ್ಷೇತ್ರದ ಬೆನ್ನೆಲುಬಾಗಿದ್ದ, ನಂತರ ಕಾಲಕ್ರಮೇಣ ಸೊರಗಿದ್ದ ಹಿಂದೂಸ್ತಾನ್‌ ಮಷೀನ್‌ ಟೂಲ್ಸ್‌ ಅಲಿಯಾಸ್ ಎಚ್‌ಎಂಟಿ ಸಂಸ್ಥೆಗೆ ಈಗ ಹೊಸ ಚೈತನ್ಯ ನೀಡಲು...

ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

ಸಂವಿಧಾನ ಉಳಿಸುವ ಮಾತು ಬಿಡಿ ಮೊದಲು ನಿಮ್ಮ ಜಿಲ್ಲೆಯ ಶಾಲೆಯನ್ನೇ ಉಳಿಸಿ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್ ಅಶೋಕ್ ಗರಂ

by Shwetha
June 14, 2026
0

ಟ್ವಿಟರ್‌ನಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ದೊಡ್ಡ ಭಾಷಣ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಸ್ವಂತ ಜಿಲ್ಲೆಯ ಸರ್ಕಾರಿ ಕಾಲೇಜಿನ ಮೇಲ್ಛಾವಣಿಯನ್ನು ಉಳಿಸಿಕೊಳ್ಳುವ ಯೋಗ್ಯತೆಯೂ...

ಕುಮಾರಕೃಪಾ ಆಯ್ತು ಇನ್ನು ವಿಧಾನಸೌಧಕ್ಕೂ ಕಾದಿದೆಯಾ ಕುತ್ತು? ಡಿಕೆಶಿ ಪ್ಲ್ಯಾನ್ ನೋಡಿ ಕುಮಾರಣ್ಣ ಕಂಗಾಲಾಗಿದ್ದೇಕೆ?

ಕುಮಾರಕೃಪಾ ಆಯ್ತು ಇನ್ನು ವಿಧಾನಸೌಧಕ್ಕೂ ಕಾದಿದೆಯಾ ಕುತ್ತು? ಡಿಕೆಶಿ ಪ್ಲ್ಯಾನ್ ನೋಡಿ ಕುಮಾರಣ್ಣ ಕಂಗಾಲಾಗಿದ್ದೇಕೆ?

by Shwetha
June 14, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಕುಮಾರಕೃಪಾ ಅತಿಥಿಗೃಹದ ವಿಚಾರವಾಗಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳ ಗೃಹ ಕಚೇರಿಯನ್ನಾಗಿ ಈ ಐತಿಹಾಸಿಕ ಕಟ್ಟಡವನ್ನು ಪರಿವರ್ತಿಸುವ ಸರ್ಕಾರದ ನಿರ್ಧಾರದ ವಿರುದ್ಧ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

by Shwetha
June 14, 2026
0

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಸಿನವರ ಮದ್ಯಪಾನದ ಚಟಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಈಗ ಕಠಿಣವಾದ ಕಾನೂನು ಅಸ್ತ್ರವನ್ನು ಪ್ರಯೋಗಿಸಿದೆ. ಇನ್ನು ಮುಂದೆ ಕರ್ನಾಟಕದಲ್ಲಿ...

ಬಿಜೆಪಿ ಬಿಟ್ಟು ಹಸ್ತ ಹಿಡಿಯುತ್ತಾರಾ ಪ್ರಮೋದ್ ಮಧ್ವರಾಜ್? ಕರಾವಳಿ ರಾಜಕೀಯದಲ್ಲಿ ದಿಢೀರ್ ಸಂಚಲನ ಮೂಡಿಸಿದ ಹೇಳಿಕೆಯ ಹಿಂದಿನ ರಹಸ್ಯವೇನು?

ಬಿಜೆಪಿ ಬಿಟ್ಟು ಹಸ್ತ ಹಿಡಿಯುತ್ತಾರಾ ಪ್ರಮೋದ್ ಮಧ್ವರಾಜ್? ಕರಾವಳಿ ರಾಜಕೀಯದಲ್ಲಿ ದಿಢೀರ್ ಸಂಚಲನ ಮೂಡಿಸಿದ ಹೇಳಿಕೆಯ ಹಿಂದಿನ ರಹಸ್ಯವೇನು?

by Shwetha
June 14, 2026
0

ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram