ಬೀದಿ ನಾಯಿಗಳ ಬಗ್ಗೆ ಮಾಡುವ ಟ್ವೀಟ್ ನನಗೆ ಅಂದು ಕೊಂಡ್ರೆ, ಅದಕ್ಕೆ ನಾನು ಜವಾಬ್ದಾರನಲ್ಲ – ಸಿದ್ಧಾರ್ಥ್
ಸಮಂತಾ ನಾಗಚೈತನ್ಯ ತಮ್ಮ 10 ವರ್ಷಗಳ ಸ್ನೇಹ , ಪ್ರೀತಿ , 4 ವರ್ಷಗಳ ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಟ್ಟಿದ್ದಾರೆ. ಮದುವೆಯಾದ 4 ವರ್ಷಗಳ ಬಳಿಕ ವಿಚ್ಛೇಧನ ಪಡೆದುಕೊಂಡಿದ್ದಾರೆ. ಈ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ಜೋಡಿ ದೂರವಾಗಿದ್ದು, ಅಭಿಮಾನಿಗಳಲ್ಲಿ ಬಾರೀ ನಿರಾಸೆ ಮೂಡಿಸಿದೆ. ಈ ನಡುವೆ ಟ್ರೋಲ್ ಮಾಡೋರುವ ಮಾಡ್ತಾಯಿದ್ದಾರೆ.
ಆದ್ರೆ ಈ ಜೋಡಿ ವಿವಾದ ಮುರಿದು ಬಿದ್ದ ನಂತರ ಹೆಚ್ಚು ಸುದ್ದಿಯಲ್ಲಿರೋದು ನಟ ಸಿದ್ದಾರ್ಥ್. ಹೌದು ಈ ಜೋಡಿ ಡಿವೋರ್ಸ್ ತೆಗೆದುಕೊಳ್ತಿದ್ದಂತೆಯೇ ಟ್ವೀಟ್ ಮಾಡಿದ್ದ ಸಿದ್ದಾರ್ಥ್ ಮೋಸ ಮಾಡುವವರು ಉದ್ಧಾರ ಆಗಲ್ಲ ಅನ್ನೋ ಮಾತು ನಿಜ ಎಂದಿದ್ದರು. ಈ ಟ್ವೀಟ್ ಭಾರೀ ವೈರಕ್ ಆಗಿತ್ತು. ಅಂದ್ಹಾಗೆ ಒಂದು ಕಾಲದಲ್ಲಿ ಅಂದ್ರೆ ನಾಗ ಚೈತನ್ಯರನ್ನು ಪ್ರೀತಿ ಮಾಡುವ ಮೊದಲು ಸಮಂತಾ ಹಾಗೂ ಸಿದ್ಧಾರ್ಥ್ ರಿಲೇಶನ್ ಶಿಪ್ ನಲ್ಲಿದ್ದರು. ನಂತರ ಇಬ್ಬರೂ ಕೂಡ ನಾನಾ ಕಾರಣಗಳಿಂದಾಗಿ ದೂರಾಗಿದ್ದರು.
ಆನಂತರ ಸಮಂತಾ ನಾಗಚೈತನ್ಯರನ್ನ ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚೆಗೆ ಡಿವೋರ್ಸ್ ಪಡೆದರು. ಇದರ ಬೆನ್ನಲ್ಲೇ ಮೋಸ ಮಾಡುವವರು ಎಂದಿಗೂ ಉದ್ಧಾರವಾಗುವುದಿಲ್ಲ ಎಂಬ ಸಿದ್ಧಾರ್ಥ್ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಯ್ತು. ಇದೇ ಟ್ವಿಟ್ ಗೆ ಸೋಷಿಯಲ್ ಮೀಡಿಯಲ್ಲಿ ಸಮಂತಾ ಫ್ಯಾನ್ಸ್ ಸಿದ್ಧಾರ್ಥ್ ವಿರುದ್ಧ ಕೆಂಡಕಾರ್ತಿದ್ದಾರೆ. ಟ್ರೋಲ್ ಮಾಡ್ತಿದ್ದಾರೆ. ಆದ್ರೆ ಇದಕ್ಕೆ ಖಾರವಾಗಿಯೇ ಉತ್ತರಿಸಿರುವ ಸಿದ್ಧಾರ್ಥ್ , ಪ್ರತಿ ನಿತ್ಯ ನನ್ನ ಮನಸ್ಸಿಗೆ ಏನು ಬರುತ್ತದೆ ಅದನ್ನು ಟ್ವೀಟ್ ಮಾಡುತ್ತೇನೆ. ಬೀದಿ ನಾಯಿಗಳ ಬಗ್ಗೆ ಟ್ವೀಟ್ ಮಾಡಿದಾಗ ಅದು ನನಗೆ ಅಂತ ಅಂದು ಕೊಂಡರೆ , ಅದಕ್ಕೆ ನಾನು ಜವಾಬ್ದಾರನಲ್ಲ ಎಂದಿದ್ದಾರೆ.








