ಜೇಡ ಕಚ್ಚಿದ ಪರಿಣಾಮ ಖ್ಯಾತ ಗಾಯಕ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಡಾರ್ಲಿನ್ ಮೊರೈಸ್ (Darlene Morais) ಜೇಡ ಕಚ್ಚಿಸಿಕೊಂಡು ಸಾವನ್ನಪ್ಪಿದ ಖ್ಯಾತ ಗಾಯಕ. ಬ್ರೆಜಿಲಿಯನ್ (Brazilian) ನ ಈ ಗಾಯಕನಿಗೆ (Singer) ಕೇವಲ 28 ವರ್ಷ ವಯಸ್ಸಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ವಿಶ್ವದಾದ್ಯಂತ ಅಪಾರ ಅಭಿಮಾನಿಗಳು ಸಂಗ್ರಹಿಸಿದ್ದರು. ಸದ್ಯ ಅವರ ಸಾವನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಜೇಡ ಕಚ್ಚಿದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಚಿಕಿತ್ಸೆ ಪಡೆದು ಮನೆಗೆ ಆಗಮಿಸಿದ್ದರು. ಆದರೆ, ತೀವ್ರ ಆಯಾಸದಿಂದ ಬಳಲುತ್ತಿದ್ದರು. ದಿನದಿಂದ ದಿನಕ್ಕೆ ಅವರ ದೇಹದ ಬಣ್ಣ ಬದಲಾಗುತ್ತ ಸಾಗಿತು. ಹೀಗಾಗಿ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.