ಇದೇ ಫೆಬ್ರವರಿ ತಿಂಗಳು 24-25 ರಂದು ಭಾರತ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ರಕ್ಷಣಾ ಒಪ್ಪಂದಗಳಿಗೆ ಕಾರಣವಾಗಲಿದ್ದಾರೆ. ಇದೇ ವೇಳೆ ಭಾರತ ಸರ್ಕಾರ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದೆ. ಈ ಮಧ್ಯೆ ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಉಗ್ರ ದಾಳಿಯ ಬೆದರಿಕೆ ಒಡ್ಡಿರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಇನ್ನು ವಿಡಿಯೋ ತನಿಖೆ ನಡೆಸಿರುವ ತನಿಖಾ ತಂಡ ವಿಡಿಯೋವನ್ನು ಪಾಕಿಸ್ತಾನದಲ್ಲಿ ಚಿತ್ರೀಕರಿಸಲಾಗಿದೆ ಎಂದು ಖಚಿತಪಡಿಸಿದೆ. ವ್ಯಕ್ತಿಯೊಬ್ಬ ಈ ವಿಡಿಯೋದಲ್ಲಿ ಮಾತನಾಡಿದ್ದು, ಕಾಶ್ಮೀರದಲ್ಲಿ ಮುಸ್ಲಿಮರನ್ನು ಕೀಳಾಗಿ ನೊಡಲಾಗುತ್ತಿದ್ದು, ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಬರುವ ರೀತಿ ನಡೆದು ಕೊಳ್ಳಲಾಗ್ತಿದೆ, ನಮ್ಮವರನ್ನು ಹತ್ಯೆ ಮಾಡಿದ್ದರಿಂದ ನಾವು ನಮ್ಮ ತಾಳ್ಮೆಯನ್ನು ಕಳೆದುಕೊಂಡಿದ್ದೇವೆ. ನಾವು ಏನು ಎಂಬುದನ್ನು ತೋರಿಸಿಕೊಳ್ಳುವ ಕಾಲ ಬಂದಿದೆ ಎಂದು ನೇರವಾಗಿ ಉಗ್ರ ದಾಳಿಯ ಬೆದರಿಕೆಯನ್ನು ಹಾಕಲಾಗಿದೆ. ಅಷ್ಟೇ ಅಲ್ಲದೆ ಗುಪ್ತ ಸ್ಥಳದಲ್ಲಿ ದಾಳಿಮಾಡಲು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮೀಟಿಂಗ್ ನಡೆಸಿದೆ, ಹಾಗೂ ಮೀಟಿಂಗ್ ನಲ್ಲಿ ಪಾಕ್ ಐಎಸ್ ಐ ಸೇರಿದಂತೆ ಪಾಕ್ ಮಿಲಿಟರಿ ಅಧಿಕಾರಿಗಳೂ ಸಹ ಇದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಅಲ್ಲದೆ ಲಷ್ಕರ್ ಏ ತೋಯ್ಬಾ, ಜೆಇಎಮ್ ಉಗ್ರ ಸಂಘಟನೆಗಳು ಸಹ ಈ ದಾಳಿಗೆ ಸಹಕರಿಸಬೇಕು, ಪುಲ್ವಾಮ ಮಾದರಿಯ ದಾಳಿಯನ್ನು ನಡೆಸಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ. ಇನ್ನು ಭಾರತೀಯ ಮಿಲಿಟರಿಯಿಂದ ಕಾರ್ಯಕ್ರಮಕ್ಕೆ ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಈ ದಾಳಿಯ ಬೆದರಿಕೆಗಳಿಗೆ ತಲೆ ಕೆಡಿಸಿಕೊಳ್ಳಲ್ಲ ಎಂದಿದೆ.
ಶೃಂಗೇರಿಯಲ್ಲಿ ನಡೆದಿದ್ದು ಮತ ಎಣಿಕೆಯಲ್ಲ ಅದು ವ್ಯವಸ್ಥಿತ ಪಿತೂರಿ: ಕಾನೂನು ಸಮರದ ಎಚ್ಚರಿಕೆ ನೀಡಿದ ಡಿ ಕೆ ಶಿವಕುಮಾರ್
ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಎಣಿಕೆಯಲ್ಲಿ ವ್ಯವಸ್ಥಿತವಾದ ಅಕ್ರಮ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಮರು ಎಣಿಕೆಯ...








