ಶಿಲ್ಲಾಂಗ್: ಮೇಘಾಲಯಕ್ಕೆ (Meghalaya) ಹನಿಮೂನ್‌ಗೆ ಕರೆದುಕೊಂಡು ಹೋಗಿ ಪತಿಯನ್ನೇ ಪತ್ನಿ ಕೊಲೆ ಮಾಡಿರುವ ಘಟನೆ ದೊಡ್ಡ ಚರ್ಚೆಗೆ ಕಾರಣವಾಗುತ್ತಿದೆ.
10 ಲಕ್ಷ ರೂ. ಮೌಲ್ಯದ ಆಭರಣ ಧರಿಸುವಂತೆ ಸೊಸೆ ಹೇಳಿದ್ದಳು. ಅವಳ ಮಾತು ಕೇಳಿ ನನ್ನ ಮಗ ಅಷ್ಟೊಂದು ದುಬಾರಿಯ ಚಿನ್ನಾಭರಣ ಧರಿಸಿದ್ದ ಎಂದು ಹತ್ಯೆಗೀಡಾದ ಉದ್ಯಮಿ ರಾಜಾ ರಘುವಂಶಿ ತಾಯಿ ಉಮಾ ಕಣ್ಣೀರಿಟ್ಟಿದ್ದಾರೆ
ಸೋನಮ್ ಎಂಬ ಕಿರಾತಕಿಯನ್ನು ರಾಜಾ ರಘುವಂಶಿ ಮದುವೆಯಾಗಿದ್ದರು.
ವಿವಾಹವಾದ ಒಂದು ವಾರದ ನಂತರ ಹನಿಮೂನ್ ನೆಪ ಮಾಡಿ ಶಿಲ್ಲಾಂಗ್ ಪ್ರವಾಸ ಕೈಗೊಂಡಿದ್ದಾಳೆ. ಅಲ್ಲಿ ಸೋನಮ್ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ.
ಸೋನಮ್ ನನ್ನ ಜೊತೆ ಚೆನ್ನಾಗಿಯೇ ಇದ್ದಳು. ಒಂದುವೇಳೆ ಆಕೆ ಕೊಲೆಯಲ್ಲಿ ಭಾಗಿಯಾಗಿದ್ದರೆ, ಅವಳನ್ನು ಗಲ್ಲಿಗೇರಿಸಬೇಕು ಎಂದು ರಾಜಾ ರಘುವಂಶಿ ತಾಯಿ ಕಣ್ಣೀರು ಸುರಿಸಿದ್ದಾರೆ.