ಎಚ್ಚರ ಎಚ್ಚರ… ಸೋನು ಸೂದ್ ಹೆಸರಲ್ಲಿ ವಂಚನೆಗಿಳಿದಿವೆ ನಕಲಿ ಪೋಸ್ಟ್ಗಳು..!
ಕಳೆದ ವರ್ಷ ಲಾಕ್ ಡೌನ್ ಸಂದರ್ಭದಿಂದಲೂ ಹಸಿದರಿಗೆ ಆಹಾರ ನೀಡುವುದರಿಂದ ಹಿಡಿದು , ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ, ವಲಸೆ ಕಾರ್ಮಿಕರನ್ನ ಸುರಕ್ಷಿತವಾಗಿ ಊರುಗಳಿಗೆ ತಲುಪಿಸುವುದರಿಂದ ಹಿಡಿದು ಕೋವಿಡ್ 2ನೇ ಅಲೆ ವೇಳೆ ಆಕ್ಸಿಜನ್ ವ್ಯವಸ್ಥೆ ಮಾಡುವ ತನಕ ಸಮಾಜಮುಖಿ ಕಾರ್ಯಗಳಲ್ಲೇ ತೊಡಗಿರುವ ಸೋನು ಸೂದ್ ಈಗ ಬಡವರ ಪಾಲಿನ ದೇವರಾಗಿದ್ದಾರೆ.. ರಿಯಲ್ ಹೀರೋ ಆಗಿದ್ದಾರೆ.. ಎಲ್ಲಿ ನೋಡಿದ್ರೂ ಸೋನು ಸೂದ್ ಗೆ ಜನ ಜೈ ಕಾರ ಹಾಕ್ತಿದ್ದಾರೆ.. ಈ ನಡುವೆ ಕೆಲ ಕಿಡಿಗೇಡಿಗಳು ಸೋನು ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ತಿದ್ದಾರೆ..
ಹೌದು.. ಸೋನು ಸೂದ್ ತಮ್ಮ ಫೌಂಡೇಶನ್ ಮೂಲಕ ಸಹಾಯ ಮಾಡುತ್ತಿದ್ದಾರೆ. ಸೋನು ಸೂದ್ ಅವರ ಜೊತೆ ಹಲವು NGO ಸಂಸ್ಥೆಗಳು ಕೈ ಜೋಡಿಸಿದ್ದು, ಅಗತ್ಯ ಆಕ್ಸಿಜನ್, ಬೆಡ್, ಔಷಧ ಹಾಗೂ ದಿನಸಿ ಒದಗಿಸುವ ಮಹತ್ವದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಸೋನು ಸೂದ್ ಅವರ ಈ ಕೆಲಸಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಸೋನು ಅವರ ಕೆಲಸವನ್ನು ಶ್ಲಾಘಿಸಿ ಅನೇಕರು ಸ್ವ-ಇಚ್ಚೆಯಿಂದ ಅವರ ಫೌಂಡೇಶನ್ಗೆ ದೇಣಿಗೆ ನೀಡುತ್ತಿದ್ದಾರೆ.
ಆದ್ರೆ ಇದನ್ನೇ ಕೆಲವರು ದುರುಪಯೋಗ ಪಡೆಸಿಕೊಂಡು ಹಣ ಗಳಿಸುವ ಮಾರ್ಗ ಹುಡುಕಿಕೊಂಡಿದ್ದಾರೆ. ಕೆಲವರುಇ ಸೋಷಿಯಲ್ ಮೀಡಿಯಾಗಳಲ್ಲಿ ಸೋನು ಹೆಸರು ಹೇಳಿಕೊಂಡು ನಕಲಿ ಪೋಸ್ಟ್ಗಳನ್ನು ಹಾಕಿ ದೇಣಿಗೆ ಸಂಗ್ರಹಿಸುವ ನೆಪದಲ್ಲಿ ದುಡ್ಡು ಹೊಡೆಯಲು ಮುಂದಾಗಿದ್ದಾರೆ.
ಸೋನು ಸೂದ್ ಅವರ ಭಾವಚಿತ್ರ ಹಾಕಿ, ಅದರಲ್ಲಿ ಫೋನ್ ಪೇ ನಂಬರ್ ಹಾಕಿ ದೇಣಿಗೆ ಕೊಡಲು ಬಯಸುವವರು ಕೊಡಬಹುದು ಎಂದು ನಕಲಿ ಪೋಸ್ಟ್ಗಳನ್ನ ಹಾಕಲಾಗಿದ್ದು, ಈ ಪೋಸ್ಟರ್ ಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಸೋನು ಸೂದ್ ‘ಇದು ನಕಲಿ’ ಎಚ್ಚರ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.