‘ಸೋನು ಸೂದ್ ಟೇಲರಿಂಗ್ ಶಾಪ್’ … ಉಚಿತ ಸೇವೆ.. ‘ಪ್ಯಾಂಟ್ ಹೋಗಿ ಚಡ್ಡಿ ಆದ್ರೂ ಆಗಬಹುದು’..!

1 min read

‘ಸೋನು ಸೂದ್ ಟೇಲರಿಂಗ್ ಶಾಪ್’ … ಉಚಿತ ಸೇವೆ.. ‘ಪ್ಯಾಂಟ್ ಹೋಗಿ ಚಡ್ಡಿ ಆದ್ರೂ ಆಗಬಹುದು’..!

ಸಾಮಾಜಿಕ ಕಳಕಳಿ, ಬಡವರ ಕಷ್ಟಕ್ಕೆ ನೆರವಾಗಿ ರಿಯಲ್ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಟೇಲರಿಂಗ್ ಶುರುಮಾಡ್ಬಿಟ್ರಾ… ಹೀಗೊಂದು ಚರ್ಚೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಾಯಿದೆ. ಹೌದು ಬಾಲಿವುಡ್​ ನಟ ಸೋನು ಸೂದ್​​ ಟೇಲರಿಂಗ್​​ ಕೆಲಸ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಡಾರ್ಕ್ ಸರ್ಕಲ್ (ಕಪ್ಪು ವರ್ತಲ) ಅನ್ನು ತೊಡೆದುಹಾಕಲು ಮನೆ ಮದ್ದುಗಳು

ಹೀಗಾಗಿ ಸೋನು ಸಿನಿಮಾರಂಗ ಬಿಟ್ಟು ಟೈಲರಿಂಗ್  ಕೆಲಸ ಪ್ರಾರಂಭಿಸಿಬಿಟ್ರಾ ಅಂತ ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಗಳನ್ನ ಮಾಡ್ತಾಯಿದ್ಧಾರೆ. ಅಂದ್ಹಾಗೆ ಸೋನು ಸೂದ್ ಟೇಲರಿಂಗ್ ಮಾಡ್ತಿರೋ ವಿಡಿಯೋವನ್ನ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ​ ಟೇಲರಿಂಗ್​ ಶಾಪ್ ​ನ್ನ ಚಾಲನೆ ಮಾಡ್ತಿರೋದಾಗಿ  ಘೋಷಣೆ ಮಾಡಿದ್ದಾರೆ. ಇದೇ ಈ ಚರ್ಚೆಗಳಿಗೆ ಕಾರಣವಾಗಿದೆ.

ತಾವೇ ಬಟ್ಟೆ ಹೊಲಿಯುತ್ತಿರುವ ವಿಡಿಯೋವನ್ನ ಸೋನು ಸೂದ್​ ಶೇರ್​ ಮಾಡಿದ್ದಾರೆ. ಅಲ್ಲದೇ ವಿಡಿಯೋ ಮೂಲಕ ಜನರಿಗೆ ಉಚಿತ ಸೇವೆ ನೀಡ್ತೇನೆ. ಆದ್ರೆ ಪ್ಯಾಂಟ್ ಹೋಗಿ ಚಡ್ಡಿ ಆದ್ರೂ ಆಗಬಹುದು ಅಂತ ತಮಾಷೆ ಮಾಡಿದ್ದಾರೆ. ಸದ್ಯ ಸೋನು ಪೋಸ್ಟ್ ಗೆ ನೆಟ್ಟಿಗರು ನಾನಾ ಕಮೆಂಟ್ ಗಳನ್ನ ಮಾಡುತ್ತಾ ಇದ್ದಾರೆ.

ರಾಜಾಹುಲಿಗೆ ಕಾದಿದ್ಯ ಸಂಕಷ್ಟ: ತಡರಾತ್ರಿ ಚಾಣಾಕ್ಯ ಅಮಿತ್ ಶಾ ರಹಸ್ಯ ಸಭೆಯ ಮರ್ಮವೇನು..?

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd