South Dakota | ಹಸಿರಾದ ನೀಲಿಯ ಆಕಾಶ
ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿರುವ ಆಕಾಶ ಅಮೆರಿಕಾದ ದಕ್ಷಿಣ ಡಕೋಟಾದಲ್ಲಿ ಹಸಿರಾಗಿದೆ.
ಸಿಯಾಕ್ಸ್ ಫಾಲ್ಸ್ ನಗರದ ಜನರು ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಹಾಲಿವುಡ್ ಸಿನಿಮಾಗಳಲ್ಲಿ ಏಲಿಯನ್ಸ್ ಬರೋದಕ್ಕು ಮೊದಲು ಕಾಣಿಸಿಕೊಳ್ಳುವ ದೃಶ್ಯದಂತೆ ಆಕಾಶದಲ್ಲಿ ಬದಲಾವಣೆಗಳು ನಡೆದಿವೆ.
ಇದನ್ನ ನೋಡಿ ನಗರದ ನಿವಾಸಿಗಳು ಅಚ್ಚರಿಗೊಂಡಿದ್ದಾರೆ.

ಆದ್ರೆ ಆಕಾಶದಲ್ಲಿ ಈ ರೀತಿಯ ಬದಲಾವಣೆಗಳಿವೆ ವಾತಾವರಣದಲ್ಲಿ ನಡೆದ ಅನೂಹ್ಯ ಮಾರ್ಪಾಡುಗಳೇ ಕಾರಣ ಎಂದು ವರದಿಯಾಗಿದೆ.
ದಕ್ಷಿಣ ಡಕೋಟಾ, ಮಿನ್ನೇಸೋಟ ಮತ್ತು ಅಯೋವಾದಲ್ಲಿ ಮಂಗಳವಾರ ಪ್ರಚಂಡ ಗಾಳಿಯೊಂದಿಗೆ ತುಪಾನ್ ಭೀಭತ್ಸ ಸೃಷ್ಠಿಸಿದೆ.
ಆ ಸಮಯದಲ್ಲಿ ಈ ಪ್ರಾಂತ್ಯದಲ್ಲಿ ಡೆರೋಕೋ ಏರ್ಪಟ್ಟಿದೆ ಎಂದು ವಾತಾವರಣ ಇಲಾಖೆ ಧ್ರುವೀಕರಿಸಿದೆ.
ಅದಕ್ಕೆ ಆಕಾಶದ ಬಣ್ಣ ಬದಲಾಗಿದೆ. ಹೀಗಾಗಿ ಈ ಬಗ್ಗೆ ಆಂದೋಳನ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.