ಟಾಪ್ ರಾಜ್ಯ ಸುದ್ದಿಗಳು : ಇತ್ತೀಚಿನ ಪ್ರಮುಖ ಸುದ್ದಿಗಳು
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ
ಪೋಷಕರ ಹೋರಾಟಕ್ಕೆ ಮಣಿದ ಸರ್ಕಾರ: ಖಾಸಗಿ ಶಾಲೆಗಳಲ್ಲಿ ಶೇ.30ರಷ್ಟು ಶುಲ್ಕ ಕಡಿತಕ್ಕೆ ನಿರ್ಧಾರ..!
ಬೆಂಗಳೂರು: ಕೊರೊನಾ ಹಾಗೂ ಲಾಕ್‍ಡೌನ್‍ನಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಶಾಲೆಗಳು ತೆರೆದಿರಲಿಲ್ಲ. ಜನವರಿ 1ರಿಂದ 10, 11, 12ನೇ ತರಗತಿಗಳು ಆರಂಭವಾಗಿದ್ದು, 6ರಿಂದ 9ನೇ ತರಗತಿವರೆಗೆ ವಿದ್ಯಾಗಮ ತರಗತಿಗಳು ನಡೆಯುತ್ತಿವೆ. ಈ ನಡುವೆ, ಒಂದು ವರ್ಷದಿಂದ ಶಾಲೆಗಳು ನಡೆಯದೇ ಇದ್ದರೂ, ಪೂರ್ತಿ ಶುಲ್ಕ ನೀಡುವಂತೆ ಖಾಸಗಿ ಶಾಲೆಗಳು ಪೋಷಕರ ಮೇಲೆ ನಿರಂತರ ಒತ್ತಡ ಹೇರುತ್ತಿದ್ದವು. ಲಾಕ್‍ಡೌನ್‍ನಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಪೋಷಕರು ಶುಲ್ಕ ಕಟ್ಟಲಾಗದೇ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರ ಶುಲ್ಕ ಕಡಿತ ಆದೇಶ ಮಾಡದೇ ಇದ್ದರೆ ನಾಳೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನೂ ಪೋಷಕರು ನೀಡಿದ್ದರು.
ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ
ಬೆಂಗಳೂರು : ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಮೇ.24 ರಿಂದ ಜೂನ್ 10ರವರೆಗೆ ಪರೀಕ್ಷೆಗಳು ನಡೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಹೀಗಿದೆ.
ಮೇ 24: ಭೌತಶಾಸ್ತ್ರ, ಇತಿಹಾಸ
ಮೇ 25: ಮೈನಾರಿಟಿ ಲಾಂಗ್ ವೇಜಸ್
ಮೇ 26: ಬೇಸಿಕ್ ಮ್ಯಾತ್ಸ್, ಲಾಜಿಕ್, ಹೋಮ್ ಸೈನ್ಸ್, ಜಿಯಾಲಜಿ ಪರೀಕ್ಷೆ
ಮೇ 27: ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ
ಮೇ 28: ಉರ್ದು
ಮೇ 29: ರಾಜಶಾಸ್ತ್ರ
ಮೇ 31: ರಸಾಯನಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್
ಜೂ.1: ಕರ್ನಾಟಕ ಸಂಗೀತ
ಜೂ.2: ಸೈಕಾಲಜಿ, ಬಯಾಲಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಜೂ.3: ಹಿಂದಿ
ಜೂ.4: ಎಕನಾಮಿಕ್ಸ್
ಜೂ.5: ಕನ್ನಡ
ಜೂ.7: ಇಂಗ್ಲಿಷ್
ಜೂ.8: ಬ್ಯೂಟಿ & ವೆಲ್ ನೆಸ್,ರೀಟೇಲ್ ಆಟೋಮೊಬೈಲ್, ಹೆಲ್ತ್ ಕೇರ್, ಇನ್ಫಾರ್ಮೇಷನ್ ಟೆಕ್ನಾಲಜಿ
ಜೂ.9: ಸಮಾಜ, ಸಂಖ್ಯಾ ಶಾಸ್ತ್ರ
ಕರ್ನಾಟಕ ಸಾರಿಗೆ ಬಸ್ ಮೇಲೆ ಮರಾಠಿ ಪೋಸ್ಟರ್
ಚಿಕ್ಕೋಡಿ : ಮಹಾರಾಷ್ಟ್ರದ ಪುಂಡಾಟಿಕೆ ಮುಂದುವರಿದಿದ್ದು, ಕರ್ನಾಟಕ ಸಾರಿಗೆ ಬಸ್ ಮೇಲೆ ಕಿಡಿಗೇಡಿಗಳು ಮರಾಠಿ ಪೋಸ್ಟರ್ ಗಳನ್ನು ಹಚ್ಚಿದ್ದಾರೆ. ಬೆಳಗಾವಿಯಿಂದ ಪುಣೆಗೆ ಹೋಗುವ ಬಸ್ ಗಳ ಮೇಲೆ ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಆಗುವುದು ಎಂದು ಮರಾಠಿ ಪೋಸ್ಟರ್ ನ್ನು ಹಚ್ಚಲಾಗಿದೆ. ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ ಪುಣೆ ಹೆಸರಿನಲ್ಲಿ ಪೋಸ್ಟರಗಳನ್ನ ಅಂಟಿಸಲಾಗಿದೆ. ಇತ್ತ ಮಹಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಳಗಾವಿ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ ಎಂದು ಉದ್ಧಟತನದ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಇವರ ಈ ಹೇಳಿಕೆಯನ್ನ ರಾಜ್ಯದ ವಿವಿಧ ಪಕ್ಷಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ನಮ್ಮ ನೆಲ ಜಲ ವಿಚಾರಕ್ಕೆ ಬಂದ್ರೆ ನಾವು ಸುಮ್ಮನೆ ಇರಲ್ಲ ಅಂತಾ ವಾರ್ನಿಂಗ್ ನೀಡಿದ್ದಾರೆ.
ಬರ್ತ್ ಡೇ ಪಾರ್ಟಿ ನೆಪದಲ್ಲಿ ಬಿಜೆಪಿ ಮುಖಂಡರಿಂದ ನಂಗಾನಾಚ್.. ವಿಡಿಯೋ ವೈರಲ್..!
ಯಾದಗಿರಿ: ಬರ್ತ್ ಡೇ ಪಾರ್ಟಿ ಹೆಸರಲ್ಲಿ ಬಿಜೆಪಿ ಮುಖಂಡರು ಯುವತಿಯೊಂದಿಗೆ ನಂಗಾನಾಚ್ ಡ್ಯಾನ್ಸ್ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸುರಪುರ ತಾಲೂಕಿನ ಬೈರಮಡ್ಡಿ ಗ್ರಾಮದಲ್ಲಿ ಬಿಜೆಪಿ ಮುಖಂಡ ರಮೇಶ್ ಗೌಡ ಹಾಗೂ ಕಾರ್ಯಕರ್ತರು ಬರ್ತ್ ಡೇ ಪಾರ್ಟಿಯಲ್ಲಿ ರಾಜಾರೋಷವಾಗಿ ಯುವತಿಯೊಂದಿಗೆ ಸ್ಟೆಪ್ಸ್ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.
ಡ್ರೈನೇಜ್ ಕ್ಲೀನ್ ಮಾಡಲು ತೆರಳಿದ್ದ ಇಬ್ಬರು ಸಾವು, ಒರ್ವನ ಸ್ಥಿತಿ ಗಂಭೀರ
ಕಲಬುರಗಿ: ಡ್ರೈನೇಜ್ ಸ್ವಚ್ಚತೆ ಮಾಡಲು ಹೋಗಿದ್ದ ಮೂವರ ಪೈಕಿ ಇಬ್ಬರು ಕಾರ್ಮಿಕರು ಸಾವಿಗೀಡಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯ ಕೈಲಾ ನಗರದಲ್ಲಿ ಜಲ ಮಂಡಳಿ ನಿರ್ಲಕ್ಷಕ್ಕೆ ಇಬ್ಬರು ಕಾರ್ಮಿಕರು ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಸ್ವಸ್ಥಗೊಂಡ ಓರ್ವನ ಸ್ಥಿತಿ ಗಂಭಿರವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾಮಗಾರಿಯಲ್ಲಿ ಗೋಲ್‍ಮಾಲ್ ಶಂಕೆ: ಮಾಹಿತಿ ಕೊಡದ ಗ್ರಾಪಂ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು..!
ಕೊಪ್ಪಳ: ಮಹಾತ್ಮ ಗಾಂಧಿ, ನರೇಗಾ ಯೋಜನೆಯಲ್ಲಿ ನಡೆದ ಕಾಮಗಾರಿಗಳ ಮಾಹಿತಿಯನ್ನು ನೀಡುವಂತೆ ಐದು ತಿಂಗಳ ಹಿಂದೆ ಆರ್‍ಟಿಐ ಅಡಿ ಅರ್ಜಿ ಸಲ್ಲಿಸಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವ ಆರೋಪ ಕೇಳಿ ಬಂದಿದೆ.
ಸರ್ಕಾರದ ಮಾಹಿತಿ ಹಕ್ಕು ನಿಯಮದ ಅಡಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಸಿರಗುಂಪಿ ಗ್ರಾಮ ಪಂಚಾಯಿತಿಯಲ್ಲಿ ಪರಶುರಾಮ ಡೊಕ್ಕಿ ಎನ್ನುವವರು ಮಹಾತ್ಮ ಗಾಂಧಿ, ನರೇಗಾ ಯೋಜನೆಯಲ್ಲಿ ನಡೆದ ಕಾಮಗಾರಿಗಳು ವಿವರ ಸೇರಿದಂತೆ ವಿವಿಧ ಕಾಮಗಾರಿಗಳ ಮಾಹಿತಿಯನ್ನು 2020ರ ಅಕ್ಟೋಬರ್25ರಂದು ಮಾಹಿತಿ ಕೇಳಿದ್ದರು.
ಸಿದ್ದಗಂಗಾ ಸ್ವಾಮೀಜಿ ಜೈವಿಕ ಉದ್ಯಾನವನಕ್ಕೆ ಕಿಡಿಗೇಡಿಗಳಿಂದ ಬೆಂಕಿ
ತುಮಕೂರು: ನಡೆದಾಡುವ ದೇವರು ಎಂದೇ ಮನೆಮಾತಾಗಿದ್ದ ಸಿದ್ದಗಂಗಾಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿ ಜೈವಿಕ ಉದ್ಯಾನವನಕ್ಕೆ ಕಳೆದ ರಾತ್ರಿ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ.
ತುಮಕೂರು ತಾಲೂಕಿನ ಪೆಮ್ಮನ್ನಹಳ್ಳಿಯಲ್ಲಿರುವ ಸಿದ್ದಗಂಗಾ ಜೈವಿಕ ಉದ್ಯಾನವನದಲ್ಲಿ ಇತ್ತಿಚೆಗಷ್ಟೇ ಪರಿಸರ ಪ್ರೇಮಿಗಳು ಮೂರು ಸಾವಿರ ಗಿಡಗಳನ್ನು ನೆಟ್ಟಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel