ಬೆಂಗಳೂರು: ಕೊರೊನಾ ರಣಕೇಕೆ ಹಾಗೂ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಹಾಗೂ ಮೆಡಿಕಲ್ ಕಾಲೇಜುಗಳು 8 ತಿಂಗಳ ಬಳಿಕ ರಾಜ್ಯಾದ್ಯಂತ ಇಂದಿನಿಂದ ಆರಂಭವಾಗಿವೆ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಡಿಗ್ರಿ ಕಾಲೇಜುಗಳು ಓಪನ್ ಆಗಿದ್ದು, ಕಟ್ಟುನಿಟ್ಟಿನ ಕೊರೊನಾ ಗೈಡ್‍ಲೈನ್ಸ್ ನಡುವೆ ತರಗತಿಗಳನ್ನು ಆರಂಭಸಲಾಗಿದೆ. ಹೀಗಾಗಿ ಬೆಂಗಳೂರು ನಗರದಲ್ಲಿ ಕಾಲೇಜುಗಳತ್ತ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಹೆಜ್ಜೆ ಹಾಕಿದ್ರೆ, ಬಹುತೇಕ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾಲೇಜುಗಳು ಆರಂಭವಾಗಿ ಮೊದಲ ದಿನವಾದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಅದರಲ್ಲೂ ಅಂತಿಮ(ಫೈನಲ್) ವರ್ಷದ ಪದವಿ, ಇಂಜಿನಿಯರಿಂಗ್, ಮೆಡಿಕಲ್ ತರಗತಿಗಳನ್ನು ಮಾತ್ರ ಅರಂಭಿಸಿದ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ.
ಕೊರೊನಾ ಟೆಸ್ಟ್ ರಿಪೋರ್ಟ್‍ನಲ್ಲಿ ನೆಗೆಟಿವ್ ಇದ್ದ ವಿದ್ಯಾರ್ಥಿಗಳನ್ನು ಮಾತ್ರ ತರಗತಿಗಳಿಗೆ ಸೇರಿಸಲಾಗುತ್ತಿತ್ತು. ಕಾಲೇಜು ಆವರಣ ಪ್ರವೇಶಕ್ಕೂ ಮೊದಲು ಥರ್ಮಲ್ ಟೆಸ್ಟ್ ಮಾಡಿ, ಮಾಸ್ಕ್ ಧರಿಸಿದ್ದನ್ನು ಖಚಿತಪಡಿಸಿದ ಬಳಿಕವೇ ವಿದ್ಯಾರ್ಥಿಗಳನ್ನು ಕೊಠಡಿಗಳ ಒಳಗೆ ಬಿಡಲಾಯಿತು.

ಬೆಂಗಳೂರಿನ ಮಹಾರಾಣಿ ಕಾಲೇಜಿಗೆ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಆಗಮಿಸಿದ್ದು, ಕೊರೊನಾ ಟೆಸ್ಟ್ ರಿಪೋರ್ಟ್ ಕಡ್ಡಾಯವಾಗಿ ತರಬೇಕೆಂಬ ನಿಯಮದ ಬಗ್ಗೆ ಮಾಹಿತಿ ಇಲ್ಲದೆ ಪರದಾಟ ನಡೆಸಿದರು. ಕೋವಿಡ್ ರಿಪೋರ್ಟ್ ಇಲ್ಲದವರನ್ನು ಕಾಲೇಜಿನ ಆಡಳಿತ ಮಂಡಳಿ ವಾಪಸ್ ಕಳಿಸಿದೆ.
ರಾಜಾಜಿನಗರದ ವಿವೇಕಾನಂದ ಕಾಲೇಜಿನಲ್ಲಿ ಪದವಿ ತರಗತಿಗಳು ಆರಂಭವಾಗಿದ್ದು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಪಾಠ ಕೇಳಿದರು.
ಕೊರೊನಾ ಹಿನ್ನೆಲೆಯಲ್ಲಿ 8 ತಿಂಗಳಿಂದ ಮನೆಯಲ್ಲಿ ಕುಳಿತು ಬೋರ್ ಆಗಿತ್ತು. ಈಗ ಕಾಲೇಜುಗಳು ಶುರುವಾಗಿದ್ದರಿಂದ ಖುಷಿಯಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗೆ ಅಟೆಂಡ್ ಆಗಿದ್ದರು. ಕಲಬುರಗಿಯಲ್ಲೂ ಡಿಗ್ರಿ ಕಾಲೇಜುಗಳು ಪುನಾರಂಭವಾಗಿವೆ. ಕಟ್ಟುನಿಟ್ಟಾನ ಕೊರೊನಾ ರೂಲ್ಸ್ ನಡುವೆ ಎನ್.ವಿ ಕಾಲೇಜು ಸೇರಿದಂತೆ ಹಲವು ಕಾಲೇಜುಗಳು ಪುನಾರಂಭಗೊಂಡಿವೆ. ವಿದ್ಯಾರ್ಥಿಗಳು ಕಾಲೇಜು ಆವರಣ ಪ್ರವೇಶ ಮಾಡುತ್ತಿದ್ದಂತೆ ಪ್ರಾಂಶುಪಾಲ ದೇಶಪಾಂಡೆ ಅವರು, ಕೊರೊನಾ ರೂಲ್ಸ್ ಹಾಗೂ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಬಳಿಕವೇ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಬಿಡಲಾಯಿತು.

ಬೆಂಗಳೂರು ಸೇರಿದಂತೆ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳು ಮಾತ್ರ ಇಂದು ಪ್ರಾರಂಭವಾಗಿದ್ದರೆ, ಸದ್ಯಕ್ಕೆ ಕಾಲೇಜುಗಳನ್ನು ಆರಂಭ ಮಾಡುವುದಿಲ್ಲ ಎಂದು ಅನುದಾನ ರಹಿತ ಕಾಲೇಜುಗಳನ್ನು ಓಪನ್ ಮಾಡುವುದಿಲ್ಲ ಎಂದು ಅನುದಾನ ರಹಿತ ಕಾಲೇಜುಗಳ ಸಂಘ ತಿಳಿಸಿದೆ.
ಒಟ್ಟಾರೆ ಗಟ್ಟಿ ನಿರ್ಧಾರ ಮಾಡಿ ಸರ್ಕಾರ ಡಿಗ್ರಿ ಕಾಲೇಜುಗಳನ್ನು ಆರಂಭಿಸಿದ್ದು, ವಿದ್ಯಾರ್ಥಿಗಳು ಕೊರೊನಾ ಹಬ್ಬಿಸುವ ರಾಯಭಾರಿಗಳಾಗ್ತಾರಾ ಅಥವಾ ಇಲ್ಲವೇ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








