Street dog : ಎರಡು ಗಂಟೆಗಳಲ್ಲಿ ನಲವತ್ತು ಜನರಿಗೆ ಕಚ್ಚಿದ ಬೀದಿ ನಾಯಿ…
ಬೀದಿ ನಾಯಿಯೊಂದು ಕೇವಲ ಎರಡು ಗಂಟೆಗಳಲ್ಲಿ ನಲವತ್ತು ಜನರಿಗೆ ಕಚ್ಚಿ ಆತಂಕ ಸೃಷ್ಟಿಸಿರುವ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ ಎಂದು ಆಜ್ ತಕ್ ವರದಿ ಮಾಡಿದೆ.
ನಾಯಿ ಕಡಿತಕ್ಕೊಳಗಾದ ಜನರು ಸಮೀಪದ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಬಂದಿದ್ದರಿಂದ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ ಜನರಿಂದ ತುಂಬಿ ತುಳುಕುತ್ತಿದೆ. ಬಾರ್ಮರ್ ಜಿಲ್ಲೆಯ ಕಲ್ಯಾಣಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಇಷ್ಟೊಂದು ಮಂದಿ ಆಸ್ಪತ್ರೆಗೆ ಬರುವುದನ್ನ ನೊಡಿ ಆಡಳಿತ ಮಂಡಳಿಯೂ ತಬ್ಬಿಬ್ಬಾಗಿ ಕೂಡಲೇ ನಗರಸಭೆಗೆ ಮಾಹಿತಿ ನೀಡಿದೆ. ನಾಯಿ ಹಿಡಿಯಲು ಎರಡು ತಂಡಗಳನ್ನ ರಚಿಸಲಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ನೆರವಿನಿಂದ ಬೀದಿ ನಾಯಿಯನ್ನ ಹಿಡಿಯಲಾಗಿದೆ.
ಇದೀಗ ನಗರದ ವಿವಿಧ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹಿಡಿಯಲು ನಗರಸಭೆ ಮುಂದಾಗಿದೆ. ಹಠಾತ್ ಬೀದಿನಾಯಿ ಕಡಿತದಿಂದ ಗಾಯಗೊಂಡ ಅನೇಕ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಲ್.ಮನ್ಸೂರಿಯಾ ತಿಳಿಸಿದ್ದಾರೆ.
Street dog: In two hours, forty people were bitten by a street dog.