ಮುಂಬಯಿ: ರೈಲಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಈ ರೈಲು ನ್ಯೂ ಅಷ್ಟಿಯಿಂದ (New Ashti) ಅಹಮದ್ನಗರಕ್ಕೆ (Ahmednagar) ತೆರಳುತ್ತಿತ್ತು. ಈ ಸಂದರ್ಭದಲ್ಲಿ 5 ಬೋಗಿಗಲಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆ ನಾರಾಯಣೋಹ್ (Narayandoh)ಮತ್ತು ಅಹಮದ್ನಗರ ನಗರಗಳ ಮದ್ಯೆ ನಡೆದಿದೆ. ಗಾರ್ಡ್ ಸೈಡ್ ಬ್ರೇಕ್ ವ್ಯಾನ್ನಲ್ಲಿ ಕಾಣಿಸಿಕೊಂಡ ಬೆಂಕಿ, ನಂತರ ನಾಲ್ಕು ಬೋಗಿಗಳಿಗೆ ವ್ಯಾಪಿಸಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.