ವಂಚನೆ ಪ್ರಕರಣ : ಬಾಲಿವುಡ್ ನ ‘ಬ್ಯಾಡ್ ಬಾಯ್’ ಗೆ ಸಮನ್ಸ್ ನೀಡಿದ ಪೊಲೀಸರು
ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹಾಗೂ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಸೇರಿದಂತೆ 9 ಮಂದಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ಹೌದು.. ಸಲ್ಮಾನ್ ಖಾನ್ ‘ಬೀಯಿಂಗ್ ಹ್ಯೂಮನ್’ ಹೆಸರಿನ ಎನ್ಜಿಒ ನಡೆಸುತ್ತಿದ್ದಾರೆ.. ಅಲ್ಲದೇ ಇದೇ ಹೆಸರಿನ ಬ್ರ್ಯಾಂಡ್ ಉತ್ಪನ್ನಗಳನ್ನೂ ಕೂಡ NGO ಅಡಿಯಲ್ಲಿ ಮಾರಾಟ ಸಹ ಮಾಡುತ್ತಿದ್ದಾರೆ ಎಂ ಆರೋಪ ಕೇಳಿಬಂದಿದೆ.
ಬೀಯಿಂಗ್ ಹ್ಯೂಮನ್ ಕುರಿತಾಗಿಯೇ ಚಂಡೀಗಢದ ಅರುಣ್ ಗುಪ್ತಾ ಎಂಬುವರು, ಸಲ್ಮಾನ್ ಖಾನ್, ಬೀಯಿಂಗ್ ಹ್ಯೂಮನ್ ಸಂಸ್ಥೆಯ ಸಿಇಒ, ಸಲ್ಮಾನ್ ಖಾನ್ ಸಹೋದರಿ ಅಲ್ವಿರಾ ಹಾಗೂ ಇತರ ಕೆಲವು ಸಿಬ್ಬಂದಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರುದಾರ ಅರುಣ್ ಗುಪ್ತಾ ಹೇಳಿರುವಂತೆ, ಬೀಯಿಂಗ್ ಹ್ಯೂಮನ್ ಸಂಸ್ಥೆಯ ಕೆಲವು ಸಿಬ್ಬಂದಿ ನನಗೆ ಫ್ರ್ಯಾಂಚೈಸಿ ತೆರೆಯುವಂತೆ ಹೇಳಿದರು. ಅದರಂತೆ ನಾನು ಬಂಡವಾಳ ಹೂಡಿ ಶಾಪ್ ತೆರೆದೆ ದಾಸ್ತಾನಿಗಾಗಿ ಹಣ ಸಹ ಪಾವತಿಸಿದೆ. ಆದರೆ ಯಾವುದೇ ದಾಸ್ತಾನನ್ನು ಬೀಯಿಂಗ್ ಹ್ಯೂಮನ್ ಅವರು ನೀಡದೇ ಮೋಸ ಮಾಡಿದ್ದಾರೆ ಎಂದಿದ್ದಾರೆ.
ದೂರು ದಾಖಲಿಸಿಕೊಂಡಿರುವ ಚಂಡೀಗಢ ಪೊಲೀಸರು, ಸಲ್ಮಾನ್ ಖಾನ್, ಸಲ್ಮಾನ್ ಖಾಸ್ ಸಹೋದರಿ ಅಲ್ವಿರಾ ಹಾಗೂ ಇನ್ನೂ ಕೆಲವು ಬೀಯಿಂಗ್ ಹ್ಯೂಮನ್ ಸಿಬ್ಬಂದಿಗೆ ಸಮನ್ಸ್ ಜಾರಿ ಮಾಡಿದ್ದು, ಜುಲೈ 13ರ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.