ADVERTISEMENT
Wednesday, May 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೂಡನಂಬಿಕೆಯೋ… ನಂಬಿಕೆಯೋ…! ಆಚರಣೆಗಳೇನು..? ಕಾರಣಗಳೇನು..? ಭಾರತದಲ್ಲಿ ಮಾತ್ರ ಇದೆಯಾ ಮಢ್ಯಾ..?

Namratha Rao by Namratha Rao
September 4, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಮೂಡನಂಬಿಕೆಯೋ… ನಂಬಿಕೆಯೋ…! ಆಚರಣೆಗಳೇನು..? ಕಾರಣಗಳೇನು..? ಭಾರತದಲ್ಲಿ ಮಾತ್ರ ಇದೆಯಾ ಮಢ್ಯಾ..?

ವಿಶ್ವದ ಮೂಲೆ ಮೂಲೆಗಳಲ್ಲಿ  ಮೂಡನಂಬಿಕೆ ಆಚರಣೆ ಅನ್ನೋದು ಇದೆ. ಇಂತಹ ಮೂಡ ಪದ್ದತಿಗಳ ಆಚರಣೆಯಲ್ಲಿ ಇಡೀ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿ ಇದೆ. 2ನೇ ಸ್ಥಾನದಲ್ಲಿ ಚೈನಾ, ನಂತರ ಗ್ರೀಸ್, USA, ಫಿಲಿಫೈನ್ಸ್, ನ್ಯೂ ಝಿಲ್ಯಾಂಡ್, ಜಪಾನ್, ಈಜಿಪ್ಟ್, ಫ್ರ್ಯಾನ್ಸ್, ಮೆಕ್ಸಿಕೋ. ಇಷ್ಟೇ ಅಲ್ಲ ಇಡೀ ವಿಶ್ವದ ಮೂಲೆಮೂಲೆಗಳಲ್ಲೂ ಈಗಾಲೂ ಅನೇಕ ಮೌಡ್ಯಗಳು, ಆಚರಣೆಗಳು, ಪದ್ಧತಿ, ಪರಂಪರೆ, ಸಂಪ್ರದಾಯಗಳು ರೂಡಿಯಲ್ಲಿವೆ.superstisious

Related posts

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

May 20, 2026
ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯಬೇಡಿ: ಇಂಧನ ದರ ಏರಿಕೆ ವಿರುದ್ಧ ಸಿಎಂ ಗುಡುಗು ; ಪ್ರಧಾನಿ ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ದೇಶದ ಬೆಲೆ ಏರಿಕೆಗೆ ಮೋದಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ

May 20, 2026

ಆದ್ರೆ ಕೇವಲ ಭಾರತದಲ್ಲಿ ಮಾತ್ರ ಮೂಡನಂಬಿಕೆಗಳು ಇದ್ದಾವೆ ಅನ್ನೋದು ತಪ್ಪು. ಯಾಕಂದ್ರೆ ಪಾಶ್ಚಿಮಾತ್ಯ ದೇಶಗಳಲ್ಲೂ ಅನೇಕ ಮೂಡ ಸಂಪ್ರದಾಯಗಳು ಈಗಲೂ ಆಚರಣೆಯಲ್ಲಿವೆ.

ಕೇವಲ ಭಾರತದಲ್ಲಿ , ಸಂಪ್ರದಾಯ, ಮೌಡ್ಯಾಚರಣೆ ನೋಡೋದಾದ್ರೆ..!

ನಾವು ಭಾರತದ ಯಾವುದೇ ಮೂಲೆಗೆ ಹೋಗಲಿ ಮೂಢನಂಬಿಕೆಗಳು , ಪರಂಪರೆ , ಸಂಪ್ರದಾಯ ಆಚಾರ ವಿಚಾರದ ಹೆಸರದಲ್ಲಿ ರೂಡಿಯಲ್ಲಿರೋದನ್ನ ಕಾಣುತ್ತೇವೆ. ದೆವ್ವ – ಭೂತ, ಆತ್ಮ – ಪುನರ್ ಜನ್ಮ, ದೇವರು ಮೈ ಮೇಲೆ ಬರೋದು, ಆತ್ಮ ಮೈ ಮೇಲೆ ಬರೋದು, ಕೊಂಡ ಹಾಯುವುದು, ಪ್ರಾಣಿ ಬಲಿ ಕೊಡುವುದು ಹೀಗೆ ಇಂತವುಗಳ ಬಗ್ಗೆ ನೋಡಿಯೂ ಇದ್ದೇವೆ. ಕೇಳಿಯೂ ಇರುತ್ತೇವೆ. ಕೆಲವು ನಂಬಿಕೆಗಳು ಯಾವಾಗ ಮನುಷ್ಯನಿಗೆ ಹಾನಿಮಾಡುವುದಿಲ್ಲವೋ ಅಲ್ಲಿಯ ವರೆಗೂ ಅವು ಒಳ್ಳೆಯ ನಂಬಿಕೆಗಳಾಗಿರುತ್ತವೆ. ಮನುಷ್ಯನಿಗೆ ಅಥವಾ ಪ್ರಾಣಿಗಳಿಗೆ ಹಿಂಸೆ ಕೊಡುವುದನ್ನ ಮೌಡ್ಯಾಚರಣೆಗಳನ್ನಾಗಿ ಪರಿಗಣಿಸಲೂ ಬಹುದು. ಇಂತಹವುಗಳು ನಮ್ಮಲ್ಲಿ ಹೆಚ್ಚು. ಇವು ಆಚರಣೆಗಳು ಪದ್ಧತಿಗಳಿರಬಹುದು.

ಕೆಲವೊಂದು ರೂಡಿಸಿಕೊಂಡು ಬಂದಿರುವ ನಂಬಿಕೆಗಳು..!

ನಮ್ಮಲ್ಲಿ ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ನಂಬಿಕೆ ಅಂದ್ರೆ ಅದು  ಮುಟ್ಟಿನ ಸಮಯದಲ್ಲಿ ದೇವಾಲಯಕ್ಕೆ ಹೋಗಬಾರದು. ಹೌದು  ನಮ್ಮಲ್ಲಿ ಹಿಂದಿನಿಂದಲೂ ಕೆಲವೊಂದು ಕಟ್ಟುಪಾಡುಗಳನ್ನ ಪಾಲನೆ ಮಾಡಿಕೊಂಡು ಬರಲಾಗ್ತಿದೆ. ಪೂರ್ವಜರು ಕೆಲ ವೈಜ್ಞಾನಿಕ ಕಾರಣಗಳಿಂದ ರೂಡಿಸಿಕೊಂಡು ಬಂದ ಕಟ್ಟುಪಾಡುಗಳಿಗೆ ಈಗ ಮಡಿ ಮೈಲಿಗೆಯ ರೂಪ ಕೊಡಲಾಗಿದೆ. ಹೌದು ಅದ್ರಲ್ಲಿ ಇದು ಸಹ ಒಂದು. ಮುಟ್ಟಿನ ಸಮಯದಲ್ಲಿ ದೇವಾಲಯಗಳಿಗೆ ಹೋಗಬಾರದು ಎಂಬ ನಿಯಮಗಳನ್ನ ತಂದ ಕಾರಣ ಅಂದ್ರೆ ಈ ಸಮಯದಲ್ಲಿ ಮಹಿಳೆಯರು ಮಾನಸಿಕವಾಗಿಯೂ ಹಾಗೂ ದೈಹಿಕವಾಗಿಯೂ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಶಕ್ತಿಹೀನರಾಗಿರುತ್ತಾರೆ. ಹೀಗಾಗಿ ಆ ಸಮಯದಲ್ಲಿ ವಿಶ್ರಮಿಸಲಿ ಎನ್ನುವ ಕಾರಣಕ್ಕೆ ದೇವಸ್ಥಾನಕ್ಕೆ ಹೋಗಬಾರದು, ಪೂಜೆ ಮಾಡಬಾರದು, ಅಡುಗೆ ಮನೆಗೆ ಹೋಗಬಾರದು ಎಂಬೆಲ್ಲಾ ನಿಯಮಗಳನ್ನ ಮಾಡಲಾಗಿತ್ತು. ಅದು ಕ್ರಮೇಣ ರೂಡಿಯಾಗುತ್ತಾ ಹೋದಂತೆ ಮೈಲಿಗೆ  ಎಂಬ ಹೆಸರಿಟ್ಟು ಮಹಿಳೆಯರನ್ನ ಆ ಸಮಯದಲ್ಲಿ ದೂರವಿಡುತ್ತಾ ಬಂದರು. ಆದ್ರೆ ಜೆನರೇಶನ್ ಬದಲಾದಂತೆ ಕೆಲ ಕಟ್ಟುಪಾಡುಗಳು ಸಹ ಆಚರಣೆಯಿಂದ ದೂರಾಗುತ್ತಿದ್ರು , ಈಗಲೂ ಕೆಲವೆಡೆ ಇವು ರೂಡಿಯಲ್ಲಿದೆ.   superstisious

ಇನ್ನೂ ಸಂಜೆಯಾದ್ರೆ, ಉಗುರು ಕತ್ತರಿಸಬಾರದು, ಸಾವಿನ ಮನೆಗೆ ಹೋಗಿ ಬಂದು ಸ್ನಾನ ಮಾಡಲೇ ಬೇಕು, ಸಂಜೆ ಮೇಲೆ ಗಿಡ ಕೀಳಬಾರದು, ತುಳಸಿ ಗಿಡಕ್ಕೆ ಕೈಹಾಕಬಾರದು, ಯುವತಿಯರು, ಮಹಿಳೆಯರು ಎಕ್ಕಡ ಗಿಡ ಮುಟ್ಟಬಾರದು, ಮನೆ ಬಾಗಿಲಿಗೆ ನಿಂಬೆ ಹಣ್ಣು, ಮೆಣಸಿನಕಾಯಿಯ ತೋರಣ ಕಟ್ಟುವುದು,  ರಾತ್ರಿ ಅರಳಿ ಮರದ ಬಳಿ ಹೋಗಬಾರದು, ಬೆಕ್ಕು ಅಡ್ಡ ಹೋದ್ರೆ ಅಶುಭ ಮಂಗಳವಾರ , ಶುಕ್ರವಾರ ಕೂದಲು ಕತ್ತರಿಸಬಾರದು ಹೀಗೆ ಹಲವಾರು ನಂಬಿಕೆಗಳು ಆಚರಣೆಗಳು ನಮ್ಮಲ್ಲಿವೆ. ಆದರೆ ಇವಕ್ಕೆಲ್ಲ ಕೆಲ ವೈಜ್ಞಾನಿಕ ಕಾರಣಗಳೂ ಇವೆ. ಹಿಂದೆಲ್ಲಾ ಪೂರ್ವಜರು ನಾನಾ ಕಾರಣಗಳು ಯೋಜನೆಗಳಿಂದ ಹಾಕಿದ ಕಟ್ಟುಪಾಡುಗಳು ನಿಯಮಗಳು ಇದೀಗ ಧಾರ್ಮಿಕ ರೂಪ ಪಡೆದುಕೊಂಡು ಆಚರಣೆಯಲ್ಲಿವೆ.

ಇಡೀ ವಿಶ್ವದಾದ್ಯಂತ ಅನೇಕ ಕೆಟ್ಟ  ಹಾಗೂ ಭಯಾನಕ ಮೌಢ್ಯಾಚರಣೆಗಳು ಇಂದಿಗೂ ಸಹ ಆಚರಣೆಯಲ್ಲಿವೂ. ಭಾರತ, ನೇಪಾಳ, ಜಪಾನ್ ಹೀಗೆ ಅನೇಕ ರಾಷ್ಟ್ರಗಳಲ್ಲಿ ಯಾವುದೇ ಮೂಲೆಗೆ ಹೋದರು ಮೌಢ್ಯಾಚರಣೆಗಳನ್ನ ನಾವು ಗಮನಿಸಬಹುದು. ಶತಮಾನ ಬದಲಾದ್ರೂ, ಟೆಕ್ನಾಲಜಿ ಅಭಿವೃದ್ಧಿಯಾದ್ರು, ಜೆನರೇಶನ್ ಚೇಂಜ್ ಆದ್ರೂ ಕೆಲವೊಂದು ನಂಬಿಕೆಗಳನ್ನ ಮಾತ್ರ ಈಗಲೂ ಆಚರಣೆಯಲ್ಲಿವೆ.   superstisious

ಇ೦ದಿನ ದಿನಗಳಲ್ಲಿಯೂ ಸಹ ಮೂಢನಂಬಿಕೆಗಳಕಟ್ಟುಪಾಡಿಗೆ ಬಿದ್ದು, ಆಘಾತಕಾರಿ ಅಥವಾ ಕೆಟ್ಟ ಆಚರಣೆಗಳು ಹಾಗೂ ಸ೦ಪ್ರದಾಯಗಳು ಭಾರತ ದೇಶದಲ್ಲಿ ಅಲ್ಲಲ್ಲಿ, ಆಗಾಗ ನಡೆಯುತ್ತಲೇ ಇರುತ್ತವೆ.  ಆದ್ರೆ ಇಂತಹ ಮೂಡ ನಂಬಿಕೆಗಳು ಹುಟ್ಟಿಕೊಂಡಿದ್ದು ಹೇಗೆ ಕಾರಣ ಏನಿರಬಹುದು..? ಅನ್ನೋದನ್ನ ಯೋಚನೆ ಮಾಡಿದ್ರೆ ನಾನಾ ಉತ್ತರಗಳು ಸಿಗುತ್ತವೆ. ಆದರೆ ಯಾವುದೂ ಸ್ಪಷ್ಟವಾಗಿ ಅಂತಿಮ ಉತ್ತರ ಎಂದೆನಿಸೋದಿಲ್ಲ. ಯಾರ ಅಭಿಪ್ರಾಯವೂ ಒಂದೇ ರೀತಿ ಇರುವುದಿಲ್ಲ. ಆದ್ರೆ ಹಿಂದೆಲ್ಲಾ ಜನರಿಗೆ ಅಷ್ಟಾಗಿ ವೈಜ್ಞಾನಿಕತೆಯ ಅರಿವಿರಲಿಲ್ಲ.. ರೋಗ ರುಜುಣುಗಳನ್ನ ವಾಸಿ ಮಾಡಿಕೊಳ್ಳೋಕೆ , ಅದು ಹೇಗೆ ಬರುತ್ತೆ , ಏನು ಕಾರಣ ಇರಬಹುದು ಎಂಬುದು ಗೊತ್ತಾಗದೇ ತಮಗೆ ತೋಚಿದ್ದನ್ನ ಮಾಡ್ತಿದ್ರು.

ಕೆಲವೊಮ್ಮೆ  ನಮಗೆ ಗೊತ್ತಿಲ್ಲದೇ ನಮ್ಮ ದೈನಂದಿನ ಕಾರ್ಯಗಳಲ್ಲಿ ಕೆಲ ರೂಢಿಗಳನ್ನ ಪಾಲಿಸಿಕೊಮಡು ಬರುತ್ತೇವೆ. ಶುಭ ಅಶುಭಗಳನ್ನ ನೊಡ್ತೇವೆ. ತೆಂಗಿನ ಕಾಯಿ ಹೊಡುದ್ರೆ ಮಧ್ಯಕ್ಕೆ ಹೋಳಾಗಬೇಕು ಇಲ್ಲ ಅಶುಭ,  ಒಳ್ಲೆ ಕೆಲಸಕ್ಕೂ ಮುನ್ನ ಬಲಗಡೆಯಿಂದ ಪ್ರಾರಂಭಿಸಬೇಕು. ಬಲಗಾಲಿಡಬೇಕು, ಬಲಗೈಯಿಂದ ವಸ್ತುಗಳನ್ನ ನೀಡಬೇಕು, ಬಲಗಡೆ ಮುಖಮಾಡಿ ಏಳಬೇಕು. ಹೀಗೆಲ್ಲಾ ನಾವು ಈಗಲೂ ರೂಢಿಸಿಕೊಮಡು ಬಂದಿದ್ದೇವೆ. ಕೆಲವು ನಂಬಿಕೆಗಳು ಹಾಸ್ಯಾಸ್ಪದವಾಗಿದ್ರೆ,  ಕೆಲವು ನಂಬಿಕೆಗಳ ಪರಿಣಾಮ ಅತ್ಯಂತ ಅಪಾಯಕಾರಿಯಾಗಿರುತ್ತವೆ. ಇನ್ನೂ ಕೆಲವು ಅಸಹ್ಯವಾಗಿರುತ್ತೆ.

ಇನ್ನೂ ಹೋಮ ಹವನ, ಪೂಜೆ ಪುನಸ್ಕಾರ, ಶ್ಲೋಕ – ಭಜನೆ , ಧಾರ್ಮಿಕ ಆಚರಣೆಗಳು ಮಾಡೋದು ಅವರವರ ಧಾರ್ಮಿಕ ನಂಬಿಕೆ. ಅದು ನಿಜ ಸಹ ಆಗಿರಬಹುದು. ಅವರ ಅವರ ಆಚಾರ ವಿಚಾರ , ಅನುಭವ , ನಂಬಿಕೆ. ಅವೆಲ್ಲಾ ತರ್ಕಕ್ಕೆ ನಿಲುಕದ್ದೂ. ಎಷ್ಟೇ ಚರ್ಚೆ, ಸಂವಾದ ನಡೆದರೂ ಕೊನೆಯಲ್ಲಿ ಉಳಿಯೋದು ಪ್ರಶ್ನೆನೆ. ಆದ್ರೆ ನಾವು ಕೇವಲ ವೈಜ್ಞಾನಿಕ ಅಥವ ಬೇರೆ ಕಾರಣಗಳು ಏನಿರಬಹುದು ಎಂಬೋದನ್ನ ನೋಡೋಣ…

ದೇವರು

ಅಂದ್ಹಾಗೆ ನಾವು ಬಹಳ ದುಃಖದಲ್ಲಿದ್ದಾಗ, ಜೀವನವೇ ಬೇಸರವಾದಾಗ, ಯಾರ ಬಳಿಯೂ ನಮ್ಮ ಬೇಸರವನ್ನ ಹಂಚಿಕೊಳ್ಳು ಆಗದೇ ಜಿಗುಪ್ಸೆಗೆ ಒಳಗಾದಾಗ ದೇವರ ಮೊರೆ ಹೋಗ್ತೇವೆ. ದೇವರ ಬಳಿ ಕಷ್ಟಗಳನ್ನ ಹೇಳಿಕೊಳ್ತೇವೆ. ಹಾಗಂತ ದೇವರು ಬಂದು ಎಲ್ಲಾ ಸಮಸ್ಯೆಗಳನ್ನ ಪರಿಹರಿಸ್ತಾನೆ ಅಂತಲ್ಲಾ. ನಮಗೆ ಯಾರ ಬಳಿಯೂ ನೋವನ್ನ ಹಂಚಿಕೊಳ್ಳಲು ಆಗದೇ ಇರೋ ಸಂದರ್ಭದಲ್ಲಿ ನಮ್ಮ ಆತ್ಮಸ್ಥೈರ್ಯ ಕುಂದಬಾರದು, ಧೈರ್ಯ ಸಿಗಬೇಕು, ಒಂದು ಪಾಸಿಟಿವ್ ವೈಬ್ ಅಂದ್ರೆ ಸಕಾರಾತ್ಮಕ ಚಿಂತನೆ ಸಿಗಬೇಕು. ಇದಾದ ಪಕ್ಷದಲ್ಲಿ ನಾವು ಏನೋ ಒಂದು ಮಾಡಬಹುದು, ಒಳ್ಳೆಯದಾಗುತ್ತೆ ಅನ್ನೋ ಭಾವನೆ ಬೆಳೆಸಿಕೊಳ್ತೇವೆ. ದೇವರಿದ್ದಾನೆ ಸರಿ ಹೋಗುತ್ತೆ ಅನ್ನೋ ಧೈರ್ಯ ತಂದುಕೊಂಡು ನಮ್ಮನ್ನ ನಾವು ಸಮಾಧಾನ ಮಾಡಿಕೊಳ್ತೇವೆ. ಆಗ ಬೇಸರವೂ ಕಡಿಮೆಯಾಗುತ್ತೆ. ದುಃಖವೂ ತಗ್ಗುತ್ತೆ. ಮತ್ತೊಂದು ಕಾರಣ ನಮಗೆ ದೇವಸ್ಥಾನದಲ್ಲಿ ಸಿಗುವ ನೆಮ್ಮದಿ ಪ್ರಶಾಂತತೆ ಬೇರೆಲ್ಲೂ ಸಿಗುವುದಿಲ್ಲ. ಆಗ ಆಲೋಚನೆ ಮಾಡಿ ನಮ್ಮ ಸಮ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುವ ಅವಕಾಶವೂ ಸಿಗುತ್ತೆ.  ದೇವಾಲದ ವಾತಾವರಣ ನೆಮ್ಮದಿಯೂ ನೀಡುತ್ತೆ. ಹೀಗಾಗಿ ದೇವಾಲಯಗಳಿಗೆ ಹೋಗ್ತಾರೆ.  ಮನಸನ್ನ ಹಗುರ ಮಾಡಿಕೊಳ್ತಾರೆ.

ಮತ್ತೆ ದೇವರ ಹೆಸರು ಹೇಳಿದರೆ ಜನರು ಭಯಪಟ್ಟು ಕೆಟ್ಟ ಕೆಲಸ ಅಥವ ನಕಾರಾತ್ಮಕ ಯೋಚನೆಗಳಿಂದ ದೂರ ಉಳಿಯುತ್ತಾರೆ. ಏನೋ ತಪ್ಪು ಮಾಡೋ ಮುನ್ನ ದೇವರು ನೋಡುತ್ತಾನೆ. ಶಾಪ ಕೊಡ್ತಾನೆ ಹೀಗೆ ಆಲೋಚಿಸಿ ಕೆಲವೊಮ್ಮೆ  ಅಂತಹ ಕೆಲಸಗಳಿಗೆ ಕೈ ಹಾಕೋದಿಲ್ಲ. ಹೀಗಾಗಿ ನಮ್ಮ ಪೂರ್ವಜರು ದೇವರಹೆಸರಲ್ಲಿ ಶಿಕ್ಷಣ ನೀಡ್ತಿದ್ರು ಅಂತ ಸಹ ನಾವು ಹೇಳಬಹುದು.

ಮುಟ್ಟಾದ ಸಂದರ್ಭದಲ್ಲಿ ದೇವಾಲಯಕ್ಕೆ ಹೋಗಬಾರದು

ವೈಜ್ಞಾನಿಕವಾಗಿ ನೋಡೋದಾದ್ರೆ ಹಿಂದೆಲ್ಲಾ ಈಗಿನಷ್ಟು ಸಂಚಾರಕ್ಕೆ ಸುಗಮವಾದ ರಸ್ತೆಗಳಾಗಲಿ ವಾಹನಗಳಾಗಲಿ ಇರಲಿಲ್ಲ. ತಂತ್ರಜ್ಞಾನ ಅಷ್ಟಾಗಿ ಮುಂದುವರೆದಿರಲಿಲ್ಲ. ಆಗೆಲ್ಲಾ ದೇವಾಲಯಗಳಿಗೆ ಹೋಗಬೇಕಾದ್ರೆ ಮೈಲಿಗಟ್ಟಲೆ ನಡೆಯಬೇಕಿತ್ತು.  ಆದ್ರೆ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಅಷ್ಟೆಲ್ಲಾ ಕಷ್ಟಪಟ್ಟು ನಡೆಯುವುದಕ್ಕೆ , ಕೆಲಸ ಮಾಡುವುದಕ್ಕೆ ಶಕ್ತಿ ಇರುವುದಿಲ್ಲ. ಆ ಸಮಯದಲ್ಲಿ ದೈಹಿಕವಾಗಿಯೂ ದುರ್ಬಲರಾಗಿರ್ತಾರೆ ಮಾನಸಿಕವಾಗಿಯೂ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಹೀಗಾಗಿಯೇ ಅವರಿಗೆ ವಿಶ್ರಾಂತಿ ನೀಡಲು ದೇವಾಲಯಗಳಿಗೆ ಹೋಗಬಾರದು, ಮನೆಯಲ್ಲಿ ಒಂದು ಮೂಲೆಯಲ್ಲಿರಬೇಕು, ಪೂಜೆ ಕೆಲಸ ಮಾಡಬಾರದು ಎಂದು ಪೂರ್ವಜರು ದೇವರ ಹೆಸರಲ್ಲಿಕಟ್ಟುಪಾಡುಗಳನ್ನ ತಂದರು. ಆದ್ರೆ ಇದು ಕ್ರಮೇಣ ಮಡಿ ಮೈಲಿಗೆಯ ರೂಪ ಪಡೆದುಕೊಳ್ತು.

 ತುಳಸಿ ಗಿಡಕ್ಕೆ ಸಂಜೆ ಕೈ ಹಾಕಬಾರದು

ಈ ವಿಚಾರಕ್ಕೆ ನಾನಾ ತರ್ಕಗಳು ಕಾರಣಗಳಿವೆ. ಆದ್ರೆ ವೈದ್ಯಕೀಯವಾಗಿ ನೋಡೋದಾದ್ರೆ ತುಳಸಿಯಲ್ಲಿ ಔಷಧೀಯ ಗುಣ ಸಮೃದ್ಧವಾಗಿರುತ್ತೆ. ಇದು ಒಂದು ಕಾರಣ ಪ್ರತಿ ಮನೆಯ ಮುಂದೆ ತುಳಸಿ ಇರುತ್ತೆ. ಆದ್ರೆ ಸಂಜೆ ವೇಳೆ ಔಷಧೀಯ ಗುಣ ಕ್ಷೀಣಿಸಿರುತ್ತೆ. ಇದು ಒಂದು ಕಾರಣ

ಸಂಜೆ ಗಿಡಗಳಿಗೆ ಕೈ ಹಾಕಬಾರದು

ಸಂಜೆ ಹೊತ್ತಿನಲ್ಲಿ ಗಿಡಗಳು ಮರಗಳ ಬಳಿ ಹೋಗಬಾರದು ಅನ್ನೋದಕ್ಕೆ ಕಾರಣ ಅಂದ್ರೆ ಆ ಹೊತ್ತಿನಲ್ಲಿ ಮರ ಗಿಡಗಳ ಬಳಿ ಹುಳ ಹಪ್ಪಟೆಗಳು, ಹಾವು ಚೇಳುಗಳು ಇದ್ದರೆ ಕತ್ತಲಲ್ಲಿ ಕಾಣಿಸೋದಿಲ್ಲ. ಉದಾಹರಣೆಗೆ ಹಸಿರು ಹಾವು ಗಿಡದಲ್ಲಿದ್ದರೂ ನಮಗೆ ಗೊತ್ತಾಗೋದಿಲ್ಲ. ಅದು ನೋಡೋದಕ್ಕೆ ಹಸಿರು ಬಳ್ಳಿಯಂತೆಯೇ ಇರುತ್ತೆ. ಇಂತಹ  ಕಾರಣಗಳಿಂದಾಗಿ ಯಾರಿಗೂ ಅಪಾಯವಾಗಬಾರದು ಎಂಬ ಕಾರಣದಿಂದಲೇ ಆಗೆಲ್ಲಾ ಸಂಜೆಯಾದ್ಮೇಲೆ ಗಿಡಗಳಿಗೆ ಕೈಹಾಕಬಾರದು ಎಂದು ಹೇಳ್ತಿದ್ರು ಪೂರ್ವಜರು. ಆದ್ರೆ ಇದಕ್ಕೆ ಬೇರೆ ಬೇರೆ ಕಾರಣಗಳೂ ಸಹ ಇರಬಹುದು.

 ಅರಳಿ ಮರ ಭೂತಗಳ ನಿವಾಸ..!

ಅರಳಿ ಮರದಲ್ಲಿ  ಭೂತ ಪ್ರೇತಗಳ ವಾಸಸ್ಥಾನವೆಂಬ ನಂಬಿಕೆ ಈಗಲೂ ಇದೆ. ಸಂಜೆ ಹೊತ್ತು ಆ ಮರದ ಕೆಲಗೆ ಹೋಗಬಾರದು ಎಂಬ ಮೂಡನಂಬಿಕೆ ಇದೆ. ಆದ್ರೆ ಇದರ ನಿಜವಾದ ಕಾರಣ ಈ ಮರವು ರಾತ್ರಿ ವೇಳೆ ಇಂಗಾಲದ ಆಮ್ಲ (Carbon Di Oxide) ಹೊರ ಸೂಸುತ್ತೆ. ಇದು ಮಾನವನ ಆರೋಗ್ಯಕ್ಕೆ ಹಾನಿಕಾರಕ ಹೀಗಾಗಿಯೇ  ಮರದ ಕೆಳಗೆ ನಿಂತರೂ ಅಥವಾ ಮಲಗಿದರೂ ಸಾಕಷ್ಟು ಅಪಾಯಕಾರಿ..  ಹೀಗಾಗಿ ಈ ಮರದಿಂದ ದೂರವಿಡಲು ಪೂರ್ವಜರು ಭೂತ ಪ್ರೇತದ ಕಥೆ ಕಟ್ಟಿದರು. ಇಲ್ಲ ಮತ್ತೊಂದು ಕಾರಣ ಆಗೆಲ್ಲಾ  ವಿಜ್ಞಾನ ದುರ್ಬಲವಾಗಿತ್ತು. ಸರಿಯಾಗಿ ಕಾರಣ ತಿಳಿಯದೇ ಮರದ ಕೆಳಗೆ ಮಲಗಿದಾಗ ಅಪಾಯಗಳಾಗ್ತಿದ್ದ ಹಿನ್ನೆಲೆ ಇಲ್ಲೇನೋ ಇದೆ. ಅದೇ ಹೀಗೆಲ್ಲಾ ಮಾಡ್ತಿರೊದು ಅನ್ನೋ ನಂಬಿಕೆ ಬೆಲಸಿಕೊಂಡು ಕ್ರಮೇಣ ಅದು ಆಚರಣೆಯೇ ಆಯಿತು.

 ಸಂಜೆ ಕೂದಲು ಬಾಚಬಾರದು, ಉಗುರು ಕತ್ತರಿಸಬಾರದು

ಅಂದ್ಹಾಗೆ ನಾವೆಲ್ಲಾ ಕೆಳೇ ಇರುತ್ತೇವೆ. ಸಂಜೆ ಕೂದಲು ಬಾಚಿದ್ರೆ ದರಿದ್ರ ಉಗುರು ಕತ್ತರಿಸಿದ್ರೆ ದರಿದ್ರ ಅಂತ . ಆದ್ರೆ ವೈಜ್ಞಾನಿಕ ಕಾರಣ ಅಂದ್ರೆ ಹಿಂದೆಲ್ಲಾ ಲೈಟ್ ಗಳು ಇರುತ್ತಿರಲಿಲ್ಲ. ಎಣ್ಣೆ ದೀಪಗಳಿಂದ ಅಷ್ಟು ಪ್ರಕಾಶಮಾನ ಬೆಳಕು ಕಾಣಿಸುತ್ತಿರಲಿಲ್ಲ.  ಹೀಗಾಗಿ ಉಗುರು ಕತ್ತರಿಸಿದ್ರೆ, ಅಪ್ಪಿತಪ್ಪಿ ನೆಲಕ್ಕೆ ಬಿದ್ರೆ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಕೂದಲು  ಬಾಚಿದರು ಅಷ್ಟೇ. ಹೀಗೆ ಕೆಳಗೆ ಬವೀಳುತ್ತಿದ್ದ ಕೂದಲು , ಉಗುರು ಅಪ್ಪಿ ತಪ್ಪಿ ಊಟದ ಜೊತೆ ಸೇರಿ ತಮ್ಮ ದೇಹ ಸೇರಿದ್ರೆ ಅದು ಆರೋಗ್ಯಕ್ಕೆ ಅಪಾಯವಾಗುತ್ತಿತ್ತು. ಹೀಗಾಗಿಯೇ ದರಿದ್ರದ ಹೆಸರು ಕೊಟ್ಟು ಜನರಲ್ಲಿ ಭಯ ಹುಟ್ಟಿಸಿ , ಈ ಮೂಲಕ ಶಿಸ್ತು ಬೆಳೆಸುವ ಪ್ರಯತ್ನಮಾಡಿದ್ರು ಪೂರ್ವಜರು.

 ಸಂಜೆ ಕನ್ನಡಿ ನೋಡಬಾರದು, ರಾತ್ರಿ ಕಸ ಎಸೆಯಬಾರದು

ಸಂಜೆ ಕನ್ನಡಿ ನೊಡಿದ್ರೆ ದೆವ್ವ ಮೈಮೇಲೆ ಬರುತ್ತೆ ಅನ್ನೋ ಮೂಡ ನಂಬಿಕೆಯಿದೆ. ಆದ್ರೆ ವೈಜ್ಞಾನಿಕವಾಗಿ ಹಿಂದಿನ ಕಾಲದಲ್ಲಿ ಬೆಳಕು ಅಷ್ಆಗಿ ಇರುತ್ತಿರಲಿಲ್ಲ. ಕತ್ತಲಲ್ಲಿ ಕನ್ನಡಿಯಲ್ಲಿ ನಮ್ಮ ಮುಖ ಭಯಾನಕವಾಗಿ ವಿರೂಪವಾಗಿ ಕಾಣುತ್ತಿತ್ತು. ಆಗ ನಮ್ಮೊಳಗೆ ಒಂದು ನಕಾರಾತ್ಮಕ ಬಾವನೆ ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಿದ್ವು. ಹೀಗಾಗಿಯೇ ಕನ್ನಡಿ ನೋಡಬಾರದು ಅಂತ ಹೇಳುತ್ತಿದ್ದರು. ಇದು ಇದೀಗ  ಒಂದು ಪ್ರಬಲ ಮೂಡನಂಬಿಕೆಯಾಗಿದೆ.

ರಾತ್ರಿ ಕಸ ಎಸೆಯಬಾರದು ಅನ್ನೋದಕ್ಕೆ ಕಾರಣ ಏನೆಂದ್ರೆ ಆಗಿನ ಕಾಲದಲ್ಲಿ ಹೊರಗಡೆ ಬೀದಿ ದೀಪಗಳಿರುತ್ತಿರಲಿಲ್ಲ. ಕಾಡು ಹೆಚ್ಚಾಗಿತ್ತು. ಕತ್ತಲಾದ್ರೆ ಕಾಡು ಪ್ರಾಣಿಗಳ ಓಡಾಟ ಹೆಚ್ಚಿರುತ್ತಿತ್ತು.   ಹಾವು ಚೇಳುಗಳಂತಹ ವಿಷಕಾರಿ ಸರಿಸೃಪಗಳ ಆತಂಕವೂ ಇತ್ತು. ಕತ್ತಲ್ಲಲ್ಲಿ ಏನೂ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಇದೇ  ಕಾರಣ ಆ ಸಮಯದಲ್ಲಿ ಸಮಯದಲ್ಲಿ ಕಸ ಬಿಸಾಡಲು ಆಚೆ ಹೋದ್ರೆ ಅಪಾಯಕಾರಿ ಎಂಬ ಕಾರಣಕ್ಕೆ  ಈ ಕಟ್ಟುಪಾಡು ಕುಟ್ಟಿಕೊಳ್ತು. ಕ್ರಮೆಣ  ಅದು ಮೂಡನಂಬಿಕೆಯಾಗಿ ಸಂಜೆ ಕಸ ಬಿಸಾಡಿದ್ರೆ ದರಿದ್ರ ಎಂಬ ನಂಬಿಕೆ ಶುರುವಾಯ್ತು.  ಜಗತ್ತಿನಲ್ಲಿ , ಭಾರತದಲ್ಲಿ ಇರುವ ಸಹಸ್ರಾರು ಮೂಡನಂಬಿಕೆಗಳಲ್ಲಿ  ಇವು ಬೆರಳೆಣಿಯಷ್ಟು ಮಾತ್ರ.

ಮೂಢನಂಬಿಕೆಗಳು ಎಲ್ಲ ಕಾಲದ ಎಲ್ಲ ದೇಶದಗಳಲ್ಲೂ ಇವೆ.  ಆದ್ರೆ  ಭಾರತೀಯರಿಗೆ ಮಾತ್ರ ಮೂಢನಂಬಿಕೆ ಹೆಚ್ಚೆಂದೂ ವಾದಿಸುವವರು,  ಭಾರತೀಯರು ಮೂಢನಂಬಿಕೆಗಳಿಂದಲೇ ಹಿಂದೆ ಉಳಿದಿದ್ದಾರೆ ಎಂಬುವವರು ಹೆಚ್ಚು. ಆದ್ರೆ ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನ ಈ ದಿನ ನಾವೆಲ್ಲರೂ ವಿಚಾರ ಮಾಡಬೇಕು, ಪ್ರಶ್ನೆ ಮಾಡಬೇಕು. ಯಾಕಂದ್ರೆ ಇಡೀ ವಿಶ್ವಾದ್ಯಂತ ಎಲ್ಲರು ತಮ್ಮ ದಿನಂಪ್ರತಿ ಜೀವನದಲ್ಲಿ ತಮಗೇ ಗೊತ್ತಿಲ್ಲದೇ ಕೆಲ ರೂಢಿಗಳನ್ನ ಪಾಲಿಸಿಕೊಮಡು ಬರುತ್ತಿದ್ದು, ಅವೆಲ್ಲವೂ ಮೂಡನಂಬಿಕೆಯ ಲಿಸ್ಟ್ ಗೆ ಸೇರಿಕೊಳ್ತಾವೆ.

 

Tags: #saakshatvritualssuperstisious
ShareTweetSendShare
Join us on:

Related Posts

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

ತುಮಕೂರು 2ನೇ ಬೆಂಗಳೂರು ಆಗಲಿ: ಡಿಕೆ ಶಿವಕುಮಾರ್ ಬೆಂಬಲ

by Shwetha
May 20, 2026
0

ಡಿಕೆ ಶಿವಕುಮಾರ್ ಅವರು ತುಮಕೂರನ್ನು 2ನೇ ಬೆಂಗಳೂರು ಆಗಿ ಅಭಿವೃದ್ಧಿಪಡಿಸುವ ಆಲೋಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ತುಮಕೂರಿನಲ್ಲಿ ಆಯೋಜಿಸಿದ್ದ...

ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯಬೇಡಿ: ಇಂಧನ ದರ ಏರಿಕೆ ವಿರುದ್ಧ ಸಿಎಂ ಗುಡುಗು ; ಪ್ರಧಾನಿ ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ದೇಶದ ಬೆಲೆ ಏರಿಕೆಗೆ ಮೋದಿ ಸರ್ಕಾರವೇ ಕಾರಣ: ಸಿದ್ದರಾಮಯ್ಯ

by Shwetha
May 20, 2026
0

ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ನೇರ ಕಾರಣ ಎಂದು...

ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್

ರೇಷನ್ ಕಾರ್ಡ್ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್

by Shwetha
May 20, 2026
0

ರಾಜ್ಯದ ಜನಸಾಮಾನ್ಯರಿಗೆ ಮತ್ತು ಬಡ ಕುಟುಂಬಗಳಿಗೆ ಕರ್ನಾಟಕ ಸರ್ಕಾರವು ಮಹತ್ವದ ಕೊಡುಗೆಯೊಂದನ್ನು ನೀಡಿದೆ. ಇನ್ನು ಮುಂದೆ ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ಕೇವಲ ಅಕ್ಕಿ, ಬೇಳೆ...

ನಮ್ಮ ದೇವಾಲಯಕ್ಕೆ ಚಪ್ಪಲಿ ಧರಿಸಿ ಬರಬೇಡ:ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಸಿಗರು

ನಮ್ಮ ದೇವಾಲಯಕ್ಕೆ ಚಪ್ಪಲಿ ಧರಿಸಿ ಬರಬೇಡ:ಮುಸ್ಲಿಂ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಸಿಗರು

by Shwetha
May 20, 2026
0

ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಗುಹಾಲಯದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಶ್ವ ವಿಖ್ಯಾತ ಬಾದಾಮಿ ಗುಹೆಗಳಲ್ಲಿ ಮುಸ್ಲಿಂ ಯುವತಿಯೊಬ್ಬಳು ಚಪ್ಪಲಿ...

ವಿದೇಶಿ ಮಾಧ್ಯಮಗಳ ಮುಂದೆ ಮೋದಿ ಸೈಲೆಂಟ್: ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಹುವಾ ಮೊಯಿತ್ರಾ ವ್ಯಂಗ್ಯ

ವಿದೇಶಿ ಮಾಧ್ಯಮಗಳ ಮುಂದೆ ಮೋದಿ ಸೈಲೆಂಟ್: ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಹುವಾ ಮೊಯಿತ್ರಾ ವ್ಯಂಗ್ಯ

by Shwetha
May 20, 2026
0

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಂಚಿಕೊಂಡಿರುವ ಒಂದು ಪೋಸ್ಟ್ ಈಗ ಭಾರತದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆ ಭೇಟಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram