ಬೆಂಗಳೂರು: ಅನುಮಾನಸ್ಪದ ರೀತಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಮಹಾಲಕ್ಷ್ಮಿ ಲೇಔಟ್ನ (Mahalakshmi Layout) ಶ್ರೀ ಕಂಠೇಶ್ವರ ನಗರದಲ್ಲಿ ನಡೆದಿದೆ. ಗೃಹಿಣಿ (House Wife) ಯು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರೇಮಲತಾ (35) ಸಾವನ್ನಪ್ಪಿದ ಮಹಿಳೆ ಎನ್ನಲಾಗಿದೆ.
ಪತಿ ಶಿವಶಂಕರ್ ಕೊಲೆ ಮಾಡಿ ನೇಣು ಬಿಗಿದಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡ ಮಹಾಲಕ್ಷ್ಮಿ ಲೇಔಟ್ನ ಪೊಲೀಸರು, ಶಿವಶಂಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.