T20 World Cup: ವಿರಾಟ್ ಹುಟ್ಟುಹಬ್ಬಕ್ಕೆ ಅಡಿಲೇಡ್ ಅಭಿಮಾನಿಗಳ ಅಡ್ವಾನ್ಸ್ ವಿಶ್….
ICC T20 ವಿಶ್ವಕಪ್ 2022 ರಲ್ಲಿ, ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನವೆಂಬರ್ 6 ರಂದು ಆಡಲಿದೆ. ನವೆಂಬರ್ 2 ರಂದು, ಟೀಮ್ ಇಂಡಿಯಾ ಅಡಿಲೇಡ್‌ನಲ್ಲಿ ತನ್ನ ನಾಲ್ಕನೇ ಲೀಗ್ ಪಂದ್ಯವನ್ನು ಬಾಂಗ್ಲಾ ವಿರುದ್ಧ ಆಡಿತ್ತು.
ಇದೀಗ ಟೀಂ ಇಂಡಿಯಾ ಅಡಿಲೇಡ್‌ನಿಂದ ಮೆಲ್ಬೋರ್ನ್‌ಗೆ ತೆರಳಿದೆ. ಈ ವೇಳೆ ಅಡಿಲೇಡ್‌ನಲ್ಲಿ ವಿರಾಟ್ ಕೊಹ್ಲಿ ಅವರ ಜನ್ಮದಿನಚರಣೆಯ ಪೋಸ್ಟರ್ ಗಳು ಕಂಡು ಬಂದಿವೆ. ನವೆಂಬರ್ 5 ರಂದು ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬವಿದ್ದ ಕಾರಣ ಮೆಲ್ಬೋರ್ನ್ ನಲ್ಲಿ ಅಭಿಮಾನಿಗಳು ಮುಂಚಿತವಾಗಿ ವಿಶ್ ಮಾಡಿದ್ದಾರೆ.
ಟೀಮ್ ಇಂಡಿಯಾ ಅಡಿಲೇಡ್‌ನಿಂದ ಮೆಲ್ಬೋರ್ನ್‌ಗೆ ಹೊರಡುವಾಗ, ಅಭಿಮಾನಿಗಳು ಹ್ಯಾಪಿ ಬರ್ತ್‌ಡೇ ವಿರಾಟ್‌ನ ಪೋಸ್ಟರ್ ಅನ್ನ ಹೊತ್ತುಕೊಂಡು ಬಂದಿದ್ದರು. ಜನ್ಮದಿನಕ್ಕೆ ಮುಂಚಿತವಾಗಿ ಶುಭಾಶಯಗಳನ್ನ ಕೋರಿದರು. ಹೋಟೆಲ್ ಮತ್ತು ವಿಮಾನ ನಿಲ್ದಾಣದ ಹೊರಗೆ ಅಭಿಮಾನಿಗಳು ವಿರಾಟ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿದರು. ವಿರಾಟ್ ಕೂಡ ಕೈ ಎತ್ತಿ ಅಭಿಮಾನಿಗಳ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದರು. ವಿರಾಟ್ ಕೊಹ್ಲಿ 5 ನವೆಂಬರ್ 1988 ರಂದು ಜನಿಸಿದರು.
2022ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವಿರಾಟ್ ಬ್ಯಾಟ್ ನಿಂದ ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕಗಳು ಬಂದಿವೆ. ಈ ಮೆಗಾ ಇವೆಂಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ವಿರಾಟ್ ಪಾತ್ರರಾಗಿದ್ದಾರೆ. ಮೊದಲ ನಾಲ್ಕು ಪಂದ್ಯಗಳ ಪೈಕಿ ಎರಡರಲ್ಲಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
T20 World Cup: Advance wishes from Adelaide fans for Virat’s birthday….