T20 World Cup : 42 ರನ್ ಗಳಿಂದ ಆಸ್ಟ್ರೇಲಿಯಾ ಮಣಿದ ಐರ್ಲೆಂಡ್ …
ಸೋಮವಾರ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಐರ್ಲೆಂಡ್ ತಂಡವನ್ನು 42 ರನ್ಗಳಿಂದ ಮಣಿಸಿದೆ. ಬ್ರಿಸ್ಬೇನ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ನಾಯಕ ಆಂಡ್ರ್ಯೂ ಬಲ್ಬಿರ್ನಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆಸ್ಟ್ರೇಲಿಯಾ 20 ಓವರ್ಗಳಲ್ಲಿ 5 ವಿಕೆಟ್ಗೆ 179 ರನ್ ಗಳಿಸಿತು. ಉತ್ತರವಾಗಿ ಐರ್ಲೆಂಡ್ 18.1 ಓವರ್ಗಳಲ್ಲಿ 137 ರನ್ಗಳಿಗೆ ಆಲೌಟ್ ಆಯಿತು.
ಐರ್ಲೆಂಡ್ ಪರ ಲೋರ್ಕನ್ ಟಕರ್ 71 ರನ್ ಗಳಿಸಿ ಔಟಾಗದೆ ಉಳಿದರು. ಎರಡನೇ ಓವರ್ನಲ್ಲಿ ಮೊದಲ ವಿಕೆಟ್ ಪತನವಾದ ನಂತರ ಟಕರ್ ಕೊನೆಯವರೆಗೂ ಉಳಿದರು, ಆದರೆ ತಂಡವನ್ನ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಉಳಿದ ಐರಿಶ್ ಬ್ಯಾಟರ್ ಕೂಡ ಸಹಕರಿಸಲಿಲ್ಲ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯ 5 ಅಂಕಗಳೊಂದಿಗೆ ಗುಂಪು-1ರಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಗುಂಪಿನಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ.
ಐರ್ಲೆಂಡ್ ತಂಡದ ಅರ್ಧದಷ್ಟು ಮಂದಿ 25 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದರು. ಟಕ್ಕರ್ ಕೊನೆಯವರೆಗೂ ನಿಂತರು, ಆದರೆ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗಲಿಲ್ಲ. ಇವರನ್ನು ಬಿಟ್ಟರೆ ಐರ್ಲೆಂಡ್ನ ಯಾವೊಬ್ಬ ಬ್ಯಾಟ್ಸ್ಮನ್ಗಳು 15ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ಪರ ಗ್ಲೆನ್ ಮ್ಯಾಕ್ಸ್ವೆಲ್, ಆಡಮ್ ಝಂಪಾ, ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ 2-2 ವಿಕೆಟ್ ಪಡೆದರು. ಮಾರ್ಕಸ್ ಸ್ಟೊಯಿನಿಸ್ ಒಂದು ವಿಕೆಟ್ ಪಡೆದರು.
ಫಿಂಚ್, ಮಾರ್ಷ್ ಮತ್ತು ಸ್ಟೊಯಿನಿಸ್ ರನ್ ಗಳಿಸಿದರು
ಆಸ್ಟ್ರೇಲಿಯಾ ಪರ ನಾಯಕ ಆ್ಯರನ್ ಫಿಂಚ್ 44 ಎಸೆತಗಳಲ್ಲಿ 63 ರನ್ ಗಳಿಸಿ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು. ಸ್ಟೊಯಿನಿಸ್ 25 ಎಸೆತಗಳಲ್ಲಿ 35 ಮತ್ತು ಮಿಚೆಲ್ ಮಾರ್ಷ್ 28 ರನ್ ಗಳಿಸಿದರು. ಐರ್ಲೆಂಡ್ ಪರ ಬ್ಯಾರಿ ಮೆಕಾರ್ಥಿ 29ಕ್ಕೆ 3 ಮತ್ತು ಜೋಶುವಾ ಲಿಟಲ್ 21ಕ್ಕೆ 2 ವಿಕೆಟ್ ಪಡೆದರು.
T20 World Cup : Australia Vs Ireland World Cup