ಟೂರ್ನಿಗೆ ಗುಡ್ಬೈ ಹೇಳಲು ಬಾಂಗ್ಲಾ ರೆಡಿ- ಕೊನೆಯ 2 ಪಂದ್ಯ ಗೆಲ್ಲೋದು ಆಸ್ಟ್ರೇಲಿಯಾ ಪ್ಲಾನ್..!
ಬಾಂಗ್ಲಾದೇಶ ಸೂಪರ್ 12ನಲ್ಲಿ ಮೊದಲ ತಂಡವಾಗಿ ಎಲ್ಲಾ ಪಂದ್ಯಗಳನ್ನು ಆಡಿ ಮುಗಿಸಲಿದೆ.
ಅಷ್ಟೇ ಅಲ್ಲ ಸೆಮಿಫೈನಲ್ ಆರಂಭವಾಗುವುದಕ್ಕೂ ಮುನ್ನ ತವರು ಸೇರಿಕೊಳ್ಳಲಿದೆ.
ಇನ್ನೊಂದೆಡೆ ಆಸ್ಟ್ರೇಲಿಯಾ ಕೊನೆಯ ಎರಡು ಪಂದ್ಯಗಳಲ್ಲಿ ಗೆಲುವು ಮಾತ್ರವನ್ನು ದೊಡ್ಡ ಗೆಲುವಿನ ನಿರೀಕ್ಷೆ ಮಾಡುತ್ತಿದೆ.
ದುಬೈನಲ್ಲಿ ಬಾಂಗ್ಲಾದೇಶ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಸೂಪರ್ 12ರಲ್ಲಿ ಬಾಂಗ್ಲಾದೇಶ ಆಡಿರುವ ನಾಲ್ಕೂ ಪಂದ್ಯಗಳನ್ನು ಸೋತಿದೆ.
ಆಸ್ಟ್ರೇಲಿಯಾ ಸೋತಿದ್ದು ಒಂದೇ ಪಂದ್ಯವನ್ನಾದರೂ ಹೀನಾಯವಾಗಿ ಸೋತಿದ್ದು ಅದರ ರನ್ ರೇಟ್ಗೆ ಏಟು ಕೊಟ್ಟಿದೆ.
ಆಸ್ಟ್ರೇಲಿಯಾದ ಸೆಮಿಫೈನಲ್ ಆಸೆ ಜೀವಂತ ಇರಬೇಕಾದರೆ ಬಾಂಗ್ಲಾದೇಶ ಹಾಗೂ ವೆಸ್ಟ್ಇಂಡೀಸ್ ವಿರುದ್ಧದ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವುದು ಅನಿವಾರ್ಯ.
ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಹೊರತು ಪಡಿಸಿ ಉತ್ತಮ ಆಟವನ್ನೇ ಆಡಿದೆ. ಬ್ಯಾಟಿಂಗ್ನಲ್ಲಿ ವಾರ್ನರ್ ಮತ್ತು ಫಿಂಚ್ ಫಾರ್ಮ್ಗೆ ಬಂದಿದ್ದಾರೆ.
ಗ್ಲೆನ್ ಮ್ಯಾಕ್ಸ್ವೆಲ್, ಮಿಚೆಲ್ ಮಾರ್ಷ್ ಮತ್ತು ಮಾರ್ಕಸ್ ಸ್ಟೋಯ್ನಿಸ್ ಅಬ್ಬರದ ಆಟಕ್ಕೆ ಫೇಮಸ್.
ಸ್ಟೀವನ್ ಸ್ಮಿತ್ ಮತ್ತು ಮ್ಯಾಥ್ಯೂ ವೇಡ್ ಪರಿಸ್ಥಿತಿ ನೋಡಿಕೊಂಡು ಆಡಬಲ್ಲರು.
ಬೌಲಿಂಗ್ನಲ್ಲಿ ಜೋಶ್ ಹೇಜಲ್ವುಡ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಡೇಂಜರಸ್.
ಆ್ಯಡಂ ಝಂಪಾ ಸ್ಪಿನ್ ತಂಡಕ್ಕೆ ಗೆಲುವು ತಂದುಕೊಟ್ಟಿದೆ.
ಬಾಂಗ್ಲಾದೇಶ ಸೂಪರ್ 12 ಹಂತದಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಕೈ ಕೊಟ್ಟಿದೆ.
ಆದರೆ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಟೂರ್ನಿಗೆ ಗುಡ್ ಬೈ ಹೇಳುವ ಲೆಕ್ಕಾಚಾರದಲ್ಲಿದೆ.
ಒಟ್ಟಿನಲ್ಲಿ ಬಾಂಗ್ಲಾ ಟೂರ್ನಿಗೆ ಗುಡ್ ಬೈ ಹೇಳುವ ಮೊದಲು ಆಸ್ಟ್ರೇಲಿಯಾವನ್ನು ಸೋಲಿಸಿ ಅದರ ಆಸೆಗೂ ತಣ್ಣೀರೆರಚುತ್ತಾ ಅಥವಾ ಮತ್ತೊಂದು ಕಳಪೆ ಪ್ರದರ್ಶನ ನೀಡುತ್ತಾ ಅನ್ನೋದಷ್ಟೇ ಈ ಪಂದ್ಯದ ಕುತೂಹಲ