ಬುಮ್ರಾ ವೃತ್ತಿಜೀವನ ಟಿ20 ವಿಶ್ವಕಪ್ಗಿಂತ ಮುಖ್ಯ – ರೋಹಿತ್ ಶರ್ಮಾ
ವೇಗಿ ಜಸ್ಪ್ರೀತ್ ಬುಮ್ರಾ ಅವರ ವೃತ್ತಿಜೀವನ ಟಿ20 ವಿಶ್ವಕಪ್ಗಿಂತ ಮುಖ್ಯವಾಗಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಶನಿವಾರ ಹೇಳಿದ್ದಾರೆ.
ವಿಶ್ವಕಪ್ ನ ಮುನ್ನಾದಿನದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, “ಜಸ್ಪ್ರೀತ್ ಬುಮ್ರಾ ಅವರ ವೃತ್ತಿಜೀವನವು ಟಿ 20 ವಿಶ್ವಕಪ್ಗಿಂತ ಹೆಚ್ಚು ಮುಖ್ಯವಾಗಿದೆ ಎಂದು ನಾನು ಭಾವಿಸುತ್ತೇನೆ. ವಿಶ್ವಕಪ್ ನಿಸ್ಸಂದೇಹವಾಗಿ ಮುಖ್ಯ ಆದರೆ ಅವರ ವೃತ್ತಿಜೀವನವು ಅದಕ್ಕಿಂತ ಮುಖ್ಯವಾಗಿದೆ. ಅವರ ವಯಸ್ಸು ಕೇವಲ 27-28 ಮತ್ತು ಅವರ ಮುಂದೆ ಸಾಕಷ್ಟು ಕ್ರಿಕೆಟ್ ಇದೆ. ಅವರ ಗಾಯಗಳ ಬಗ್ಗೆ ನಾವು ಹಲವಾರು ತಜ್ಞರೊಂದಿಗೆ ಮಾತನಾಡಿದ್ದೇವೆ, ಆದರೆ ನಮಗೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ ಎಂದು ತಿಳಿಸಿದ್ದಾರೆ.
“ಬುಮ್ರಾಗೆ ಅಹ್ವಾನ ನೀಡುವ ಮೂಲಕ ನಾವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾವು ಮಾತನಾಡಿದ ತಜ್ಞರು ಸರ್ವಾನುಮತದಿಂದ ಇದ್ದರು. ಆದರೆ ಬಮ್ರಾ ಮುಂದೆ ಸಾಕಷ್ಟು ಕ್ರಿಕೆಟ್ ಇದೆ, ಅವರು ಹೆಚ್ಚು ಹೆಚ್ಚು ಆಡಬೇಕಾಗುತ್ತದೆ. ಭಾರತಕ್ಕೆ ಪಂದ್ಯಗಳನ್ನ ಗೆಲ್ಲಲು ಸಹಾಯ ಮಾಡುತ್ತಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಬೆನ್ನುನೋವಿನಿಂದ ಬಳಲುತ್ತಿರುವ ಬುಮ್ರಾ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ಸಂಪೂರ್ಣ ಫಿಟ್ ಆಗಲು ಇನ್ನೂ ಆರು ವಾರಗಳ ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆ ಇದೆ. ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಅವರನ್ನು 15 ಮಂದಿಯ ತಂಡದಲ್ಲಿ ಸೇರಿಸಿಕೊಳ್ಳುವುದಾಗಿ ಬಿಸಿಸಿಐ ಪ್ರಕಟಿಸಿದೆ.
T20 World Cup: Bumrah’s career more important than T20 World Cup – Rohit Sharma