T20 World Cup | ಟಿ 20 ವಿಶ್ವಕಪ್ ನ ಟಾಪ್ 5 ಡೇಂಜರಸ್ ಬ್ಯಾಟರ್ಸ್ ಇವರೇ
ಟಿ 20 ವಿಶ್ವಕಪ್ ಟೂರ್ನಿಯ ಮೊದಲ ಹಂತದ ಪಂದ್ಯಗಳು ಆರಂಭವಾಗಿವೆ. ಈ ನಡುವೆ ಈ ಮೆಗಾ ಟೂರ್ನಿಯಲ್ಲಿ ಮೋಸ್ಟ್ ಡೇಂಜರ್ಸ್ ಬ್ಯಾಟರ್ಸ್ ಯಾರು ? ಯಾವ ತಂಡದ ಯಾವ ಬ್ಯಾಟರ್ ಎದುರಾಳಿಗಳಿಗೆ ಭಯ ಹುಟ್ಟಿಸುತ್ತಾರೆ ? ಎಂಬ ಕುತೂಹಲಕಾರಿ ಪ್ರಶ್ನೆಗಳು ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿವೆ.
ಟಿ 20 ಕ್ರಿಕೆಟ್ ಎಂದರೇ ಅಲ್ಲಿ ಸಿಡಿಲಬ್ಬರದ ಬ್ಯಾಟರ್ ಗಳಿಗೆ ಬೆಲೆ ಜಾಸ್ತಿ. ಕಣ್ಣು ಮುಚ್ಚಿ ತೆಗೆಯುವುದರಲ್ಲಿ ಪಂದ್ಯದ ಗತಿಯನ್ನ ಬದಲಿಸಬಲ್ಲ ಆಟಗಾರರ ಮೇಲೆ ಎಲ್ಲರ ಕಣ್ಣು ಇರುತ್ತದೆ. ಹಾಗಾದ್ರೆ ಯಾವ ಯಾವ ತಂಡದಲ್ಲಿ ಅಪಾಯಕಾರಿ ಬ್ಯಾಟರ್ ಗಳಿದ್ದಾರೆ ? ಸದ್ಯ ಟಿ 20 ಕ್ರಿಕೆಟ್ ನ ಮೋಸ್ಟ್ ಡೇಂಜರ್ಸ್ ಬ್ಯಾಟರ್ ಗಳು ಯಾರು ?
ಈ ಪಟ್ಟಿಯಲ್ಲಿ ಸದ್ಯಕ್ಕೆ ಮೊದಲ ಸ್ಥಾನದಲ್ಲಿ ನಿಲ್ಲುವುದು ವಿಶ್ವಕ್ರಿಕೆಟ್ ನ ರೈಸಿಂಗ್ ಸ್ಟಾರ್ ಸೂರ್ಯ ಕುಮಾರ್ ಯಾದವ್.
ಹೌದು..! ಟಿ 20 ಮಾದರಿ ಕ್ರಿಕೆಟ್ ನಲ್ಲಿ ಸೂರ್ಯ ಕುಮಾರ್ ಯಾದವ್ ಆಡಿದ್ದೇ ಆಟವಾಗುತ್ತಿದೆ. ಟೀಂ ಇಂಡಿಯಾಗೆ ಎಂಟ್ರಿಕೊಟ್ಟಾಗಿನಿಂದಲೂ ತಮ್ಮದೇಯಾದ ಬ್ಯಾಟಿಂಗ್ ಮೂಲಕ ಮಿಸ್ಟರ್ 360 ಡಿಗ್ರಿ ಬ್ಯಾಟರ್ ಅಂತಾ ಕರೆಸಿಕೊಳ್ಳುತ್ತಿದ್ದಾರೆ. ಸೂರ್ಯ ಕುಮಾರ್ ಯಾದವ್ ಈವರೆಗೂ 23 ಪಂದ್ಯಗಳನ್ನಾಡಿದ್ದು, ಬರೋಬ್ಬರಿ 18.56ರ ಸ್ಟ್ರೈಕ್ ರೇಟ್ ನೊಂದಿಗೆ 801 ರನ್ ಗಳಿಸಿದ್ದಾರೆ.
ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಟೀಮ್ ಡೇವಿಡ್ ಸ್ಥಾನ ಪಡೆದುಕೊಂಡಿದ್ದಾರೆ.
ಟಿಮ್ ಡೇವಿಡ್, ಸದ್ಯ ಟಿ 20 ಕ್ರಿಕೆಟ್ ನ ಡೆವಿಲ್ ಅಂತಾನೆ ಕರೆಸಿಕೊಳ್ಳುತ್ತಿದ್ದಾರೆ. ಸಿಂಗಾಪೂರದ ಈ ಯುವ ಬ್ಯಾಟರ್ ಹಲವು ಟಿ 20 ಕ್ರಿಕೆಟ್ ಲೀಗ್ ಗಳಲ್ಲಿ ತಮ್ಮ ತಾಕತ್ತು ತೋರಿಸಿದ್ದಾರೆ. ಟಿ 20 ಕ್ರಿಕೆಟ್ ನಲ್ಲಿ ಇವರ ಸ್ಟ್ರೈಕ್ ರೇಟ್ 160.08.
ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮತ್ತೊಬ್ಬ ಬ್ಯಾಟರ್ ಗ್ಲೆನ್ ಮ್ಯಾಕ್ಸ್ ವೆಲ್ ಇದ್ದಾರೆ.
ಮ್ಯಾಡ್ ಮ್ಯಾಕ್ಸಿಯ ಆಟದ ಬಗ್ಗೆ ನಾವು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾಕಂದರೆ ಆಸ್ಟ್ರೇಲಿಯಾ ಪರ ಆಡುವಾಗ ಹಾಗೇ ಐಪಿಎಲ್ ನಲ್ಲಿ ಮ್ಯಾಕ್ಸಿ ಬ್ಯಾಟಿಂಗ್ ತಾಕತ್ತು ಏನು ಎಂಬುದನ್ನ ನಾವು ಕಣ್ಣಾರೆ ನೋಡಿದ್ದೇವೆ. ಮ್ಯಾಕ್ಸಿ ಈವರೆಗೂ ಟಿ 20 ಕ್ರಿಕೆಟ್ ನಲ್ಲಿ 84 ಪಂದ್ಯಗಳನ್ನಾಡಿದ್ದು, 150.40 ಸ್ಟ್ರೈಕ್ ರೇಟ್ ನಲ್ಲಿ 2041 ರನ್ ಗಳಿಸಿದ್ದಾರೆ.
ನಾಲ್ಕನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಎವಿನ್ ಲೆವಿಸ್ ಸ್ಥಾನ ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಸದ್ಯ ಬ್ಯಾಡ್ ಫಾರ್ಮ್ ನಲ್ಲಿರಬಹುದು. ಆದ್ರೆ ಟಿ 20 ಕ್ರಿಕೆಟ್ ನಲ್ಲಿ ಅವರು ಯಾವುದೇ ಸಂದರ್ಭದಲ್ಲದ್ರೂ ಕಂ ಬ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ವೆಸ್ಟ್ ಇಂಡೀಸ್ ತಂಡದಲ್ಲಿ ಘಟಾನುಘಟಿ ಬ್ಯಾಟರ್ ಗಳ ದಂಡೇ ಇದೆ. ಅದರಲ್ಲಿ ಎವಿನ್ ಲೆವಿಸ್ ಹೆಸರು ಸದ್ಯ ತುಸು ಹೆಚ್ಚಾಗಿ ಕೇಳಿಬರುತ್ತಿದೆ. ಎವಿನ್ 50 ಟಿ 20 ಪಂದ್ಯಗಳಲ್ಲಿ 154.85 ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದಾರೆ.
ಐದನೇ ಸ್ಥಾನದಲ್ಲಿ ನ್ಯೂಜಿಲೆಂಡ್ ನ ಜೇಮ್ಸ್ ನಿಶಾಮ್ ಇದ್ದು, ಇವರು ಟಿ 20 ಕ್ರಿಕೆಟ್ ನಲ್ಲಿ 163.66ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸುತ್ತಾರೆ. ಆಸ್ಟ್ರೇಲಿಯಾದಲ್ಲಿ ಪಂದ್ಯಗಳು ನಡೆಯುತ್ತಿರುವುದರಿಂದ ನಿಶಾಮ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಇವರು ಮಾತ್ರವಲ್ಲದೇ ಟಿ 20ಯಲ್ಲಿ ರನ್ ಸುನಾಮಿ ಎಬ್ಬಿಸಬಲ್ಲ ಆಟಗಾರರು ಬಹುತೇಕ ಎಲ್ಲಾ ತಂಡಗಳಲ್ಲಿದ್ದಾರೆ. ಅದರಲ್ಲೂ ಟೀಂ ಇಂಡಿಯಾದ ಪರ ಆಡುವ ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ ಮೈದಾನದಲ್ಲಿ ಒಂದು ಬಾರಿ ಸೆಟಲ್ ಆದ್ರೆ ಪ್ರಳಯನ್ನೇ ಸೃಷ್ಟಿಸಬಲ್ಲರು. ಈ ಇಬ್ಬರು ಆಟಗಾರರು ಎದುರಾಳಿಗಳಿಗೆ ಕಂಟಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.