T20 World Cup | ಚುಟುಕು ಮಹಾಸಮರದ ಮಹಾರಾಜರು ಇವರೇ..
ಇಂದಿನಿಂದ ಟಿ – 20 ವಿಶ್ವಕಪ್ ಮಹಾ ಸಮರ ಆರಂಭವಾಗಿದ್ದು, ಮುಂದಿನ ವಾರ ಪ್ರಮುಖ ಮ್ಯಾಚ್‌ಗಳು ಶುರುವಾಗಲಿವೆ. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಬೌಲರ್‌ಗಳು ನರ್ತನ ಮಾಡ್ತಾರಾ ಅಥವಾ ಬ್ಯಾಟ್ಸ್‌ಮನ್‌ಗಳು ಅಬ್ಬರಿಸುತ್ತಾರಾ ಅನ್ನು ಪ್ರಶ್ನೆಗಳಿಗೆ ಇನ್ನೇನು ಕೆಲವ ದಿನಗಳಲ್ಲಿ ಉತ್ತರ ಸಿಗಲಿದೆ.
ಈ ನಡುವೆ ಕಳೆದ 7 ಆವೃತ್ತಿಯಲ್ಲಿ ಟಾಪ್ ಸ್ಕೋರರ್ ಗಳು ಯಾರು ? ಈವರೆಗೆ ನಡೆದ ಮಹಾ ಸಮರದ ಮಹಾರಾಜ ಯಾರು ಎಂಬುದರ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಉತ್ತರ, ಶ್ರೀಲಂಕಾದ ಮಿಸ್ಟರ್ ಡಿಪೆಂಡಬಲ್ ಮಹೇಲಾ ಜಯವರ್ಧನೆ..!!
ಹೌದು..! ಮಹೇಲಾ ಜಯವರ್ಧನೆ ಚುಟುಕು ಮಹಾಸಮರದಲ್ಲಿ ನಾಲ್ಕಂಕಿ ಗಡಿ ದಾಟಿದ ಏಕೈಕ ಬ್ಯಾಟ್ಸ್‌ಮನ್. ಆದರೆ ಈ ವಿಶ್ವಕಪ್‌ನಲ್ಲಿ ಜಯವರ್ಧನೆ ದಾಖಲೆ ಪತನವಾಗುವುದು ಖಚಿತ. ಯಾಕಂದರೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಈ ಫೈಟ್ ನಡೆಯುತ್ತದೆ.

ಜಯವರ್ಧನೆ ಟಿ 20 ವಿಶ್ವಕಪ್ ನಲ್ಲಿ 31 ಪಂದ್ಯಗಳನ್ನಾಡಿದ್ದು, 1016 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ 33 ಪಂದ್ಯಗಳಲ್ಲಿ 965 ರನ್ ಗಳಿಸಿ ಕ್ರಿಸ್ ಗೇಲ್ ಇದ್ದಾರೆ. 35 ಪಂದ್ಯಗಳಲ್ಲಿ 897 ರನ್ ಗಳೊಂದಿಗೆ ತಿಲಕರತ್ನೆ ದಿಲ್ಶಾನ್ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 33 ಪಂದ್ಯಗಳಲ್ಲಿ 847 ರನ್ ಗಳೊಂದಿಗೆ ನಾಲ್ಕನೇ, ವಿರಾಟ್ ಕೊಹ್ಲಿ 21 ಪಂದ್ಯಗಳಲ್ಲಿ 845 ರನ್ ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಮೊದಲ ಮೂವರು ಬ್ಯಾಟರ್ ಗಳು ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದು, ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಅವರ ರನ್ ದಾಖಲೆಯನ್ನು ಮುರಿಯುವ ಸಾಧ್ಯತೆಗಳಿವೆ.
ಸದ್ಯ ವಿರಾಟ್ ಕೊಹ್ಲಿ ತಮ್ಮ ಹಳೆಯ ಟಚ್ ಕಂಡುಕೊಂಡಿದ್ದು, ಈ ಬಾರಿಯ ವಿಶ್ವಕಪ್ ನಲ್ಲಿ ಟಾಪ್ ಸ್ಕೋರರ್ ಆಗಿ ನಿಲ್ಲುವ ಸಾಧ್ಯತೆಗಳು ಹೆಚ್ಚಿವೆ. ಇತ್ತ ರೋಹಿತ್ ಶರ್ಮಾ ಕೂಡ ಯಾವುದೇ ಕ್ಷಣದಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.
ಇದಲ್ಲದೆ ಟೀಂ ಇಂಡಿಯಾದ ಉಪ ನಾಯಕ ಕೆ.ಎಲ್.ರಾಹುಲ್ ಕೂಡ ಈ ಬಾರಿಯ ವಿಶ್ವಕಪ್ ನಲ್ಲಿ ರನ್ ಸುನಾಮಿ ಎಬ್ಬಿಸುವ ತಾಕತ್ತು ಹೊಂದಿದ್ದಾರೆ.