ಬೇಕಾಗುವ ಪದಾರ್ಥಗಳು
ಟಮೋಟೋ – 4
ಉಣಸೆ ಹುಳಿ – ಚಿಕ್ಕ ನಿಂಬೆ ಗಾತ್ರದಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ ಮೆಣಸು
ಒಣಗಿನ ಮೆಣಸಿನ ಕಾಯಿ
ಖಾರದ ಪುಡಿ
ಸಾಸಿವೆ
ಕರಿಬೇವು
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ : ತವಾ ಮೇಲೆ ಮೊದಲಿಗೆ ಟಮೋಟೋವನ್ನ ಸ್ವಲ್ಪ ಎಣ್ಣೆ ಸಹಾಯದಿಂದ ರೋಸ್ಟ್ ಮಾಡಿ , ಆ ನಂತರ ಅದರ ಜೊತೆಗೆ ಉಣಸೆ , ಬೆಳ್ಳುಳ್ಳಿ , ಜೀರಿಗೆ , ಮೆಣಸು ರೋಸ್ಟ್ ಮಾಡಿ ಎಲ್ಲವನ್ನೂ ಮಿಕ್ಸರ್ ಗೆ , ಖಾರದ ಪುಡಿಯನ್ನೂ ಹಾಕಿ ನಿಮಗೆ ಬೇಕಾದ ತೆಳು ಗಟ್ಟಿ ಹದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿ.. ರುಬ್ಬಲು ಕೊತ್ತಂಬರಿ ಬೇಕಿದ್ದರೆ ಹಾಕಿಕೊಳ್ಳಿ..
ಆನಂತರ ಒಗ್ಗರಣೆ ಪ್ಯಾನ್ ಗೆ ಎಣ್ಣೆ ಹಾಕಿ , ಸಾಸಿವೆ ಒಂದೆರೆಡು ಬೆಳ್ಳುಳ್ಳಿ ಚೆಚ್ಚಿ ಹಾಕಿ ಒಂದು ಚಿಟುಕೆ ಅರಿಶಿಣ ಪುಡಿ ಹಾಕಿ , ಒಣಮೆಣಸಿನ ಕಾಯಿ ಹೋಳು ಕರಿಬೇವು ಹಾಕಿ ಹೆಚ್ಚು ಹೊತ್ತು ಕಾಯಿಸದೇ ತೆಗೆದು ಟಟಮೋಟೋ ಮಿಶ್ರಣಕ್ಕೆ ಹಾಕಿ ಆ ನಂತರ ಮತ್ತೆ ಕೊತ್ತಂಬರಿ ಸೊಪಪ್ಪನ್ನ ಹೆಚ್ಚಿ ಹಾಕಿ… ಟೇಸ್ಟಿ ಖಾರ ಖಾರವಾದ ಟಮೋಟೋ ಚೆಟ್ನಿ 5 ನಿಮಿಷಗಳಲ್ಲಿ ರೆಡಿ…