ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಅಭ್ಯಾಸ..!

1 min read
team india saakshatv

ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಅಭ್ಯಾಸ..!

rahul dravid team india saakshatvಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ-ಟ್ವೆಂಟಿ ಪಂದ್ಯ ನವೆಂಬರ್ 17ರಂದು ಜೈಪುರದಲ್ಲಿ ನಡೆಯಲಿದೆ.
ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಮೊದಲ ಟೆಸ್ಟ್. ಹಾಗೇ ನಾಯಕ ರೋಹಿತ್ ಶರ್ಮಾ ಅವರಿಗೂ ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಸವಾಲಾಗಿದೆ.
ಈಗಾಗಲೇ ಉಭಯ ತಂಡಗಳು ಜೈಪುರದಲ್ಲಿ ಬೀಡು ಬಿಟ್ಟಿದ್ದು, ಅಭ್ಯಾಸದಲ್ಲೂ ನಿರತವಾಗಿವೆ.
ಇನ್ನೊಂದೆಡೆ ಟೀಮ್ ಇಂಡಿಯಾ ಆಟಗಾರರು ಹೊಸ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದರು.
ತಂಡದ ಅಂತಿಮ 11ರ ಬಳಗದ ಆಯ್ಕೆ ಹಾಗೂ ಗೇಮ್ ಪ್ಲಾನ್ ಬಗ್ಗೆಯೂ ರಾಹುಲ್ ದ್ರಾವಿಡ್ ತಂಡದ ನಾಯಕ ಹಾಗೂ ಆಟಗಾರರ ಜೊತೆಗೆ ಸಂವಾದ ಕೂಡ ನಡೆಸಿದ್ದಾರೆ.
ಇನ್ನು ಹಾಲಿ ಭಾರತದ ತಂಡದಲ್ಲಿ ಕೆಲವು ಆಟಗಾರರನ್ನು ಹೊರತುಪಡಿಸಿ ಬಹುತೇಕ ಆಟಗಾರರು ಈ ಹಿಂದೆ ರಾಹುಲ್ ಗರಡಿಯಲ್ಲಿ ಪಳಗಿದವರೇ. ಹಾಗಾಗಿ ತಂಡದ ಡ್ರೇಸಿಂಗ್ ರೂಮ್ ನ ವಾತಾವರಣ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆಗಳೇ ಇಲ್ಲ.
ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಸೀನಿಯರ್ ಪ್ಲೇಯರ್ ಆಗಿದ್ದಾರೆ.
ಒಟ್ಟಿನಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ಯಾವ ರೀತಿಯ ಪ್ರದರ್ಶನ ನೀಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಟೀಮ್ ಇಂಡಿಯಾ ಟಿ-20 ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಇಶಾನ್ ಕಿಶಾನ್, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಆರ್. ಅಶ್ವಿನ್, ಅಕ್ಸರ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷೆಲ್ ಪಟೇಲ್, ಮಹಮ್ಮದ್ ಸೀರಾಜ್, ಪ್ರಸಿದ್ಧ್ ಕೃಷ್ಣ.

ನ್ಯೂಜಿಲೆಂಡ್ ಟಿ-ಟ್ವೆಂಟಿ ತಂಡ
ಕಾನೇ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟ್ಲೆ, ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಲೂಕಿ ಫಗ್ರ್ಯುಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜಾಮಿನ್ಸನ್, ಆಡಮ್ ಮಿಲ್ನೆ, ಡೆರಿಲ್ ಮಿಟ್ಚೆಲ್, ಜಿಮ್ಮಿ ನಿಶಾನ್,. ಗ್ಲೇನ್ ಫಿಲಿಪ್ಟ್, ಮಿಟ್ಚೆಲ್ ಸ್ಯಾಂಟ್ನರ್, ಟಿಮ್ ಸೆಫರ್ಟ್, ಈಶ್ ಸೋಧಿ, ಟೀಮ್ ಸೌಥಿ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd