Virat Kohli : ಕೊಹ್ಲಿಯನ್ನ ಫಾರ್ಮ್ ಗೆ ತರಬಲ್ಲ ಏಕೈಕ ವ್ಯಕ್ತಿ ಸಚಿನ್
ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಅವರನ್ನ ಮತ್ತೆ ದಾರಿಗೆ ತರಬಲ್ಲ ಏಕೈಕ ವ್ಯಕ್ತಿ ಸಚಿನ್ ತೆಂಡುಲ್ಕರ್ ಮಾತ್ರ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ ಪ್ರಸ್ತುತ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೂರಂಕಿ ದಾಟಿ ಸುಮಾರು ಮೂರು ವರ್ಷಗಳೇ ಕಳೆದಿವೆ.
ಈ ವರ್ಷ ಇಲ್ಲಿಯವರೆಗೂ 18 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ವಿರಾಟ್ ಕೊಹ್ಲಿ 459 ರನ್ ಗಳನ್ನ ಮಾತ್ರ ಸಾಧಿಸಿದ್ದಾರೆ. ಈ ವರ್ಷ ಅವರ ವಯುಕ್ತಿಕ ಗರಿಷ್ಠ ಸ್ಕೋರ್ 79 ರನ್ ಮಾತ್ರ.
ವಿರಾಟ್ ಕೊಹ್ಲಿ ವಿಷಯದಲ್ಲಿ ಸಚಿನ್ ಪ್ರವೇಶಿಸಬೇಕು ಎಂದು ನಾನು ಎಂಟು ತಿಂಗಳ ಹಿಂದೆಯೇ ಹೇಳಿದ್ದೆ.

ಸಚಿನ್ ಕೊಹ್ಲಿ ಜೊತೆ ಮಾತನಾಡಬೇಕು. ಯಾಕಂದರೇ 14 ಹರಯದಲ್ಲಿಯೇ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಸಚಿನ್, ತನ್ನ ಕೆರಿಯರ್ ನಲ್ಲಿ ಅದೆಷ್ಟೋ ಏರಿಳಿತಗಳನ್ನು ಕಂಡಿದ್ದಾರೆ.
ಆದ್ದರಿಂದ ಕೊಹ್ಲಿ ವಿಷಯದಲ್ಲಿ ಸಚಿನ್ ಮಾತ್ರವೇ ಸರಿಯಾದ ವ್ಯಕ್ತಿ ಎಂದು ನಾನು ಭಾವಿಸುತ್ತಿದ್ದೇನೆ.
ಒಂದು ವೇಳೆ ಸಚಿನ್ ಜೊತೆ ಮಾತನಾಡಲು ವಿರಾಟ್ ಸಂಕೋಚಿಸಿದ್ರೆ ಸಚಿನ್ ಅವರೇ ಕೊಹ್ಲಿ ವಿಚಾರದಲ್ಲಿ ಜೊಕ್ಯ ಮಾಡಿಕೊಳ್ಳಬೇಕು.
ಇನ್ನು ಯಾವುದೇ ಆಟಗಾರನಾಗಿದ್ದರೂ ಯಾವುದೋ ಒಂದು ಸಂದರ್ಭದಲ್ಲಿ ಇಂತಹ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಾನೆ.
ನಾವು ಅನುಭವಿರುವ ಆಟಗಾರರು, ಹೀಗಾಗಿ ನಾವು ಯುವ ಆಟಗಾರರೊಂದಿಗೆ ಚರ್ಚಿಸಬೇಕು. ವಿರಾಟ್ ಕೊಹ್ಲಿಯನ್ನ ಫಾರ್ಮ್ ತರಲು ಸಚಿನ್ ಕೃಷಿಸಬೇಕು ಎಂದಿದ್ದಾರೆ.