ಮೊರಾಕೊದ ಅಜಿಲಾಲ್ ಪ್ರದೇಶದಲ್ಲಿ ಬಸ್ ಅಪಘಾತದಲ್ಲಿ 24 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೊರೊಕನ್ ಸಣ್ಣ ಪಟ್ಟಣ ಡೆಮ್ನೆಟ್ ನಲ್ಲಿ ಮಾರುಕಟ್ಟೆಗೆ ತೆರಳುತ್ತಿದ್ದ ಮಿನಿಬಸ್ ಪಲ್ಟಿಯಾದ ಪರಿಣಾಮ ಈ ಘಟನೆ ಸಂಭವಿಸಿದೆ. ಕಾರಣ ತಿಳಿಯಲು ತನಿಖೆ ಪ್ರಾರಂಭಿಸಲಾಗಿದೆ. ರಾಯಲ್ ಜೆಂಡರ್ಮೆರಿ ಮತ್ತು ಸಿವಿಲ್ ಪ್ರೊಟೆಕ್ಷನ್ ಜೊತೆಗೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ ಘಟನಾ ಸ್ಥಳಕ್ಕೆ ಆಗಮಿಸಿದ್ದರು.
ಇದಕ್ಕೂ ಮುನ್ನ, 2015 ರಲ್ಲಿ ದಕ್ಷಿಣ ಮೊರಾಕೊದಲ್ಲಿ ಯುವ ಕ್ರೀಡಾಪಟುಗಳ ನಿಯೋಗವನ್ನು ಹೊತ್ತೊಯ್ಯುತ್ತಿದ್ದ ಸೆಮಿ ಟ್ರೈಲರ್ ಟ್ರಕ್ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿ 33 ಜನರು ಸಾವನ್ನಪ್ಪಿದ್ದರು. ಕಳೆದ ವರ್ಷ ಆಗಸ್ಟ್ನಲ್ಲಿ, ಮೊರಾಕೊದ ಆರ್ಥಿಕ ರಾಜಧಾನಿಯಾದ ಕಾಸಾಬ್ಲಾಂಕಾದ ಪೂರ್ವದ ತಿರುವಿನಲ್ಲಿ ಬಸ್ ಪಲ್ಟಿಯಾಗಿ 23 ಜನರು ಸಾವನ್ನಪ್ಪಿದರು ಹಾಗೂ ಈ ವೇಳೆ 36 ಜನರು ಗಾಯಗೊಂಡಿದ್ದರು.
ಮೊರಾಕೊದ ರಾಷ್ಟ್ರೀಯ ರಸ್ತೆ ಸುರಕ್ಷತಾ ಏಜೆನ್ಸಿಯಂತೆ, ದೇಶದಲ್ಲಿ ಪ್ರತಿ ವರ್ಷ ಸರಾಸರಿ 3,500 ಸಾವುಗಳು ರಸ್ತೆಗಳಲ್ಲಿ ಸಂಭವಿಸುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.








