Terrorist : ಉಗ್ರರಿಂದ ಮುಕ್ತವಾಗಿದೆ ಕಾಶ್ಮೀರದ ಮೂರು ಜಿಲ್ಲೆ
ಭಯೋತ್ಪಾದಕರ ನೆಚ್ಚಿನ ತಾಣ ಕಾಶ್ಮೀರ ಈಗ ಅವರಿಂದ ಮುಕ್ತವಾಗುತ್ತಿದೆ. ಈಗ ಸದ್ಯಕ್ಕೆ ಕಾಶ್ಮೀರದ ಬಂಡಿಪೊರ, ಕುಪ್ವಾರ ಮತ್ತು ಗಾಂದರ್‌ಬಲ್ ಜಿಲ್ಲೆಗಳಲ್ಲಿ ಉಗ್ರರೇ ಇಲ್ಲ. ಈ ವರ್ಷ 169 ಉಗ್ರರನ್ಙು ಹೊಡೆದುರುಳಿಸಲಾಗಿದ್ದು, ಅದರಲ್ಲಿ 127 ಸ್ಥಳೀಯ ಮತ್ತು 42 ವಿದೇಶಿ ಉಗ್ರರು ಸೇರಿದ್ದಾರೆ.

ಅಷ್ಟೇ ಅಲ್ಲ ಭಾರತೀಯ ಸೇನೆಯು, ಲಷ್ಕರ್–ಎ–ತೈಯಬಾ ಮತ್ತು ಜೈಷ್–ಎ–ಮಹಮ್ಮದ್‌ನಂಥ ಪ್ರಮುಖ ಉಗ್ರ ಸಂಘಟನೆಗಳ ಉಗ್ರರನ್ನು ಕಾರ್ಯಾಚರಣೆ ಮತ್ತು ಎನ್‌ಕೌಂಟರ್ ಮೂಲಕ ಸದೆಬಡಿದಿದೆ.
ಇದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾಶ್ಮೀರ ವಲಯ) ವಿಜಯ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ. ಕಾಶ್ಮೀರದ ಬಂಡಿಪೊರ, ಕುಪ್ವಾರ ಮತ್ತು ಗಾಂದರ್‌ಬಲ್ ಜಿಲ್ಲೆಗಳಲ್ಲಿ ಯಾವುದೇ ಸಕ್ರಿಯ ಸ್ಥಳೀಯ ಉಗ್ರರಿಲ್ಲ. ಈ ಮೂರು ಜಿಲ್ಲೆಗಳು ಉಗ್ರರಿಂದ ಮುಕ್ತವಾಗಿವೆ ಎಂದು ಅವರು ಹೇಳಿದ್ದಾರೆ.
ಆದರೆ ಬಂಡಿಪೊರ ಮತ್ತು ಕುಪ್ವಾರದಲ್ಲಿ ಕನಿಷ್ಠ ಏಳು ಮಂದಿ ವಿದೇಶಿ(ಪಾಕಿಸ್ತಾನಿ) ಭಯೋತ್ಪಾದಕರಿದ್ದು, ಕಾಶ್ಮೀರದ 13 ಪೊಲೀಸ್ ಜಿಲ್ಲೆಗಳಲ್ಲಿ 29 ಸ್ಥಳೀಯ ಉಗ್ರರು ಮತ್ತು 52 ಪಾಕಿಸ್ತಾನಿ ಉಗ್ರರು ಸೇರಿ 81 ಮಂದಿ ಉಗ್ರರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಎರಡು ವರ್ಷದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿ ಉಗ್ರರಿಂದ ಮುಕ್ತಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.
terrorist-three-districts-of-kashmir-are-free-from-terrorists