ಭಾರತದಲ್ಲಿ 3 ಟೆಸ್ಲಾ ಶೋ ರೂಮ್ , ಬೆಂಗಳೂರಿನಲ್ಲಿ 1 ಶೋ ರೂಮ್ ಇರಲಿದೆ..!
ಬೆಂಗಳೂರು : ಜಗತ್ತಿನ ದೈತ್ಯ ಎಲೆಕ್ಟ್ರಿಕಲ್ ಕಾರು ತಯಾರಿಕಾ ಸಂಸ್ಥೆಯಾದ ಟೆಸ್ಲಾದ ಹೊಸ ಬ್ರಾಂಚ್ ನ ಶೋ ರೂಮ್ ಬೆಂಗಳೂರಿನಲ್ಲಿ ತೆರೆಯಲಿದೆ. ಹೌದು ಟೆಸ್ಲಾ ಕಂಪನಿ, ಭಾರತದಲ್ಲಿ ತನ್ನ ಕಾರು ತಯಾರಿಕಾ ಘಟಕ ಸ್ಥಾಪಿ ಸಲಿದೆ ಎನ್ನುವ ಗುಮಾನಿಗಳಿವೆ.
ಈ ನಡುವೆ ಬೆಂಗಳೂರಿನಲ್ಲಿ ಟೆಸ್ಲಾ ಕಂಪನಿ ತನ್ನ ಮೊದಲ ಶೋರೂಂ ತೆರೆಯಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಭಾರತದಲ್ಲಿ ಟೆಸ್ಲಾ 3 ಶೋ ರೂಮ್ ಗಳನ್ನ ತೆರೆಯಲಿದ್ದು, ಒಂದು ಬೆಂಗಳೂರಿನಲ್ಲೇ ಎಮದು ಹೇಳಲಾಗ್ತಿದೆ. ಇನ್ನೆರಡನ್ನು ನವದೆಹಲಿ ಹಾಗೂ ಮುಂಬೈನಲ್ಲಿ ತೆರೆಯಲು ಕಂಪನಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ.