ಪತ್ರಕರ್ತರ ಮೇಲೆ ಸ್ಯಾನಿಟೈಸರ್ ಸಿಂಪಡಿಸಿದ ಥೈಲ್ಯಾಂಡ್ ಪ್ರಧಾನಿ : VIDEO VIRAl
ಪತ್ರಕರ್ತರು ಕೇಳಿದ ಪ್ರಶ್ನೆಗಳಿಂದ ಕೆರಳಿದ ಥಾಯ್ ಪ್ರಧಾನಿ ಮಾಧ್ಯಮದವರ ಮೇಲೆಯೇ ಸ್ಯಾನಿಟೈಸರ್ ಸಿಂಪಡಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ದೇಶವನ್ನ ಪ್ರತಿನಿಧಿಸುವ ನಾಯಕರ ಇಂತಹ ನಡೆ ವಿರುದ್ಧ ನೆಟ್ಟಿಗರ ಆಕ್ರೋಶ ಭುಗಿಲೆದ್ದಿದೆ.
ಥೈಲ್ಯಾಂಡ್ ನ ಪ್ರದಾನಿ ಪ್ರಯುತ್ ಚಾನ್ ಓಚಾ ಅವರ ಈ ನಡೆಯಿಂದಾಗಿ ಪತ್ರಕರ್ತರು ಶಾಕ್ ಆಗಿದ್ದಾರೆ. ಪತ್ರಕರ್ತರ ಪ್ರಶ್ನೆಗಳಿಂದ ಕಿರಿಕಿರಿಗೊಂಡ ಪ್ರಧಾನಿ ತಾವೇ ಕರೆದಿದ್ದ ಸುದ್ದಿಗೋಷ್ಠಿಯನ್ನ ಅರ್ಧಕ್ಕೆ ನಿಲ್ಲಿಸಿ ವಾಪಸ್ ತೆರಳುವಾಗ ಪತ್ರಕರ್ತರ ಮೇಲೆ ಸ್ಯಾನಿಟೈಸರ್ ಸಿಂಪಡನೆ ಮಾಡಿದ್ದಾರೆ.
Thai prime minister sprays hand sanitizer at journalists who are seen trying to shield their faces pic.twitter.com/rEcOeqYxCt
— Reuters (@Reuters) March 9, 2021
ಪತ್ರಕರ್ತರು ಕೇಳಿದ್ದ ಪ್ರಶ್ನೆಗಳು ಯಾವುವು..?
ಕಳೆದ ವಾರ ಅವರದ್ದೇ ನೇತೃತ್ವದ ಸರ್ಕಾರದ ಮೂವರು ಸಚಿವರುಗಳನ್ನ ಅರೆಸ್ಟ್ ಮಾಡಿದ್ದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಲಾಗದೇ ಆಕ್ರೋಶಗೊಂಡು ಹೊರನಡೆದಿದ್ದಾರೆ. ಇದೇ ವೇಳೆ ಮೂಗನ್ನ ಮುಚ್ಚಿಕೊಂಡು ಪತ್ರಕರ್ತರ ಮುಖದ ಮೇಲೆ ಸ್ಯಾನಿಟೈಸರ್ ಸ್ಪ್ರೇ ಮಾಡಿದ್ದು, ಇಂತಹ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.