ಇತ್ತೀಚೆಗೆ ಹಲವಾರು ಸೆಲೆಬ್ರಿಟಿಗಳು ವಿವಾದಕ್ಕೆ ಕಾರಣವಾಗುತ್ತಿದ್ದಾರೆ. ಇಲ್ಲೊಬ್ಬ ನಟಿ ರವಿಕೆ ಧರಿಸದೆ ಕಾರ್ಯಕ್ರಮಕ್ಕೆ ಬಂದಿದ್ದಾರೆಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಮಲಯಾಳಂ ನಟಿ ಚೈತ್ರಾ ಪ್ರವೀಣ್ (Chaitra Praveen) ಈ ರೀತಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಕೆರಳಿದ್ದಾರೆ. ಜನರನ್ನು ಮೆಚ್ಚಿಸಲು ಈ ರೀತಿ ಮಾಡಬಾರದು. ಅಲ್ಲದೇ, ಕಾಸ್ಟ್ಯೂಮ್ ವಿಷಯದಲ್ಲಿ ನೀವು ಪದೇ ಪದೇ ಈ ರೀತಿ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೈತ್ರಾ ನಟನೆಯ ಎಲ್.ಎಲ್.ಬಿ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಇವೆಂಟ್ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಚೈತ್ರಾ ಕಪ್ಪು ಬಣ್ಣದ ಸೀರೆ ಧರಿಸಿದ್ದರು. ಮೈಬಣ್ಣದ ರವಿಕೆ ಹಾಕಿದ್ದರು. ಹೀಗಾಗಿ ಸಖತ್ ಹಾಟ್ ಹಾಟ್ ಆಗಿಯೇ ಕಂಡರು.
ಇವೆಂಟ್ ಸಂದರ್ಭದಲ್ಲಿ ಡಾನ್ಸ್ ಮಾಡಿದಾಗ ಸೀರೆ ಜಾರಿದ ಪ್ರಸಂಗವೂ ನಡೆದಿದೆ. ಈ ಕುರಿತಾಗಿಯೂ ನೆಟ್ಟಿಗರು ನಟಿಗೆ ಚಳಿ ಬಿಡಿಸಿದ್ದಾರೆ. ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ, ಪ್ರಚಾರ ತೆಗೆದುಕೊಳ್ಳುವ ಯಾವ ಉದ್ದೇಶವೂ ನನಗೆ ಇಲ್ಲ. ಇಷ್ಟಪಟ್ಟು ಹಾಕಿದ ಸೀರೆ ಅದು. ನನಗೆ ಸೀರೆ ಎಂದರೆ ಇಷ್ಟ. ಮೈ ತೋರಿಸುವಂತಹ ಯಾವುದೇ ಖಯಾಲಿ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.