ಭಾರತದ ಉಕ್ಕಿನ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿದ್ದು, ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಮಹಿಳೆ ತನ್ನ ಬೆನ್ನಿನ ಮೇಲೆ ಮೂರು ಟಯರ್ಗಳನ್ನು ಹೊತ್ತುಕೊಂಡಿದ್ದಾರೆ. ಕವಿ ಎಂಬ ವೃತ್ತಿಪರ ವೇಟ್ಲಿಫ್ಟರ್ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕಂಡವರು ಮಹಿಳೆಯ ಸಾಹಸಕ್ಕೆ ಮೆಚ್ಚುಗೆ ಹಾಗೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಈ ಮಹಿಳೆಯು ಬೆನ್ನ ಮೇಲೆ ಟಯರ್ ಗಳನ್ನು ಹೊತ್ತುಕೊಂಡಿದ್ದಾರೆ. ಇದನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ಈ ಟಯರ್ಗಳೇ ನಕಲಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಕ್ಕೆ ಸುಮಾರು 50 ಜನರು ಅವನ ವಿರುದ್ಧ ತಿರುಗಿ ಬಿದ್ದಿದ್ಧಾರೆ. ವೃತ್ತಿಪರ ವೇಟ್ಲಿಫ್ಟರ್ ಆಕೆ. ಆಕೆಯ ಶಕ್ತಿ, ಸಾಧನೆಯನ್ನು ಹೀಗೆ ಅವಮಾನಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.