ಅಬುಜಾ: ಪ್ರಧಾನಿ ನರೇಂದ್ರ ಮೋದಿಗೆ ನೈಜೀರಿಯಾ (Nigeria) ಸರ್ಕಾರ ದೇಶದ ಅತ್ಯುನ್ನತ ಎರಡನೇ ಗೌರವ ನೀಡಿ ಗೌರವಿಸಿದೆ.
ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ನೈಜೀರಿಯಾ ಸರ್ಕಾರ (Nigeria Government) ಈ ಗೌರವ ನೀಡಿದೆ. `ದಿ ಗ್ರ‍್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ (The Grand Commander of The Order of the Niger) ನೀಡಿ ಗೌರವಿಸಿದೆ. ಪ್ರಧಾನಿ ಮೋದಿಯವರಿಗೆ ದೇಶವೊಂದು ನೀಡುತ್ತಿರುವ 17ನೇ ಅಂತರರಾಷ್ಟ್ರೀಯ ಗೌರವ ಇದಾಗಿದೆ.
ನೈಜೀರಿಯಾದ ಈ ಗೌರವ ಪಡೆದುಕೊಂಡ ಎರಡನೇ ಅಂತಾರಾಷ್ಟ್ರೀಯ ಗಣ್ಯ ವ್ಯಕ್ತಿ ಮೋದಿ ಆಗಿದ್ದಾರೆ. ಇದಕ್ಕೂ ಮುನ್ನ ರಾಣಿ ಎಲಿಜಬೆತ್ ಅವರು 1969ರಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಐದು ದಿನಗಳ ಪ್ರವಾಸದಲ್ಲಿರುವ ಮೋದಿ ಭಾನುವಾರ (ನ.17) ನೈಜೀರಿಯಾಕ್ಕೆ ಬಂದಿಳಿದಿದ್ದು, ಭಾರತದ ಪ್ರಧಾನಿಯೊಬ್ಬರು 17 ವರ್ಷಗಳ ನಂತರ ನೈಜೀರಿಯಾ ಪ್ರವಾಸ ಕೈಗೊಂಡಿದ್ದಾರೆ.
ನೈಜರೀಯಾ ಪ್ರವಾಸದ ನಂತರ ಬ್ರೆಜಿಲ್ ಮತ್ತು ಗಯಾನಾಗೆ ಪ್ರಯಾಣ ಬೆಳೆಸಲಿದ್ದಾರೆ. ನ. 18 ರಿಂದ 19 ರಂದು ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ.








