ತನ್ನ ಅಪ್ಪನಿಂದ ಒಂದು ಲಕ್ಷ ಹಣ ಪಡೆಯಲು ಮಾಸ್ಟರ್ ಪ್ಲಾನ್ ರೂಪಿಸಿದ್ದ 19 ವರ್ಷದ ಯುವತಿ ತನ್ನನ್ನು ತಾನೇ ಕಿಡ್ನಾಪ್ ಮಾಡಿಕೊಂಡ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಇಟಾದಲ್ಲಿ ನಡೆದಿದೆ. ಇನ್ನೂ ಈಕೆಗೆ ಪ್ರಿಯಕರ ಸಹ ಸಾಥ್ ನೀಡಿದ್ದ ಎನ್ನಲಾಗಿದೆ. ಈ ಯುವತಿ ಕಳೆದ 3 ದಿನಗಳಿಂದಲೇ ನಾಪತ್ತೆಯಾಗಿದ್ದಳು. ಈಕೆ ತನ್ನದೇ ಸೆಲ್ ಫೋನ್ ನಿಂದ ಪೋಷಕರಿಗೆ ಕರೆ ಮಾಡಿ ಬೇರೆ ಧ್ವನಿಯಲ್ಲಿ ಮಾತನಾಡಿದ್ದಾಳೆ. ನಿಮ್ಮ ಮಗಳು ನಮ್ಮ ಬಳಿ ಇದ್ದಾಳೆ. ಅವಳು ಬೇಕೆಂದರೆ 1 ಲಕ್ಷ ರೂಪಾಯಿ ಹಣ ಕೊಡಿ ಎಂದು ಬೆದರಿಕೆಯೊಡ್ಡಿದ್ದಾಳೆ. ಆದ್ರೆ ತಮ್ಮ ಕಿರಾತಕ ಮಗಳ ಮಾಸ್ಟರ್ ಪ್ಲಾನ್ ಅರಿಯದ ತಂದೆ ತಾಯಿ ಗಾಬರಿಗೊಂಡು ತಕ್ಷಣವೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಯುವತಿಯ ಫೋನ್ ಕಾಲ್ ಟ್ರೇಸ್ ಮಾಡುತ್ತಿದ್ದರು. ಯುವತಿ ಪದೇ ಪದೇ ಆಕೆಯದ್ದೇ ಫೋನ್ ನಂಬರ್ ನಿಂದ ಪೋಷಕರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ಎಡವಟ್ಟು ಮಾಡಿಕೊಂಡಿದ್ದಳು. ಈ ಸಣ್ಣ ತಪ್ಪಿನಿಂದಲೇ ಈಕೆಯ ಅಸಲಿಯತ್ತು ಬಟಾಬಯಲಾಯ್ತು. ಪೊಲೀಸರು ಯುವತಿಯ ನಂಬರ್ ಟ್ರ್ಯಾಕ್ ಮಾಡಿದ ಸಂದರ್ಭದಲ್ಲಿ ಆಕೆಯ ಮನೆಯಿಮದ ಕೇವಲ 2 ಕಿ.ಮೀ ದೂರದಲ್ಲಿ ಆಕೆಯ ಸೆಲ್ ಪೋನ್ ಲೊಕೇಶನ್ ಇರುವುದನ್ನು ಜಾಡು ಹಿಡಿದು ಹೊರಟ ಪೊಲಿಸರ ಕೈಗೆ ಯುವತಿ ಹಾಗೂ ಅವಳ ಪ್ರಿಯತಮ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆದ್ರೆ ಆಕೆಯ ಬಾಯ್ ಫ್ರೆಂಡ್ ಪೊಲಿಸರಿಂದ ತಪ್ಪಿಸಿಕೊಂಡಿದ್ದು, ಪೊಲಿಸರು ಹುಡುಕಾಟ ಮುಂದುವರೆಸಿದ್ದಾರೆ.
ಅನಿವಾರ್ಯವೋ ಅಥವಾ ಅತಿಯೋ: ರಾಜ್ಯಾದ್ಯಂತ ಶಾಲಾ ವಾಹನಗಳ ದರ ಏರಿಕೆಗೆ ಪೋಷಕರ ಆಕ್ರೋಶ
ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಪೋಷಕರಿಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಇತ್ತೀಚಿನ ತೈಲ ಬೆಲೆ ಏರಿಕೆಯು ನೇರವಾಗಿ ಶಾಲಾ ಮಕ್ಕಳ ಸಾರಿಗೆಯ ಮೇಲೆ...








