ಹ್ಯಾಂಗ್‌ಝೌ : ಏಷ್ಯನ್ ಗೇಮ್ಸ್‌ನ ಶಾಟ್‌ಪುಟ್ (Shotput)ನಲ್ಲಿ ಭಾರತದ ತಜೀಂದರ್‌ಪಾಲ್ ಸಿಂಗ್ ತೂರ್ (Tajinderpal Singh Toor) ಚಿನ್ನದ ಪದಕಕ್ಕೆ ಗುಂಡು ಹೊಡೆದಿದ್ದಾರೆ.
ಅರೇಬಿಯಾದ ಪ್ರತಿಸ್ಪರ್ಧಿ ಮೊಹಮದ್ ದೌಡಾ ಟೋಲೋ ಅವರ ಪೈಪೋಟಿ ಎದುರಿಸುತ್ತಿದ್ದ ತೂರ್ ಕೊನೆಯ ಪ್ರಯತ್ನದಲ್ಲಿ ದೂರ ಎಸೆದು ಚಿನ್ನ ಗೆದ್ದಿದ್ದಾರೆ. ತಜೀಂದರ್ 3ನೇ ಪ್ರಯತ್ನದಲ್ಲಿ 19.51 ಮೀಟರ್, 4ನೇ ಪ್ರಯತ್ನದಲ್ಲಿ 20.06 ಮೀಟರ್ ಗುಂಡು ಎಸೆದು ಗೆಲುವಿನ ಆತ್ಮವಿಶ್ವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಮೊಹಮದ್ ದೌಡಾ ಟೊಲೊ ತಮ್ಮ 4ನೇ ಪ್ರಯತ್ನದಲ್ಲಿ 20.18 ಮೀಟರ್ ದೂರ ಗುಂಡು ಎಸೆದು ಸವಾಲು ನೀಡಿದರು. ಇದಕ್ಕೆ ಬಗ್ಗದ ತಜೀಂದರ್ 6ನೇ ಹಾಗೂ ಕೊನೆಯ ಪ್ರಯತ್ನದಲ್ಲಿ ತಜೀಂದರ್ 20.36 ಮೀಟರ್‌ಗಳ ಪ್ರಬಲ ಎಸೆತದೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದರು.
1954 ಮತ್ತು 1958ರಲ್ಲಿ ಪರ್ದುಮಾನ್ ಸಿಂಗ್ ಬ್ರಾರ್, 1966 ಮತ್ತು 1970ರಲ್ಲಿ ಜೋಗಿಂದರ್ ಸಿಂಗ್ ಹಾಗೂ 1978 ಮತ್ತು 1982ರಲ್ಲಿ ಬಹದ್ದೂರ್ ಸಿಂಗ್ ಚೌಹಾನ್ ಈ ಸಾಧನೆ ಮಾಡಿದ್ದರು. ಈ ಮೂಲಕ ಭಾರತವು 8ನೇ ದಿನವಾದ ಭಾನುವಾರ ಬರೋಬ್ಬರಿ 15 ಪದಕಗಳನ್ನು ಬಾಚಿದೆ. ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿತ್ತು. ಭಾನುವಾರ ಒಂದೇ ದಿನ 3 ಚಿನ್ನ, 7 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಮೂಲಕ ಭಾರತದ ಪಾಲಿಗೆ 13 ಚಿನ್ನ (Gold Medal), 21 ಬೆಳ್ಳಿ ಹಾಗೂ 19 ಕಂಚಿನ ಪದಕಗಳು ಸೇರಿ 53 ಪದಕಗಳು ಧಕ್ಕಿವೆ. ಹೀಗಾಗಿ ಭಾರತವು ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.