ಜೆರುಸಲೆಂ : ಇಸ್ರೇಲ್-ಹಮಾಸ್ ಉಗ್ರರ ಮಧ್ಯೆ ಭೀಕರ ಯುದ್ಧ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಉಗ್ರರ ಪೈಶಾಚಿಕ ಕೃತ್ಯ ನಡುಕ ಹುಟ್ಟಿಸುವಂತೆ ಮಾಡುತ್ತಿವೆ.
5 ಸಾವಿರ ರಾಕೆಟ್ ದಾಳಿಯಿಂದ 1,200ಕ್ಕೂ ಅಧಿಕ ಇಸ್ರೇಲಿಗಳನ್ನು ಉಗ್ರರು ಕೊಲೆ ಮಾಡಿದ್ದಾರೆ. ಇನ್ನೂ ಹಲವಾರನ್ನು ಒತ್ತೆಯಾಳಾಗಿಸಿಕೊಂಡಿದ್ದಾರೆ. ಮಹಿಳೆಯರು, ಮಕ್ಕಳನ್ನೂ ನೋಡದೆ ಕೈಗಳಿಗೆ ಕೋಳ ಹಾಕಿ ಗಲ್ಲಿಗೇರಿಸಲಾಗುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಕಿಡಿಕಾರಿದೆ.
ವೀಡಿಯೋನಲ್ಲಿ ಮಾತನಾಡಿರುವ ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯ ವಕ್ತಾರ ಜೊನಾಥನ್ ಕಾನ್ರಿಕಸ್, ಇಸ್ರೇಲ್ನಿಂದ ಅಪಹರಿಸಲಾದ ಶಿಶುಗಳನ್ನು ಹಮಾಸ್ ಉಗ್ರರ ಗುಂಪು ಗಲ್ಲಿಗೇರಿಸುವ ಮೂಲಕ ಅಮಾನುಷ ಕೃತ್ಯಗಳನ್ನು ಕೃತ್ಯ ಎಸಗುತ್ತಿದೆ. ಸಾಕ್ಷ್ಯಗಳೂ ಸಿಕ್ಕಿವೆ. ಗಾಜಾ ಪಟ್ಟಿಯಲ್ಲಿ ಮಹಿಳೆಯರು, ಮಕ್ಕಳನ್ನು ಗಲ್ಲಿಗೇರಿಸುತ್ತಿದ್ದಾರೆ. ಝೊಂಬಿ ವೈರಸ್ ಪೀಡಿತರ ಚಲನಚಿತ್ರ ದೃಶ್ಯಗಳು ಕಂಡು ಬಂದ ರೀತಿಯಲ್ಲಿ ಇಸ್ರೇಲಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ವಿಷಾಧಿಸಿದ್ದಾರೆ.
ಹಮಾಸ್ ಸುರಂಗಗಳು ಮತ್ತು ಬಂಕರ್ಗಳ ಜಾಲವನ್ನೇ ಗಡಿಯಲ್ಲಿ ಹೊಂದಿದ್ದು, ಸುರಂಗ ಜಾಲವನ್ನು ಧ್ವಂಸಗೊಳಿಸಲು ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.