ಟೆಲ್ ಅವಿವ್: ಇಸ್ರೇಲ್-ಪ್ಯಾಲೆಸ್ತೀನ್ (Israel-Palestine) ಮಧ್ಯೆ ನಡೆಯುತ್ತಿರುವ ಯುದ್ಧ ಭೀಕರತೆ ಪಡೆದಿದ್ದು, 10ನೇ ದಿನಕ್ಕೆ ಕಾಲಿಟ್ಟಿದೆ. ಈಗ ಇಸ್ರೇಲ್ ನ ಭೂ ಸೇನೆ ಸಿದ್ಧವಾಗಿದ್ದು, ಸರ್ಕಾರದ ಅನುಮತಿಗೆ ಕಾಯ್ದು ಕುಳಿತಿದೆ.
ಗಾಜಾ ಪಟ್ಟಿ (Gaza Strip) ಹತ್ತಿರ ನೂರಾರು ಟ್ಯಾಂಕರ್, ಲಕ್ಷಾಂತರ ಸೈನಿಕರು ಜಮಾವಣೆಗೊಂಡಿದ್ದಾರೆ. ಗಾಜಾದ ಉತ್ತರದಿಂದ ದಕ್ಷಿಣಕ್ಕೆ ತೆರಳಲು ಜನರಿಗೆ ಇಸ್ರೇಲ್ ಸೇನೆ ಸೂಚನೆ ನೀಡಿದೆ. ವಿದ್ಯುತ್, ನೀರು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಪೂರೈಕೆ ನಿಲ್ಲಿಸಲಾಗಿದ್ದು, ಅನ್ನ-ನೀರಿಲ್ಲದೆ ಹಮಾಸ್ ಸೇನೆ ಪರದಾಡುತ್ತಿದೆ.
ಇಸ್ರೇಲ್-ಪ್ಯಾಲೆಸ್ತೀನ್ ಭೀಕರ ಯುದ್ಧಕ್ಕೆ 20ಕ್ಕೂ ಅಧಿಕ ಅಮೆರಿಕ ಪ್ರಜೆಗಳು ಸಾವನ್ನಪ್ಪಿದ್ದಾರೆ. ಹೀಗಾಗಿ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ವಿಶೇಷ ಹಡುಗನ್ನು ಅಮೆರಿಕ ಕಳುಹಿಸಿದೆ. ಗಾಜಾಪಟ್ಟಿಯ ಮೇಲೆ ಇಸ್ರೇಲ್ ಏರ್ಸ್ಟ್ರೈಕ್ ಮುಂದುವರೆದಿದೆ. ಹೆಣಗಳ ಅಂತ್ಯಕ್ರಿಯೆಗೂ ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಗಿದೆ. ಐಸ್ಕ್ರೀಮ್ ಟ್ರಕ್ಗಳಲ್ಲಿ ಮೃತ ದೇಹಗಳನ್ನು ಸಂಗ್ರಹಿಸಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಡಿಯಲ್ಲಿ ಮಾರಣಹೋಮ ನಡೆಸುತ್ತಿದ್ದ 330ಕ್ಕೂ ಅಧಿಕ ಬಂಡುಕೋರರನ್ನು ಇಸ್ರೇಲ್ ಸೈನಿಕರು ಬಂಧಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ರೈಫಲ್, ಜೀವಂತ ಗುಂಡುಗಳು ವಶಕ್ಕೆ ಪಡೆದ ಫೋಟೋಗಳನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ.