ವ್ಯಕ್ತಿಯೊಬ್ಬರು ವಾಕಿಂಗ್ ಮಾಡುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೃದ್ಧರೊಬ್ಬರು ಕೆಂಗೇರಿ ಉಪನಗರದಲ್ಲಿ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕಾರು ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಆ ವೃದ್ಧ 2 ತಿಂಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 63 ವರ್ಷದ ಸುಬ್ರಮಣಿಯನ್ ಸಾವನ್ನಪ್ಪಿದ ದುರ್ದೈವಿ ಎನ್ನಲಾಗಿದೆ.
ಶಿರ್ಕೆ ಅಪಾರ್ಟ್ಮೆಂಟ್ ಕಡೆಯಿಂದ ನಾಗದೇವನಹಳ್ಳಿ ಕಡೆ ತೆರಳುತ್ತಿದ್ದ ವೇಳೆ ಅವರಿಗೆ ಕಾರು ಡಿಕ್ಕಿ ಹೊಡೆದಿತ್ತು. ಪಾದಚಾರಿ ಸುಬ್ರಮಣಿಯನ್ ತಲೆ, ಬಲಗೈ, ಬಲಗಾಲಿಗೆ ತೀವ್ರ ಪೆಟ್ಟಾಗಿತ್ತು.