ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ
ಟಾಟಾ ಸಫಾರಿ ಹೊಸ ಎಸ್ ಯುವಿ ಭಾರತದಲ್ಲಿ ಬಿಡುಗಡೆ..!
ಟಾಟಾ ಸಫಾರಿ ಹೊಸ ಎಸ್ ಯುವಿ ಭಾರತದಲ್ಲಿ ಬಿಡುಗಡೆ..!
ಟಾಟಾ ಸಫಾರಿಯನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದೆ. ಟಾಟಾ ಮೋಟರ್ಸ್ ಕಂಪನಿಯು ಮಾರುಕಟ್ಟೆಗೆ ಪುನಃ ಬಿಡುಗಡೆ ಮಾಡಿರುವ ಸಫಾರಿ ಎಸ್‌ಯುವಿ ಬೆಲೆಯನ್ನು ಬಹಿರಂಗಪಡಿಸಿದೆ. ಈ ವಾಹನದ ಆರಂಭಿಕ ಮಾದರಿಯ ಎಕ್ಸ್‌ಷೋರೂಂ ಬೆಲೆ 14.69 ಲಕ್ಷ ರೂಪಾಯಿ ಇದೆ. ಟಾಟಾ ಸಫಾರಿ ಅಡ್ವೆಂಚರ್ ಎಡಿಷನ್ ಮಾದರಿಯ ವಾಹನಗಳ ಬೆಲೆಯನ್ನೂ ಕಂಪನಿ ಬಹಿರಂಗಪಡಿಸಿದೆ. ಇದರ ಬೆಲೆ 20.20 ಲಕ್ಷ ರೂಪಾಯಿಂದ. ಆರಂಭವಾಗಿ, 21.45 ಲಕ್ಷ ರೂಪಾಯಿಯವರೆಗೂ ಇದೆ. ಮ್ಯಾನುವಲ್ ಟ್ರಾನ್ಸ್‌ಮಿಷನ್ ಹಾಗೂ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಕಂಪನಿ ನೀಡಿದೆ. ಆಸಕ್ತ ಖರೀದಿದಾರರು 30,000 ರೂಪಾಯಿ ಪಾವತಿಸಿ ಹೊಸ ಸಫಾರಿ ಬುಕ್ ಮಾಡಬಹುದು.
ಆನ್ ಲೈನ್ ಗೇಮಿಂಗ್ ಪ್ರಿಯರಿಗೆ ಗುಡ್ ನ್ಯೂಸ್ : ‘ಕಾಲ್ ಆಫ್ ಡ್ಯೂಟಿ’ ಲಾಂಚ್ ..!
ಆನ್ ಲೈನ್ ಗೇಮಿಂಗ್ ಪ್ರಿಯರಿಗೆ ಗುಡ್ ನ್ಯೂಸ್ : ‘ಕಾಲ್ ಆಫ್ ಡ್ಯೂಟಿ’ ಲಾಂಚ್ ..!
ಆನ್ ಲೈನ್ ಗೇಮಿಂಗ್ ಪ್ರಿಯರು ಹೊಸ ಹೊಸ ಆನ್ ಲೈನ್ ಗೇಮ್ಸ ಗಳ ಹುಡುಕಾಟದಲ್ಲಿ ಇರುತ್ತಾರೆ. ಅಂತಹವರಿಗಾಗಿಗೇ ಇದೀಗ ಹೊಸದೊಂದು ಆನ್ ಲೈನ್ ಗೇಮ್ ರೆಡಿಯಾಗಿದ್ದು, ಶೀಘ್ರದಲ್ಲೇ ಲಾಂಚ್ ಆಗಲಿದೆ. ಹೋಮ್ ಸ್ಟ್ರೆಚ್ ಫ್ಯೂಚರ್ ಇವೆಂಟ್ ಎಂಬ ಕಂಪನಿ ‘ಕಾಲ್ ಆಫ್ ಡ್ಯೂಟಿ’ ಎಂಬ ಮೊಬೈಲ್ ಗೇಮ್ ಅಪ್ಡೇಟೆಡ್ ವರ್ಷನ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಹೋಮ್ ಸ್ಟ್ರೆಚ್ ಫ್ಯೂಚರ್ ಇವೆಂಟ್ ಕಂಪನಿ ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದು, ಶೂಟಿಂಗ್ ರೂಂನ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದೆ.
ಬಳಕೆದಾರರಿಗೆ ಪ್ರೈವೆಸಿ ನೀತಿ ಸ್ವೀಕರಿಸಲು ಡೆಡ್ ಲೈನ್ ಕೊಟ್ಟ ವಾಟ್ಸಾಪ್..!
ಬಳಕೆದಾರರಿಗೆ ಪ್ರೈವೆಸಿ ನೀತಿ ಸ್ವೀಕರಿಸಲು ಡೆಡ್ ಲೈನ್ ಕೊಟ್ಟ ವಾಟ್ಸಾಪ್..!
ವಾಟ್ಸಾಪ್ ತನ್ನ ಪ್ರೈವೆಸಿ ಪಾಲಿಸಿ ನೀತಿಯನ್ನ ಒಪ್ಪಿಕೊಳ್ಳಲು ಬಳಕೆದಾರರಿಗೆ ಹೊಸ ಗಡುವು ನೀಡಿದೆ. ವಾಟ್ಸಾಪ್ ನ ಪರಿಷ್ಕೃತ ಗೌಪ್ಯತಾ ನೀತಿಯನ್ನ ಸ್ವೀಕರಿಸಲು ಮೇ 15 ಕೊನೆಯ ದಿನಾಂಕವಾಗಿದೆ. ಒಂದುವೇಳೆ ಹೊಸ ನೀತಿಯನ್ನ ಸ್ವೀಕರಿಸದಿದ್ದರೆ, ವಾಟ್ಸಾಪ್ ನಲ್ಲಿ ಸಂದೇಶಗಳನ್ನ ಕಳುಹಿಸಲು ಸಾಧ್ಯವಾಗುವುದಿಲ್ಲ. ವಾಟ್ಸಾಪ್ ನ ಎಲ್ಲಾ ವೈಶಿಷ್ಟ್ಯಗಳನ್ನ ಪಡೆಯಬೇಕೆಂದರೆ ಮೇ 15ರೊಳಗೆ ಹೊಸ ನಿಯಮಗಳನ್ನ ಒಪ್ಪಿಕೊಳ್ಳಲೇಬೇಕೆಂದು ವಾಟ್ಸಾಪ್ ಬಳಕೆದಾರರಿಗೆ ತಿಳಿಸಿದೆ.
ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಕಾಯ್ದೆ: ರಾಮ್ ಮಾಧವ
ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಕಾಯ್ದೆ: ರಾಮ್ ಮಾಧವ
ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಸಂಬಂಧ ಕಾನೂನು ರಚಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ರಾಮ್ ಮಾಧವ ಹೇಳಿದ್ದಾರೆ. ಸರ್ಕಾರವನ್ನು ಉರುಳಿಸಿ, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಸಾಮಾಜಿಕ ಮಾಧ್ಯಮಗಳು ಹೊಂದಿವೆ. ಇವು ಒಡ್ಡಿರುವ ಸವಾಲುಗಳಿಗೆ ಸಾಂವಿಧಾನಿಕ ಚೌಕಟ್ಟಿನಲ್ಲಿಯೇ ಪರಿಹಾರ ಕಂಡುಹಿಡಿಯಬೇಕು ಎಂದೂ ಅವರು ಹೇಳಿದರು. ಈ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಮೂಗುದಾರ ಹಾಕಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ವಾಟ್ಸಾಪ್ ಗೆ ಟಕ್ಕರ್ ಕೊಡಲು ಬರುತ್ತಿದೆ ಮೇಡ್ ಇನ್ ಇಂಡಿಯಾ ‘ವಾಟ್ಸಾಪ್’..!
ವಾಟ್ಸಾಪ್ ಗೆ ಟಕ್ಕರ್ ಕೊಡಲು ಬರುತ್ತಿದೆ ಮೇಡ್ ಇನ್ ಇಂಡಿಯಾ ‘ವಾಟ್ಸಾಪ್’..!
ವಾಟ್ಸಾಪ್ ನ ಪ್ರೈವಸಿ ಪಾಲಿಸಿ ಬಗ್ಗೆ ವಿವಾದ ಭುಗಿಲೆದ್ದಿರೋ ಬೆನ್ನಲ್ಲೇ ಜನರಿಗೆ ವಾಟ್ಸಾಪ್ ಮೇಲಿನ ಆಸಕ್ತಿಯೂ ಕಡಿಮೆಯಾಗುತ್ತಿರುವಂತೆ ಕಾಣುತ್ತಿದೆ. ಹೀಗಿರೋವಾಗಲೇ ಭಾರತ ಕೇಂದ್ರ ಸರ್ಕಾರ ವಾಟ್ಸಾಪ್ ರೀತಿಯಲ್ಲಿ ತನ್ನದೇ ಆದ ಮೆಸೇಂಜಿಂಗ್ ಅಪ್ಲಿಕೇಷನ್ ಅನ್ನ ಅಭಿವೃದ್ಧಿಪಡಿಸಿದೆ. ( ಆತ್ಮನಿರ್ಭರ) ಯೋಜನೆಯಡಿ ಭಾರತದಲ್ಲೂ ವಾಟ್ಸಾಪ್ ಮಾದರಿಯಲ್ಲೇ ತಯಾರಿಗಿರುವ ಮೇಡ್ ಇನ್ ಇಂಡಿಯಾ ಸಂದೇಶ್ ಆಪ್. ಈ ಅಪ್ಲಿಕೇಶನ್ ಅನ್ನ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (NIC) ಅಭಿವೃದ್ಧಿಪಡಿಸಿದೆ.
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ