ನೂಕುನುಗ್ಗಲಿನಿಂದಾಗಿ ಪ್ರಯಾಣಿಕರೊಬ್ಬರು ರೈಲಿನಡಿ ಸಿಲುಕಿ, ಜನರು ರೈಲನ್ನೇ ತಳ್ಳಿರುವ ಘಟನೆ ನಡೆದಿದೆ.
ಮುಂಬೈನ ವಾಶಿ ರೈಲು ನಿಲ್ದಾಣ(Railway Station)ದಲ್ಲಿ ಈ ಘಟನೆ ನಡೆದಿದೆ. ರೈಲು ನಿಲ್ದಾಣದಲ್ಲಿ ಸಾಕಷ್ಟು ಜನರು ರೈಲಿಗಾಗಿ ಕಾಯುತ್ತಿದ್ದರು. ರೈಲು ಬರುತ್ತಿದ್ದಂತೆ ನೂಕುನುಗ್ಗಲು ಉಂಟಾಗಿದೆ. ಆಗ ಪ್ರಯಾಣಿಕರೊಬ್ಬರು ರೈಲಿನಡಿ ಸಿಲುಕಿದ್ದಾರೆ. ಕೂಡಲೇ ಇನ್ನುಳಿದ ಪ್ರಯಾಣಿಕರು ಆತನ ಜೀವ ಉಳಿಸಿದ್ದಾರೆ. ರೈಲನ್ನೇ ತಳ್ಳಿ ಪ್ರಯಾಣಿಕನ ಜೀವನ ಉಳಿಸಿದ್ದಾರೆ. ರೈಲನ್ನು ತಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾಣಾಪಾಯದಿಂದ ಪ್ರಯಾಣಿಕ ಪಾರಾಗಿದ್ದಾನೆ.