ರೋಮ್: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ತಮ್ಮ ಪತಿ ಆಂಡ್ರಿಯಾ ಗಿಯಾಂಬ್ರುನೊಯಿಂದ ದೂರವಾಗುವುದಾಗಿ ಹೇಳಿದ್ದಾರೆ.
10 ವರ್ಷಗಳ ಸಂಬಂಧವನ್ನು ಕೊನೆಗೊಳಿಸುತ್ತಿರುವುದಾಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ. ಮೆಲೋನಿ ಪತಿ ಆಂಡ್ರಿಯಾ ಗಿಯಾಂಬ್ರುನೊ (Andrea Giambruno) ಟಿವಿ ಪತ್ರಕರ್ತನಾಗಿದ್ದು, ಇತ್ತೀಚೆಗೆ ಟಿವಿ ಲೈವ್ ನಲ್ಲಿಯೇ ಲೈಂಗಿಕ (ಸೆಕ್ಸಿಯೆಷ್ಟ್) ಕಾಮೆಂಟ್ (TV Comments) ಮಾಡಿ ವ್ಯಾಪಕ ಟೀಕೆಗೆ ಒಳಗಾಗಿದ್ದರು.
ನಿರೂಪಕನಾಗಿ ಆಂಡ್ರಿಯಾ ಗಿಯಾಂಬ್ರುನೊ ಕೆಲಸ ಮಾಡುತ್ತಿದ್ದರು. ಮೆಲೋನಿ ಪತಿ ಜಿಯಾಂಬ್ರುನೋ ಸುದ್ದಿ ಪ್ರಸಾರದ ವೇಳೆ ಅಸಭ್ಯ ಭಾಷೆ ಬಳಸುತ್ತಿರುವ ವೀಡಿಯೋ ಪ್ರಸಾರ ಮಾಡಲಾಗಿತ್ತು. ಪ್ರಸಾರದ ವೇಳೆ ಅವರು ಮಹಿಳಾ ಸಹೋದ್ಯೋಗಿಯ ಜೊತೆ ಫ್ಲರ್ಟ್ ಕೂಡ ಮಾಡುತ್ತಿದ್ದರು ಎನ್ನಲಾಗಿದೆ.
ರೆಕಾರ್ಡಿಂಗ್ನಲ್ಲಿ, ಜಿಯಾಂಬ್ರುನೋ ಅವರು ತಾನು ಹೊಂದಿರುವ ಅಫೇರ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇದಕ್ಕೂ ಮೊದಲು ಆಗಸ್ಟ್ನಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ನಿಂದಿಸುತ್ತಿರುವ ಕಾಮೆಂಟ್ಗಳ ಕಾರಣಕ್ಕೂ ಈ ಪತ್ರಕರ್ತ ವ್ಯಾಪಕ ಟೀಕೆಗೆ ಒಳಗಾಗಿದ್ದ.