ಬೆಂಗಳೂರು ಗ್ರಾಮಾಂತರ: ವೃದ್ಧೆಯ ಚೈನ್ ಕದ್ದು ಪರಾರಿಯಾಗಿದ್ದ ಸಾಪ್ಟವೇರ್ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರೀಧರ್ ಎಂಬಾತ ತಾನೇ ಇದ್ದ ಅಪಾರ್ಟ್ಮೆಂಟ್ ನಲ್ಲಿಯೇ ಅನ್ನಪೂರ್ಣಮ್ಮ ಎಂಬುವವರ ಚೈನ್ ಕದ್ದು ಪರಾರಿಯಾಗಿದ್ದ. ವೃದ್ಧೆಯ ಮನೆ ಬಳಿ ಅಪರಿಚಿತನಂತೆ ನೀರು ಕೇಳಲು ಬಂದಿದ್ದ ಆರೋಪಿ, 80 ಗ್ರಾಂ ತೂಕದ ಸರ ಕದ್ದು, ವೃದ್ಧೆಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ.
ವೃದ್ದೆ ರಕ್ತದ ಮಡುವಿನಲ್ಲಿ ಒದ್ದಾಡಿ ಕುಸಿದು ಬಿದ್ದಿದ್ದರು. ಮನೆಗೆ ಬಂದಿದ್ದ ಗಂಡ ಆಕೆಯನ್ನು ಆಸ್ವತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರು. ಈ ಪ್ರಕರಣವನ್ನು ಹೊಸಕೋಟೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಧರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸಾಲ ಬಾಧೆಯಿಂದ ಬಳಲುತ್ತಿದ್ದ ಶ್ರೀಧರ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈಗ ಮಾಡಿದ ತಪ್ಪಿಗೆ ಪರಪ್ಪನ ಅಗ್ರಹಾರ ಸೇರಿದ್ದಾನೆ.








