ಯುವಕನೊಬ್ಬ 16 ವರ್ಷದ ಅಪ್ರಾಪ್ತ ಸೋದರತ್ತೆಯೊಂದಿಗೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ.
ತನ್ನ ತಂದೆಯ 16 ವರ್ಷದ ತಂಗಿ ಅಂದರೆ ಸೋದರತ್ತೆಯೊಂದಿಗೆ ಓಡಿ ಹೋಗಿದ್ದಾನೆ. ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಅಪಹರಿಸಿದ ಯುವಕ ಅಜಯ್ ಗೆ ಏ. 21ರಂದು ವಿವಾಹವಾಗಬೇಕಿತ್ತು. ಆದರೆ ಅದಕ್ಕೂ ಮೊದಲೇ ತನ್ನ 16 ವರ್ಷದ ಸೋದರ ಅತ್ತೆಯೊಂದಿಗೆ ಆತ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಯುವಕ ತನ್ನ ಅಪ್ರಾಪ್ತ ವಯಸ್ಸಿನ ಸೋದರ ಅತ್ತೆಯನ್ನು ಅಪಹರಿಸಿದ್ದಾನೆ. ಯುವಕನ ಮನೆಯವರನ್ನು ಸಂಪರ್ಕಿಸಿದಾಗ ಬಾಲಕಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ. ತನ್ನ ಮದುವೆಗೂ ಮೊದಲೇ ಆರೋಪಿ ಯುವಕ ಈ ಕಾರ್ಯ ಮಾಡಿದ್ದಾನೆ. ತನ್ನ ಮೂವರು ಸ್ನೇಹಿತರೊಂದಿಗೆ ತಮ್ಮ ಮನೆಗೆ ಬಂದು ಬೆದರಿಗೆ ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.