ಬೆಂಗಳೂರು : ರಾಜ್ಯದಲ್ಲಿ ದಿನ ದಿಂದ ದಿನಕ್ಕೆ ಕೊರೊನಾ ಸೋಂಕಿ ಪ್ರಮಾಣ ಹೆಚ್ಚಾಗುತ್ತಿದೆ. ಕೊರೊನಾ ನಿಯಂತ್ರಣವುದಕ್ಕೆ ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ಹಾಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಜೊತೆಗೆ ಮತ್ತೊಂದ ಮಹತ್ವದ ಯೋಜನೆಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ ತಯಾರಿ ಮಾಡುತ್ತಿದೆ ಎಂದು ಹೇಳಾಗುತ್ತಿದೆ.
ರಾಜ್ಯದಲ್ಲಿ ಕೊರೊನಾ ಹೆಚ್ಚಾಗಲು ಕಾರಣ ಹೊರ ರಾಜ್ಯಗಳಿಂದ ಬಂದವರು ಎಂದು ಬಹುತೇಕ ಸಚಿವರು ಹೇಳಿದ್ದಾರೆ. ಬೇರೆ ರಾಜ್ಯಗಳಿಂದ ಸಾಕಷ್ಟು ಜನ ಬಂದಿದ್ದಾರೆ. ಆದ್ದರಿಂದ ಕೊರೊನಾ ನಿಯಂತ್ರಣಕ್ಕೆ ಬಾರದೆ ಹೆಚ್ಚು ವ್ಯಾಪಿಸುತ್ತಿದೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಹೊರ ರಾಜ್ಯಗಳಿಂದ ಬರುವವರಿಗೆ ಬ್ರೇಕ್ ಹಾಕಲು ಪ್ಲ್ಯಾನ್ ಮಾಡುತ್ತಿದೆ ಎಂಬ ಮಾತುಗಲು ಕೇಳಿ ಬಂದಿವೆ.
ಮಹರಾಷ್ಟ್ರ, ಕೇರಳ, ತಮಿಳುನಾಡು, ನವದೆಹಲಿ, ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಜನ ವಾಪಾಸ್ ಆಗಿದ್ದಾರೆ. ಆದರೆ ಸರ್ಕಾರ ಲಾಕ್ ಡೌನ್ ಸಡಿಲಗೊಂಡ ಬಳಿಕ ಕ್ವಾರಂಟೈನ್ ನಿಯಮ ಬದಲಿಸಿತ್ತು. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದವು. ಇದೀಗ ಸರ್ಕಾರ ತನ್ನ ತಪ್ಪನ್ನು ಸರಿದೂಗಿಸಲು ಬೇರೆ ರಾಜ್ಯಗಳಿಂದ ಬರುವವರಿಗೆ ನಿರ್ಬಂಧ ವಿಧಿಸಲು ಮುಂದಾಗುತ್ತಿದೆ ಎನ್ನಲಾಗಿದೆ. ಅದರ ಜೊತೆಗೆ ಕೊರೊನಾ ಹೆಚ್ಚಾದ ಕಾರಣಕ್ಕೆ ಮತ್ತೆ ಕ್ವಾರಂಟೈನ್ ನಿಯಮ ಬದಲಿಸಿ 14 ಕ್ವಾರಂಟೈನ್ ನಲ್ಲಿರಬೇಕು ಎಂದು ಹೇಳಿದೆ.
ಪ್ರಾರಂಭದಲ್ಲಿ ರಾಜ್ಯದಲ್ಲಿ 14 ಕ್ವಾರಂಟೈನ್ ನಿಯಮ ಜಾರಿಯಲ್ಲಿತ್ತು. ಇದನ್ನು ಬದಲಿ ರಾಜ್ಯ ಸರ್ಕಾರ ತಪ್ಪು ಮಾಡಿತ್ತು. ಪರಿಸ್ಥಿತಿ ಕೈ ಮೀರಿದ ಮೇಲೆ ಈಗ ಮತ್ತೆ 14 ದಿನ ಕ್ವಾರಂಟೈನ್ ಎಂದು ಹೇಳುತ್ತಿದೆ.
ಇದರ ಜೊತೆಗೆ ಅಂತರರಾಜ್ಯ ಬಸ್ ಸಂಚಾರ ಪ್ರಾರಂಭವಾದ ಮೇಲೆ ಯಾರು ಎಲ್ಲಿ ಹೋಗಿ ಬಂದವರು, ಎಲ್ಲಿಂದ ಬಂದರು ಎಂಬ ಮಾಹಿತಿ ಪಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ತನ್ನ ತಪ್ಪುಗಳನ್ನು ಸರಿದೂಗಿಸಿಕೊಳ್ಳಲು ಮತ್ತೆ ಅಂತರ ರಾಜ್ಯದಿಂದ ಬರುವವರಿಗೆ ನಿರ್ಬಂಧ ಹಾಕಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಹಾಗಾಗಿ ಗಡಿ ಜಿಲ್ಲೆಗಳಲ್ಲಿ, ರಾಜ್ಯದ ಗಡಿ ವಿಭಾಗದಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ಭದ್ರತೆ ಹೆಚ್ಚು ಮಾಡಿದೆ. ವಿಶೇಷವಾಗಿ ಮಹರಾಷ್ಟ್ರದಿಂದ ಬರುವರವ ಮೇಲೆ ಹೆಚ್ಚು ನಿಗಾ ಇಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.