ತೆಲುಗು (Telugu) ಚಿತ್ರರಂಗದ ಹಿರಿಯ ನಟ ಚಂದ್ರ ಮೋಹನ್ (Chandra Mohan) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
82ರ ವಯಸ್ಸಿನ ಹಿರಿಯ ನಟ ಚಂದ್ರಮೋಹನ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ತೆಲುಗು ಚಿತ್ರೋದ್ಯಮದಲ್ಲಿ ದಾಖಲೆ ಎನ್ನುವಷ್ಟು ಸಿನಿಮಾಗಳಲ್ಲಿ ಚಂದ್ರ ಮೋಹನ್ ನಟಿಸಿದ್ದಾರೆ. ಇಲ್ಲಿಯವರೆಗೂ ಅವರು ಬರೋಬ್ಬರಿ 900ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1966ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅವರು, ರಂಗುಲ ರತ್ನಂ ಚಿತ್ರದಿಂದ ತಮ್ಮ ಪಯಣ ಆರಂಭಿಸಿದ್ದರು. ನೂರಾರು ಸಿನಿಮಾಗಳಲ್ಲಿ ನಾಯಕರಾಗಿ, ಅನೇಕ ಚಿತ್ರಗಳಲ್ಲಿ ಸಹ ನಟರಾಗಿ ಕೆಲಸ ಮಾಡಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ಹೆಚ್ಚಾಗಿ ಅಭಿಮಾನಿಗಳನ್ನು ಅವರು ರಂಜಿಸಿದ್ದಾರೆ. ಹಿರಿಯ ನಟರ ನಿಧನಕ್ಕೆ ಇಡೀ ಚಿತ್ರ ರಂಗವೇ ಕಂಬನಿ ಮಿಡಿದಿದೆ.