ಬೆಂಗಳೂರು: ಪಿಎಸ್ ಐ ಪತ್ನಿಯೊಬ್ಬರ ಪತ್ನಿಯು ತನ್ನ ತವರು ಮನೆಗೆ ಹಣ ಕಳುಹಿಸಿ, ದರೋಡೆಯಾಗಿದೆ ಎಂದು ನಾಟಕವಾಡಿ ಈಗ ಸಿಕ್ಕಿ ಹಾಕಿಕೊಂಡಿದ್ದಾರೆ.
ಬೆಂಗಳೂರಿನ ಅಶೋಕನಗರ ಠಾಣಾ ಪಿಎಸ್ ಐ ಆಗಿರುವ ಪುಟ್ಟಸ್ವಾಮಿ ಮನೆಯಲ್ಲಿ 12 ಲಕ್ಷ ರೂ. ಹಣ ಹಾಗೂ ಚಿನ್ನಾಭರಣ ರಾಬರಿ ಆಗಿದೆ ಎಂದು ಜು.11 ರಂದು ದೂರು ಬಂದಿತ್ತು. ಪುಟ್ಟಸ್ವಾಮಿ ಪತ್ನಿ ಹಾಗೂ ಪತ್ನಿ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು.
ಪೊಲೀಸರು ಅಡಿಷನಲ್ ಕಮಿಷನರ್ ನೇತೃತ್ವದಲ್ಲಿ ಹಲವು ದಿನಗಳ ಕಾಲ ಈ ಪ್ರಕರಣದ ಕುರಿತು ತನಿಖೆ ನಡೆಸಲಾಗಿತ್ತು. ಆನಂತರ ಸುಳ್ಳು ರಾಬರಿ ಪ್ರಕರಣ ಎಂದು ವರದಿ ನೀಡಿದ್ದಾರೆ. ಪಿಎಸ್ ಐ ಪತ್ನಿ ಹಣ ಮತ್ತು ಚಿನ್ನಾಭರಣವನ್ನು ತವರು ಮನೆಗೆ ನೀಡಿ, ಗಂಡನಿಂದ ವಿಷಯ ಮರೆಮಾಚಲು ಈ ರೀತಿ ರಾಬರಿ ಕತೆ ಕಟ್ಟಿದ್ದರು ಎಂದು ತಿಳಿದು ಬಂದಿದೆ.
ಸುಳ್ಳು ದೂರು ನೀಡಿದ ಪಿಎಸ್ ಐ ಪತ್ನಿ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ., ಪಿಎಸ್‌ಐ ಮೇಲೂ ಶಿಸ್ತು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೀಗೆ ಸುಳ್ಳು ಕಥೆ ಕಟ್ಟಿ ಹಣ ದರೋಡೆ ನಾಟವಾಡಿದ ಪೊಲೀಸಪ್ಪನ ಕುಟುಂಬದ ಮೇಲೆ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಸಿದ್ಧವಾಗಿದೆ.








