ಬೆಂಗಳೂರು: ಪತಿಗೆ ಪತ್ನಿಯೇ ಚಾಕು ಹಾಕಿ ಕೊಲೆ ಮಾಡಿರುವ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಉಮೇಶ್ ದಾಮಿ (27) ಕೊಲೆಯಾದ ದುರ್ದೈವ ಪತಿಯಾಗಿದ್ದು, ಪತ್ನಿ ಮನಿಷಾ ದಾಮಿ ಕೊಲೆ ಮಾಡಿದ್ದಾಳೆ. ಈ ಘಟನೆ ಹುಳಿಮಾವು (Hulimavu) ಹತ್ತಿರದ ಕಾಲೇಜಿನಲ್ಲಿ ನಡೆದಿದೆ.
ಈ ದಂಪತಿ ಕಾಲೇಜೊಂದರಲ್ಲಿ ಸೆಕ್ಯುರಿಟಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಉಮೇಶ್ ರಾತ್ರಿ ಗೆಳೆಯನೊಂದಿಗೆ ಎಣ್ಣೆ ಪಾರ್ಟಿಗೆ ಹೋಗಿ, ತಡವಾಗಿ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಮನಿಷಾ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಪತಿ ಪ್ರಶ್ನಿಸಿದ್ದಾನೆ.
ಈ ಜಗಳ ವಿಕೋಪಕ್ಕೆ ತೆರಳಿದೆ. ಆಗ ಮನಿಷಾ, ಚಾಕುವಿನಿಂದ ಉಮೇಶ್ ದಾಮಿಗೆ ಇರಿದಿದ್ದಾಳೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಉಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಕೈಗೊಂಡಿದ್ದಾರೆ.