ವಾಷಿಂಗ್ಟನ್: ಅಮೆರಿಕದಲ್ಲಿ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಭಾರತೀಯ ಮೂಲದ ವಿದ್ಯಾರ್ಥಿ (Indian Student) ವರುಣ್ ರಾಜ್ ಪುಚಾ (24) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವ್ಯಾಸಂಗ ಮಾಡುತ್ತಿದ್ದ ವಿಶ್ವವಿದ್ಯಾಲಯ ತಿಳಿಸಿದೆ.
ವಾಲ್ಪಾರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವರುಣ್ (Varun Raj Pucha) ಅವರು ಜಿಮ್ನಲ್ಲಿದ್ದಾಗ ದುಷ್ಕರ್ಮಿ ಜೋರ್ಡಾನ್ ಆಂಡ್ರೇಡ್ (24) ಎಂಬ ದುಷ್ಕರ್ಮಿ ದಾಳಿ ನಡೆಸಿ, ಆತನ ತಲೆಗೆ ಚಾಕುವಿನಿಂದ ಇರಿದಿದ್ದ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ ಖಮ್ಮಂ ಮೂಲದ ವರುಣ್ 2022ರಲ್ಲಿ ಅಮೆರಿಕಕ್ಕೆ ತೆರಳಿ ಕಂಪ್ಯೂಟರ್ ಸೈನ್ಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಮುಂದಿನ ವರ್ಷ ಆತನ ಕೋರ್ಸ್ ಮುಗಿಯುತ್ತಿದ್ದಂತೆ ಆತ ಮರಳಿ ಸ್ವದಶಕ್ಕೆ ಬರುವ ನಿರೀಕ್ಷೆಯಲ್ಲಿದ್ದ. ಈ ಘಟನೆಗೆ ಇಡೀ ವಿಶ್ವ ವಿದ್ಯಾಲಯವೇ ಆಘಾತ ವ್ಯಕ್ತಪಡಿಸಿದೆ.