ತೂಗುಯ್ಯಾಲೆಯಲ್ಲಿದೆ ಕೆ.ಎಲ್. ರಾಹುಲ್ ಭವಿಷ್ಯ…!

1 min read

ತೂಗುಯ್ಯಾಲೆಯಲ್ಲಿದೆ ಕೆ.ಎಲ್. ರಾಹುಲ್ ಭವಿಷ್ಯ…!

there is a question about the classy K L Rahul’s presence in the playing XI.

klrahul team india1,0,0, 14.. ಇದು ಇಂಗ್ಲೆಂಡ್ ವಿರುದ್ಧದ ನಾಲ್ಕು ಟಿ-ಟ್ವೆಂಟಿ ಪಂದ್ಯಗಳಲ್ಲಿ ಕೆ.ಎಲ್. ರಾಹುಲ್ ಗಳಿಸಿರುವ ರನ್ ಗಳು..
ಒಂದು ಕೆಟ್ಟ ಸರಣಿ, ಕೆಟ್ಟ ಫಾರ್ಮ್.. ಬ್ಯಾಡ್ ಟೈಮ್.. ಅಷ್ಟೇ.. ಕೆ.ಎಲ್. ರಾಹುಲ್ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದೀಗ ಏಕದಿನ ಸರಣಿಯಲ್ಲೂ ಹನ್ನೊಂದರ ಬಳಗದಿಂದ ಹೊರಗುಳಿಯಲಿದ್ದಾರೆ. ವಿರಾಟ್ ಕೊಹ್ಲಿಯ ಪ್ರಕಾರ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಜೊತೆ ಶಿಖರ್ ಧವನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಒಂದು ವೇಳೆ ಶಿಖರ್ ಧವನ್ ಕ್ಲಿಕ್ ಆದ್ರೆ ರಾಹುಲ್ ಇನಿಂಗ್ಸ್ ಆರಂಭಿಸುವ ಕನಸು ಕೂಡ ಭಗ್ನಗೊಳ್ಳಲಿದೆ.
ಇನ್ನು ಮಧ್ಯಮ ಕ್ರಮಾಂಕದಲ್ಲೂ ಅವಕಾಶವಿದೆಯಾ ಅನ್ನೋ ಪ್ರಶ್ನೆಗೆ ಅಲ್ಲೂ ಕೂಡ ಗ್ಯಾರಂಟಿ ಇಲ್ಲ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಫಿಕ್ಸ್ ಆಗಿಬಿಟ್ಟಿದ್ದಾರೆ.

there is a question about the classy K L Rahul’s presence in the playing XI.
ಕಳೆದ ವರ್ಷ ರಾಹುಲ್ ಬ್ಯಾಟಿಂಗ್ ಜೊತೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಯಾಕಂದ್ರೆ ರಿಷಬ್ ಪಂತ್ ಕೀಪಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅಷ್ಟಕ್ಕಷ್ಟೇ ಇದ್ರು. ಆದ್ರೆ ಕಳೆದ ಆಸ್ಟ್ರೇಲಿಯಾ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಪಂತ್ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ ತನ್ನ ಸ್ಥಾನವನ್ನು ತಕ್ಕಮಟ್ಟಿಗೆ ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ರಾಹುಲ್ ಗೆ ಹೆಚ್ಚುವರಿ ವಿಕೆಟ್ ಕೀಪಿಂಗ್ ಜವಾಬ್ದಾರಿಯ ಅವಕಾಶವೂ ಕೈತಪ್ಪಿಹೋಗಿದೆ.
kl rahul team india saakshatvಹಾಗಂತ ಕೆ.ಎಲ್. ರಾಹುಲ್ ಅವರನ್ನು ಪೂರ್ತಿಯಾಗಿ ಕಡೆಗಣನೆ ಮಾಡುವ ಹಾಗಿಲ್ಲ. ಕ್ಲಾಸ್ ಮತ್ತು ಮಾಸ್ ಆಟಗಾರರನಾಗಿರುವ ರಾಹುಲ್ ಫಾರ್ಮ್‍ಗೆ ಬರಲು ಒಂದೇ ಒಂದು ಇನಿಂಗ್ಸ್ ಸಾಕು. ಆದ್ರೆ ಸದ್ಯಕ್ಕಂತೂ ಅವಕಾಶವಿಲ್ಲ. ಏನಿದ್ರೂ ಮುಂದಿನ ಐಪಿಎಲ್.
ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿರುವ ಕೆ.ಎಲ್. ರಾಹುಲ್ ಕಳೆದ ಐಪಿಎಲ್ ನಲ್ಲಿ ನೀಡಿರುವ ಪ್ರದರ್ಶನ ನೀಡಿದ್ರೆ ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನಪಡೆದುಕೊಳ್ಳಬಹುದು. ಆದ್ರೆ ಕಳಪೆ ಫಾರ್ಮ್ ಮುಂದುವರಿದ್ರೆ ರಾಹುಲ್ ಭವಿಷ್ಯ ಮುಳ್ಳಿನ ಹಾದಿಯಲ್ಲಿ ಸಾಗಲಿದೆ.
ಮುಖ್ಯವಾಗಿ ಕೆ.ಎಲ್. ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಟಿ-ಟ್ವೆಂಟಿ ಸರಣಿಯ ವೇಳೆ ಗಾಯಕ್ಕೆ ಬಲಿಯಾಗಿದ್ದರು. ಆ ನಂತರ ಚೇತರಿಸಿಕೊಂಡ್ರೂ ಅವರಿಗೆ ಟೆಸ್ಟ್ ಸರಣಿಗಳಲ್ಲಿ ಅವಕಾಶ ಸಿಗಲಿಲ್ಲ. ಬಳಿಕ ಟಿ-ಟ್ವೆಂಟಿ ಸರಣಿಯಲ್ಲಿ ನಾಲ್ಕು ಅವಕಾಶ ನೀಡಿದ್ರೂ ಸರಿಯಾಗಿ ಬಳಸಿಕೊಳ್ಳಲಿಲ್ಲ.
ಒಟ್ಟನಲ್ಲಿ ಕೆ.ಎಲ್. ರಾಹುಲ್ ಟೀಮ್ ಇಂಡಿಯಾದ ಅಪತ್ಭಾಂದವನಾಗಿದ್ದರು. ಇದೀಗ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಲು ಒದ್ದಾಟ ನಡೆಸುತ್ತಿದ್ದಾರೆ. ಏನೇ ಆಗ್ಲಿ ಎಲ್ಲರಿಗೂ ಗುಡ್ ಟೈಮ್ ಬ್ಯಾಡ್ ಟೈಮ್ ಅಂತ ಇದ್ದೇ ಇರುತ್ತೆ. ಇದೀಗ ರಾಹುಲ್ ಗೆ ಬ್ಯಾಡ್ ಟೈಮ್. ಮುಂದೆ ಗುಡ್ ಟೈಮ್ ಬರಬಹುದು.

#k.l.rahul #teamindia #saakshatv #rainewz #viratkohli #sports #cricket #bcci #karnataka #bengaluru #mangaluru

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd